ಹಾಸನ : ಕಾಲೇಜಿನ ಐದನೇ ಮಹಡಿಯಿಂದ ಜಿಗಿದು ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ
ಮಾನ್ಯ (19) ವರ್ಷ ಮೃತ ವಿದ್ಯಾರ್ಥಿನಿ
ಪ್ರಥಮ ವರ್ಷದ ಎಲೆಕ್ಟ್ರಾನಿಕ್ ಅಂಡ್ ಕಮೂನಿಕೆಷನ್ ಓದುತ್ತಿದ್ದ ಮಾನ್ಯ
ಚನ್ನರಾಯಪಟ್ಟಣ ತಾಲ್ಲೂಕಿನ, ದಂಡಿಗನಹಳ್ಳಿ ಹೋಬಳಿ, ಹೊನ್ನಶೆಟ್ಟಿಹಳ್ಳಿ ಗ್ರಾಮದ ಮಾನ್ಯ
ಇಂದು ಮೊದಲ ವರ್ಷದ ಆಂತರಿಕ ಪರೀಕ್ಷೆ ಬರೆಯುತ್ತಿದ್ದ ಮಾನ್ಯ
ಪರೀಕ್ಷೆ ಸಮಯದಲ್ಲಿ

ನಕಲು ಮಾಡಿದ ಆರೋಪ
ಕಾಲೇಜು ಪ್ರಾಂಶುಪಾಲರಿಗೆ ಅಪಾಲಜಿ ಬರೆದುಕೊಡುವಂತೆ ಹೇಳಿದ್ದ ಉಪನ್ಯಾಸಕರು
ಪ್ರಾಂಶುಪಾಲರ ಕೊಠಡಿಗೆ ಬಂದು ಹೋದ ಬಳಿಕ ಕಟ್ಟಡದ ಮೇಲಿಂದಜಿಗಿದು ಆತ್ಮಹತ್ಯೆ , ಕಾಲೇಜಿನ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ ನಿ ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ
ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ , ಆಂತರಿಕ ಪರೀಕ್ಷೆ ಬರೆಯುತ್ತಿದ್ದ ಮಾನ್ಯ
( ವಿದ್ಯಾರ್ಥಿನಿ ) , ಪರೀಕ್ಷೆಯಲ್ಲಿ ನಕಲು ಮಾಡಿದ ಆರೋಪ ಕೇಳಿಬಂದಿದೆ ಎನ್ನಲಾಗಿದ್ದು . ಈ ಹಿನ್ನಲೆ ಅಪಾಲಜಿ ಬರೆದುಕೊಡುವಂತೆ ಉಪನ್ಯಾಸಕರು ಮಾನ್ಯಗೆ ಹೇಳಿದ್ದಾರಂತೆ . ಪ್ರಾಂಶುಪಾಲರ ಕೊಠಡಿಗೆ ಬಂದು ಹೋದ ಬಳಿಕ ಕಾಲೇಜಿನ 5ನೇ ಮಹಡಿಯಿಂದ ಜಿಗಿದು

ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ ., ಕಾಲೇಜು ಕಟ್ಟಡದಿಂದ ಜಿಗಿದು ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಹಾಸನ ನಗರದ ಹೊರವಲಯದ ಖಾಸಗಿ ಕಾಲೇಜಿನಲ್ಲಿ ನಡೆದಿರೋದು . ಮಾನ್ಯ(19ವರ್ಷ ) ಮೃತ ವಿದ್ಯಾರ್ಥಿನಿ. ಇವರು ಹಾಸನ ಜಿಲ್ಲೆಯ

ಚನ್ನರಾಯಪಟ್ಟಣ ತಾಲೂಕಿನ ಹೊನ್ನಶೆಟ್ಟಿಹಳ್ಳಿ ಗ್ರಾಮದರಾದ ಮಾನ್ಯ, ಪ್ರಥಮ ವರ್ಷದ ಎಲೆಕ್ಟ್ರಾನಿಕ್& ಕಮ್ಯೂನಿಕೇಷನ್ ಓದುತ್ತಿದ್ದರು. ಅದೇಕೆ ಇಂತಹ ಸಣ್ಣ ವಿಷಯಕ್ಕೆ ಜೀವವನ್ನೆ ಕಳೆದುಕೊಂಡಳು ಇದು ಯಕ್ಷ ಪ್ರಶ್ನೆಯಾಗಿದೆ ., . ಘಟನಾ ಸ್ಥಳಕ್ಕೆ
ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬದುಕಿ ಬಾಳಬೇಕಾದ ಜೀವ, ದುರಂತ ಅಂತ್ಯಗೊಂಡಿದೆ. ಮಗಳ ಕುರಿತು ಕನಸಿನ ಗೋಪುರ ಕಟ್ಟಿಕೊಂಡಿದ್ದ ಪೋಷಕರು, ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದೆ.