ಹಾಸನಾಂಬೆ ದರ್ಶನಕ್ಕೆ ಯಾವ ಅಡಚಣೆ ಆಗದಂತೆ ಸಕಲ ಸಿದ್ಧತೆ: ಡಿಸಿ ಸತ್ಯಭಾಮ
ಹಾಸನ : ಪ್ರತಿ ವರ್ಷದಂತೆ ಈವರ್ಷವೂ ಹಾಸನಾಂಬೆ ದೇವಿಯ ಗರ್ಭಗುಡಿಯ ಬಾಗಿಲು ತೆಗೆದು ಭಕ್ತರಿಗೆ ದರ್ಶನದ ಅವಕಾಶ ಕಲ್ಪಿಸಿಕೊಡಲಾಗುವುದು. ದರ್ಶನಕ್ಕೆ ಯಾವ ಅಡಚಣೆಯಾಗದಂತೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಭಕ್ತರಿಗೆ ಯಾವ ತೊಂದರೆ ಆಗದಂತೆ ಈ ವೇಳೆ ಯಾರೆ ಗಣ್ಯರು ಬಂದರೂ ಅವರು ದೇವಿ ದರ್ಶನವನ್ನು 2 ನಿಮಿಷದೊಳಗೆ ಮುಗಿಸಬೇಕು. ಹೆಚ್ಚು ಎಂದರೇ 5 ನಿಮಿಷ ಕೊಡಲಾಗುವುದು. ಎಂದು
ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ ಅವರ ಅಧ್ಯಕ್ಷತೆಯಲ್ಲಿ ನಡೆದ ಹಾಸನಂಬ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಮಾತನಾಡಿ, ಹಾಸನಾಂಬೆಯ ಸುಗಮ ದರ್ಶನಕ್ಕೆ ಜಿಲ್ಲಾಡಳಿತದಿಂದ ನಾವುಗಳು ಪ್ಲಾನ್ ಮಾಡಲಾಗಿದ್ದು, ಅದರಂತೆ ನಡೆದರೇ ನಾವು ಹೆಮ್ಮೆಪಡುತ್ತೇವೆ. ಏನಾದರೂ ವ್ಯತ್ಯಾಸವಾದರೇ ಯಾರೋ ಮಂತ್ರಿಗಳು, ಹೈಕೋರ್ಟ್ ನ್ಯಾಯಾಧೀಶರು ಬಂದಾಗ ದೇವಾಲಯದ ಗರ್ಭಗುಡಿಗೆ ಬಂದು ನಮುಸ್ಕಾರ ಮಾಡಿ ಕೈಮುಗಿದು ಮಂಗಳಾರತಿ ಪಡೆದು ದೇವರ ಬಳಿ ಎರಡು ನಿಮಿಷ ಪ್ರಾರ್ಥನೆ ಮಾಡಿ ಕಣ್ಣತುಂಬ ನೋಡಿ ಹೊರಗಡೆ ಬರುತ್ತಾರೆ. ಇನ್ನು ಹೆಚ್ಚುಹೊತ್ತು ಇರುವುದಾಗಿ ಹೇಳಿದರೇ ೫ ನಿಮಷ ಬೇಕಾದರೇ ಸಮಯ ತೆಗೆದುಕೊಳ್ಳಲಿ. ಮೊದಲು ಅಲ್ಲೆ ಶಾಲು ಹಾಕಿ ಗೌರವ ಸಮರ್ಪಣೆ ಮಾಡಲಾಗುತ್ತಿತ್ತು. ಈ ಬಾರಿ ಹಣ್ಣಿನ ಬುಟ್ಟಿ ಯಾವುದು ಇಲ್ಲ. ಒಂದು ಶಾಲು, ದೇವರ ಬಳಿ ಇರುವ ಒಂದು ಹಾರವನು ದೇವಾಲಯದ ಹೊರಗೆ ಹಾಕಲಾಗುವುದು ಎಂದರು. ನವಂಬರ್ ೨ ರಂದು ಮಧ್ಯಾಹ್ನ ೧೨ ಗಂಟೆಗೆ ಹಲವು ಗಣ್ಯರ ಸಮ್ಮುಖದಲ್ಲಿ ಬಾಗಿಲನ್ನು ಸಾಂಪ್ರದಾಯಿಕ ವಿಧಿ ವಿಧಾನಗಳ ಮೂಲಕ ತೆರೆಯಲಾಗುವುದು. ಈಗಾಗಲೇ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಂಡಿದ್ದು, ಬರುವ ಭಕ್ತರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಮತ್ತು ಕಳೆದ ಬಾರಿಗಿಂತ ಈ ಬಾರಿ ವಿಶೇಷ ಮತ್ತು ಅರ್ಥಪೂರ್ಣವಾಗಿ ಜಾತ್ರಾ ಮಹೋತ್ಸವವನ್ನು ಆಚರಿಸಲು ಸಕಲ ರೀತಿಯಿಂದಲೂ ಜಿಲ್ಲಾಡಳಿತ ಸಜ್ಜಾಗುತ್ತಿದೆ. ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಏಕೆಂದರೆ ಶಕ್ತಿ ಯೋಜನೆಯಿಂದ ಉಚಿತ ಬಸ್ ಪ್ರಯಾಣ ಇರುವುದರಿಂದ ಹೆಚ್ಚಿನ ಭಕ್ತರು ಆಗಮಿಸುತ್ತಿರುವುದರಿಂದ ಜಿಲ್ಲಾಡಳಿತ ಇದೇ ಮೊದಲ ಬಾರಿಗೆ ಜರ್ಮನ್ ಟೆಂಟ್, ಬ್ಯಾರಿಕೇಟ್, ನೆಲಕ್ಕೆ ಮ್ಯಾಚ್, ಸರತಿ ಸಾಲಿನಲ್ಲಿ ಭಕ್ತರಿಗೆ ತೊಂದರೆ ಆಗದಂತೆ ಫ್ಯಾನ್ ಅಳವಡಿಕೆ ಹಾಗೂ ಕುಡಿಯಲು ನೀರು ಮತ್ತು ಮಜ್ಜಿಗೆ ಬಿಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಉಪವಿಭಾಗಾಧಿಕಾರಿ ಹಾಗೂ ಹಾಸನಾಂಬ ದೇವಸ್ಥಾನದ ಆಡಳಿತ ಅಧಿಕಾರಿ ಮಾರುತಿ ಮಾತನಾಡಿ ಹೊರದೇಶ ಮತ್ತು ಹೊರ ರಾಜ್ಯದಲ್ಲಿ ಕುಳಿತುಕೊಂಡು ಹಾಸನಾಂಬೆ ದೇವಿಯ ಪೂಜೆ ಮತ್ತು ಇನಿತರೆ ಕಾರ್ಯಕ್ರಮಗಳನ್ನ ನೇರವಾಗಿ ಸಾಮಾಜಿಕ
ಜಾಲತಾಣದಲ್ಲಿ ನೋಡಬಹುದಾಗಿದೆ. ಇದರ ಜೊತೆಗೆ ನಗರದ ಪ್ರಮುಖ ವೃತ್ತಗಳಲ್ಲಿ 8 ಕಡೆ ಎಲ್‌ಇಡಿ ಟಿವಿ ಅಳವಡಿಕೆ ಹಾಗೂ ಸರತಿ ಸಾಲಿನಲ್ಲಿ ಆಗಮಿಸುವ ಭಕ್ತರಿಗೆ ಬೇಜಾರಾಗದಂತೆ ಟಿವಿ ಮೂಲಕ ಮಹಾಭಾರತ ಪ್ರದರ್ಶನ ಇರುತ್ತಾದೆ. ಈಗಾಗಲೇ ದೇವಾಲಯಕ್ಕೆ ಸುಣ್ಣ ಬಣ್ಣ ಹೊಡೆಯುವ ಕೆಲಸ ಮುಗಿದಿದೆ. ಸ್ವಚ್ಛತೆ ಕಾರ್ಯ ನಡೆಯುತ್ತಿದೆ. ಇದರ ಜೊತೆಗೆ ಗರ್ಭಗುಡಿ ಮತ್ತು ದೇವಸ್ಥಾನದ ಒಳಗಡೆ ಭಕ್ತರಿಗೆ ಎಸಿ ವ್ಯವಸ್ಥೆ ಮಾಡಲಾಗುವುದು.
