ಹಾಸನ.ಡಿ.08…(ಹಾಸನ್_ನ್ಯೂಸ್):-ನಗರದ ಹೊರವಲಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿಮಾನ ನಿಲ್ದಾಣದ ಕಾಮಗಾರಿಗೆ ಇರುವ ತೊಡಕುಗಳನ್ನು ಪರಿಹರಿಸುವ ಕುರಿತಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಅಧಿಕಾರಿಗಳ ಸಭೆ ನಡೆಯಿತು
ಸಭೆಯಲ್ಲಿ ವಿಮಾನ ನಿಲ್ದಾಣ ಕುರಿತಂತೆ ಮಾಹಿತಿ ನೀಡಿದ ಕೆ.ಎಸ್.ಐ.ಐ.ಡಿ.ಸಿ. ಯ ಪ್ರತಿನಿಧಿ ಕ್ಯಾಪ್ಟನ್ ಶಮಂತ್ ಎನ್. ವಿಮಾನ ನಿಲ್ದಾಣದ ಮೊದಲ ಹಂತ ಎರಡನೇ ಹಂತದ ಯೋಜನೆ ಬಗ್ಗೆ ವಿವರಿಸಿದರು
ವಿಮಾನ ಹಾರಾಟಕ್ಕೆ ಹಾಗೂ ಇಳಿಸಲು ಯಾವುದೇ ತೊಂದರೆ ಆಗದಂತೆ ಉದ್ದೇಶಿತ ನಿಲ್ದಾಣ 3 ಕಿ.ಮೀ ದೂರದಲ್ಲಿರುವ ಹೈಟೆಷನ್ ವಿದ್ಯುತ್ ಲೈನ್ಗಳನ್ನು ಸ್ಥಳಾಂತರಿಸುವ ಅಗತ್ಯವಿದೆ 2033ರ ದೃಷ್ಟಿ ಅವಶ್ಯಕತೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಈಗಲೇ ಯೋಜನೆ ರೂಪಿಸಿದ್ದು ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ ಮಾಡಬೇಕಾಗಿದೆ ಎಂದು ಹೇಳಿದರು.
ಮೊದಲ ಪ್ರಾಥಮಿಕ ಹಂತದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ವಿಮಾನ ಹಾರಾಟಕ್ಕೆ ಬೇಕಿರುವ ರನ್ವೇ ನಿರ್ಮಾಣ ಹಾಗೂ ಲೈನ್ ಕ್ಲಿಯರಿಂಗ್ ಚಟುವಟಿಕೆಗಳನ್ನು ಪೂರ್ಣಗೊಳಿಸಿ ಸೇವಾ ಸೌಲಭ್ಯಗಳಿಗೆ ಚಾಲನೆ ನೀಡಬಹುದಾಗಿದೆ ಎಂದು ಅವರು ವಿವರಿಸಿದರು.
ಇದೇ ವೇಳೆ ಜಿಲ್ಲಾಧಿಕಾರಿ ಆರ್ ಗಿರೀಶ್ ರವರು ಪವರ್ ಗ್ರೀಡ್ ಕಾರ್ಪೊರೇಷನ್ ಕೆ.ಪಿ.ಟಿ.ಸಿ.ಎಲ್. ಸೆಸ್ಕಾಂ ಹೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿ ಅವರ ಹಾಗೂ ಮುಂದಿನ ಯೋಜನೆಗಳು, ನಕಾಶೆಯ ಬಗ್ಗೆ ಪರಿಶೀಲಿಸಿದರು.
ವಿಮಾನ ನಿಲ್ದಾಣ ಕಾಮಗಾರಿಗೆ ಅವಕಾಶವಿರುವಂತೆ ಹೈಟೆಷನ್ ಲೈನ್ಗಳನ್ನು ಆದಷ್ಟು ಶೀಘ್ರ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿ ಆರ್ ಗಿರೀಶ್ ಸೂಚಿಸಿದರು.
ಇದೇ ವೇಳೆ ಮಾತನಾಡಿದ ವಿದ್ಯುತ್ ನಿಗಮದ ಅಧಿಕಾರಿಗಳು ಈಗಾಗಲೇ ಸಂಸ್ಥೆವತಿಯಿಂದ ಕಾರ್ಯಪ್ರವೃತ್ತವಾಗಿದ್ದು. ಉದ್ಘೇಶಿತ ವಿಮಾನ ನಿಲ್ದಾಣದ ಸಮೀಪ ಇದ್ದ 9 ಕಿಲೋಮೀಟರ್ ಉದ್ದದ ಹೈಟೆಷನ್ ಲೈನ್ಗಳನ್ನು ಮಾರ್ಗವನ್ನು ಇದರಿಂದ 17 ಕಿ.ಮೀ ಉದ್ದದ ಬದಲಿ ಮಾರ್ಗಕ್ಕೆ ಪರಿವರ್ತಿಸಲಾಗಿದೆ. 68 ಟವರ್ಗಳ ಪೈಕಿ 66ನ್ನು ನಿರ್ವಹಿಸಲಾಗಿದೆ ಆದರೆ ರೈತರಿಗೆ ಬೆಳೆ ಪರಿಹಾರ ಈಗಾಗಲೇ ವಿತರಣೆಗೆ 7.5 ಕೋಟಿ ರೂಪಾಯಿ ಅನುದಾನ ಅಗತ್ಯವಿದ್ದು ಒದಗಿಸಿಕೋಡು ವಂತೆ ಕೋರಿದರು.
ಅಪರ ಜಿಲ್ಲಾಧಿಕಾರಿ ಕವಿತಾರಾಜಾರಾಂ ಉಪವಿಭಾಗಧಿಕಾರಿ ಬಿ.ಎ ಜಗದೀಶ್ ಹಾಗೂ ಇತರ ಅಧಿಕಾರಿಗಳು, ತಹಶೀಲ್ದಾರರು ಹಾಜರಿದ್ದರು.