ಹಾಸನ: ಹಾಸನ ಜಿಲ್ಲೆಯ ಸಾರ್ವಜನಿಕ ವಲಯದ ಬಹು ನಿರೀಕ್ಷೆಯ ಹಾಸನ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಒಂದೆಡೆ ಅತಿಯಾದ ಮಳೆ ಹಾಗೂ ಯೋಜನೆಗೆ ಸ್ವಾಧೀನ ಪಡಿಸಿರುವ ಭೂಮಿಯಲ್ಲಿ ರೈತರು ಬೆಳೆದಿರುವ ಬೆಳೆ ಅಡ್ಡಿ??
• ಗುತ್ತಿಗೆ ಪಡೆದಿರುವ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ನ್ಯಾಷನಲ್ ಕನ್‌ಸ್ಟ್ರಕ್ಷನ್ ಕಂಪೆನಿ ಈಗಾಗಲೇ ಉದ್ದೇಶಿತ ಜಾಗದಲ್ಲಿ ಕಚೇರಿ, ಕಾರ್ಮಿಕರ ಶೆಡ್, ಮೆಸ್, ಕಾಂಕ್ರೀಟ್ ಪ್ಲಾಂಟ್ ನಿರ್ಮಾಣದ ಜೊತೆಗೆ ಎರಡು ಕೊಳವೆ ಬಾವಿ ಕೊರೆಸಿ ಕಾಮಗಾರಿ ಆರಂಭಿಸಲು ಸಿದ್ಧ ಇವರು ಪ್ರಾಜೆಕ್ಟ್ ಪಾರ್ಟ್ 1 ಸಂಪೂರ್ಣ ಗೊಳಿಸಲಿದ್ದಾರೆ
• ಸದ್ಯ ವಿಮಾನ ನಿಲ್ದಾಣಕ್ಕೆ ಸ್ವಾಧೀನಪಡಿಸಿರುವ 536 ಎಕರೆ ಜಾಗದಲ್ಲೇ ರೈತರ ರಾಗಿ, ಮೆಕ್ಕೆಜೋಳ , ಶುಂಠಿ ಕೆಲಸಕ್ಕೆ ಅಡ್ಡಿ ಯಾಗಿದೆ ಎನ್ನಲಾಗಿದೆ
• ಮೊದಲ ಹಂತದ ಅಂದಾಜು 100 ಕೋಟಿ ವೆಚ್ಚದಲ್ಲಿ ಈ ಕೆಳಕಂಡ ಕಾಮಗಾರಿ ಯಾಗುವ ನಿರೀಕ್ಷೆ ಇದೆ :
• ರನ್‌ವೇ • ಸುತ್ತ ಕಾಂಪೌಂಡ್ • ರಸ್ತೆ ನಿರ್ಮಾಣ • 2.8 ಕಿ.ಮೀ. ಉದ್ದದ ರನ್‌ವೇ ಮಧ್ಯ ಭಾಗದಿಂದ ಎಡ ಮತ್ತು ಬಲ ಭಾಗ (150×150) ಕ್ಕೆ ಸುಮಾರು 300 ಮೀಟರ್ ಅಗಲದ RESA (RUN WAY END SAFETY AREA) ಕಾಮಗಾರಿ
ಈ ಮೇಲ್ಕಂಡ ಕಾಮಗಾರಿ ಪೂರ್ಣಗೊಂಡ ನಂತರ :
ಪ್ಯಾಕೇಜ್-2 ಹೀಗಿದೆ ನೋಡಿ :
• ಪ್ಯಾಸೆಂಜರ್ ಟರ್ಮಿನಲ್ ಬಿಲ್ಡಿಂಗ್, • ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) • ವಾಚ್ ಟವರ್, • ಓವರ್ ಹೆಡ್ ಟ್ಯಾಂಕ್,