ವಿಶೇಷ ದರ್ಶನಕ್ಕೆ ಬರುವಂತಹ ಭಕ್ತರಿಗೆ 300 ರೂ ಹಾಗೂ 1000 ರೂ ಪಾಸ್ ವ್ಯವಸ್ಥೆ ಮಾಡಲಾಗಿದ್ದು,ಇದರಲ್ಲಿ ಈ ಬಾರಿ ವಿಶೇಷವಾಗಿ ಕ್ಯೂ.ಆರ್ ಕೋಡ್ ಸಿಸ್ಟಂ ಅಳವಡಿಸಿರುವುದರಿಂದ ನಕಲಿ ಪಾಸುಗಳ ಅವಳಿಗೆ ಕಡಿವಾಣ ಹಾಕಲಿದೆ ಎಂದು ಹೇಳಿದರು. ದರ್ಶನಕ್ಕೆ ಬರುವಂತಹ ವಯೋವೃದ್ಧರು ಮತ್ತು ಅಂಗವಿಕಲರನ್ನ ಕರೆದುಕೊಂಡು ಹೋಗಿ ದರ್ಶನ ಮಾಡಿಸಲು ನಾಲ್ಕು ಎಲೆಕ್ಟ್ರಾನಿಕ್ಸ್ ವಾಹನ ಖರೀದಿ ಮಾಡಲಾಗಿದೆ ಎಂದು ಹೇಳಿದರು.
ಉಪವಿಭಾಗದಧಿಕಾರಿ ಮಾರುತಿ ಮಾತನಾಡಿ, ದೇವಾಲಯದ ಒಳಗೆ ಮತ್ತು ಹೊರಗೆ ಆಕರ್ಷಣೆಯಾಗಿ ಮತ್ತು ವಿಭಿನ್ನವಾಗಿ ಹೂವಿನ ಅಲಂಕಾರದ ಮಾಡಲಾಗುವುದು ಪ್ರತಿ ವರ್ಷವೂ ಕೂಡ ಸಾಕಷ್ಟು ಸಮಸ್ಯೆಯಾಗುತ್ತಿದ್ದ ಗರ್ಭಗುಡಿ ಪ್ರವೇಶಕ್ಕೆ ಈ ಬಾರಿ ಜಿಲ್ಲಾಡಳಿತದಿಂದ ಶಿಷ್ಟಾಚಾರದ ಪ್ರಕಾರ ಗಣ್ಯರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದರು.ಈ ಬಾರಿ ವಿಶೇಷವಾಗಿ ಬೇರೆ ಬೇರೆ ಜಿಲ್ಲೆ ಹಾಗೂ ತಾಲೂಕುಗಳಿಂದ ನಗರಕ್ಕೆ ಆಗಮಿಸುವವರಿಗೆ ಸ್ವಾಗತಿಸಲು ನಗರದ ದ್ವಾರದಲ್ಲಿ ಎಂಟು ಕಡೆ ಸ್ವಾಗತ ಕಮಾನುಗಳನ್ನು ಅಳವಡಿಸಲಾಗುವುದು. ಅಲ್ಲದೆ ಬಂದಂತವರಿಗೆ ಆಕರ್ಷಣೆಯ ಗೊಳಿಸಲು ನಗರ ಸಭೆ ವತಿಯಿಂದ ಈಗಾಗಲೇ ಹೂವಿನ ಮೂಲಕ ನಗರವನ್ನ ಹೂವಿನಿಂದ ಶೃಂಗಾರ ಗೊಳಿಸಲು ಹೂವಿನ ಕುಂಡಗಳ ಮೂಲಕ ಅಲಂಕಾರ ಮಾಡಲಾಗುತ್ತಿದೆ ಎಂದು ಹೇಳಿದರು. ಹಾಸನಂಬ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಪ್ರಥಮ ಬಾರಿಗೆ ಆಗಸದಲ್ಲಿ ಹಾಸನ ಎಂಬ ವಿನೂತನವಾಗಿ ಹೆಲಿಕ್ಯಾಪ್ಟರ್ ಮೂಲಕ ನಗರವನ್ನ ಸುತ್ತು