ಹಾಗೂ BM ರಸ್ತೆಯಿಂದ 8KM ಉದ್ದದ ಪೆರಿಮೀಟರ್ ರೋಡ್ ಜೊತೆಗೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಸ್ಥಳ ನಿರ್ಮಾಣ ನಡೆಯಬೇಕಿದೆ
• 536 ಎಕರೆ ಪ್ರದೇಶದ ಶೇ 80 ರಷ್ಟು ಭಾಗದಲ್ಲಿ ಬೆಳೆ ಬೆಳೆದಿರುವುದರಿಂದ ಖಾಲಿ ಇರುವ ಜಾಗ ಸಮತಟ್ಟು ಮಾಡುವ ಕೆಲಸ ಬಿಟ್ಟು ಉಳಿದ ಕೆಲಸ ಮಾಡೋದು ಕಷ್ಟ
ಸ್ವಾಧೀನಪಡಿಸಿಕೊಂಡಿರುವ ಜಾಗ ಖಾಲಿ ಇದ್ದಿದ್ದರೆ 2.8 ಕಿಮೀ ಉದ್ದದ ರನ್‌ವೇ ಕಾಮಗಾರಿ ಪೂರ್ಣಗೊಳ್ಳುತ್ತಿತ್ತು ಎಂದು ಕಾಮಗಾರಿ ವಹಿಸಿಕೊಂಡ ಕಂಪನಿ ಹೇಳಿದೆ ಎನ್ನಲಾಗಿದೆ
ರೈತರು ಏನ್ ಹೇಳ್ತಾರೆ ಕೇಳಿ :
” ಕಾಮಗಾರಿ ಆರಂಭಿಸುವ ಬಗ್ಗೆ ಯಾವುದೇ ಮಾಹಿತಿ ನಮಗೆ ಇರಲಿಲ್ಲ. ಬೆಳೆ ಕಟಾವು ಮಾಡುವವರೆಗೂ ಕಂಪನಿಯವರು ಕಾಯಬೇಕು. , ಇಲ್ಲದಿರೆ ನಾವು ನಷ್ಟ ಅನುಭವಿಸಬೇಕಾದಿತು., ಜಮೀನು ಇತರರಿಗೆ ಗುತ್ತಿಗೆ ಕೂಡ ನೀಡಲಾಗಿದೆ. ಸ್ವಾಧೀನಪಡಿಸಿ ಕೊಂಡಿರುವ ಭೂಮಿಗೆ ಸೂಕ್ತ ಪರಿಹಾರ ಸಿಕ್ಕಿದ್ದರೆ ನಾವು ಬೆಳೆ ಬೆಳೆಯುತ್ತಿರಲಿಲ್ಲ , ಅಂತಾರೆ ರೈತರು
ಬೆಳೆ ತೆರವು ಸಂಬಂಧ ಕಂಪನಿ ಜಿಲ್ಲಾಡಳಿತಕ್ಕೆ ಮನವಿ , ಉಪ ವಿಭಾಗಾಧಿಕಾರಿ ಸ್ಥಳ ಪರಿಶೀಲನೆ ಸದ್ಯ ಖಾಲಿ ಇರುವ ಜಾಗದಲ್ಲಿ ಕೆಲಸ ಮುಂದುವರಿಸಲು ಸೂಚನೆ !!
ವಿಳಾಸ : ಅಮುಲ್ ಐಸ್ ಕ್ರೀಮ್ ಪಾರ್ಲರ್ , ಸಂಪಿಗೆ ಮುಖ್ಯ ರಸ್ತೆ , 9ನೇ ಕ್ರಾಸ್ , ಕೆ.ಆರ್.ಪುರಂ. , ಹಾಸನ
ಹೆಚ್ಚಿನ ಮಾಹಿತಿಗಾಗಿ ಕರೆಮಾಡಿ : 9035204886
supportlocal #supportsmallbusinesses #amulicecream #hassan #hassannews #yadhuveer #ykc
#hassan #hassannews #hassanairport #airhassan