ಹಾಕುವ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಪ್ಯಾರಾಗ್ಲೈಡಿಂಗ್ ಹಾಗೂ ಜಿಲ್ಲೆಯ ಪ್ರವಾಸಿ ತಾಣಗಳ ನಾಲ್ಕು ಪ್ಯಾಕೇಜ್ ಗಳನ್ನು ಒಳಗೊಂಡಿರುವಂತೆ ಪ್ರವಾಸೋದ್ಯಮಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಮಾತನಾಡಿ, ಈ ವರ್ಷದ ಹಾಸನಂಬ ಜಾತ್ರಾ ಮಹೋತ್ಸವಕಕೆ ಹೆಚ್ಚಿನ ಗಮನ ನೀಡಿ ಅದ್ದೂರಿಯಾಗಿ ಆಚರಿಸಲಾಗುತ್ತಿದು, ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ. ಈಗಾಗಲೇ ಎಲ್ಲಾ ಕಾರ್ಯಗಳು ಪೂರ್ಣಗೊಂಡಿದ್ದು, ನವೆಂಬರ್ 9 ರಿಂದ ಮಧ್ಯಾಹ್ನ 12 ಗಂಟೆಗೆ ಬಾಗಿಲನ್ನು ತೆಗೆಯಲಾಗುವುದು. ಬಾಗಿಲು ತೆಗೆಯುವ ಮತ್ತು ಮುಚ್ಚುವ ದಿವಸದಂದು ಭಕ್ತರಿಗೆ ಅವಕಾಶ ಇರುವುದಿಲ್ಲ. ಉಳಿದಂತೆ ದಿನದ 24 ಗಂಟೆಯು ದರ್ಶನದ ಅವಕಾಶ ಕಲ್ಪಿಸಲಾಗಿದೆ. ದರ್ಶನದ ವೇಳೆಯಲ್ಲಿ ರಾಜ್ಯದ ಹಲವು ಸಚಿವರು ಶಾಸಕರು ಹಾಗೂ ಇನ್ನು ಹಲವು ಗಣ್ಯರು ಆಗಮಿಸಲಿದ್ದು, ಯಾವುದೇ ರೀತಿ ಲೋಪವಾಗದಂತೆ ಕ್ರಮ ಕೈಗೊಳ್ಳಲಾಗುವುದು. ಸಂಪ್ರದಾಯದಂತೆ ದೀಪಾವಳಿ ದಿನ ಬಾಗಿಲನ್ನ ಮುಚ್ಚಲಾಗುವುದು. ಬರುವಂತಹ ಭಕ್ತರಿಗೆ ಶೌಚಾಲಯ, ಕುಡಿಯುವ ನೀರು ಇತರೆ ಸೌಲಭ್ಯಗಳನ್ನ ನೀಡಲಾಗುವುದು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಾಮದ್ ಸುಜೀತಾ ಮಾತನಾಡಿ, ಅದಿ ದೇವತೆ ಹಾಸನಾಂಬೆ ದರ್ಶನದ ವೇಳೆ ಯಾವುದೇ ಅಹಿತಕರ ಘನಟೆ ಸಂಭವಿಸದಂತೆ ಮುಂಜಾಗ್ರತ ಕ್ರಮವಾಗಿ ಪೊಲೀಸ್ ಬಿಗಿ ಬಂದು ಬಸ್ತ್ ಮಾಡಲಾಗಿದ್ದು, ಕಳೆದ ಬಾರಿ 6 ಲಕ್ಷ ಭಕ್ತರು ಬಂದಿದ್ದು ಈ ಬಾರಿ 10 ಲಕ್ಷ ಜನರು ಬರುವ ನಿರೀಕ್ಷೆ ಇದೆ ಎಂದರು.