ಈ ಬಾರಿ ಹಾಸನಾಂಬ ದರ್ಶನದಲ್ಲಿ ಮೊದಲ ಬಾರಿ ತುಲಾಭಾರ , ಇ-ಪೇಮೆಂಟ್ ಹುಂಡಿ (QR ಕೋಡ್ ) ವ್ಯವಸ್ಥೆ

0

ಹಾಸನ : ದೇವಾಲಯ ಗರ್ಭಗುಡಿ ಹಾಗೂ ಸುತ್ತಮುತ್ತ ಈಗಾಗಲೇ ದೇವಾಲಯ ಆಡಳಿತ ಮಂಡಳಿಯಿಂದ ಹಣ ಆಭರಣ ಕಾಣಿಕೆ ಹುಂಡಿಯನ್ನು ಇಡಲಾಗಿದ್ದು ಇದರೊಂದಿಗೆ ಇದೇ ಪ್ರಥಮ ಬಾಲ ಇ- ಪೇಮೆಂಟ್ ಕ್ಯೂಆರ್ ಕೋಡ್ ಬ್ಯಾನರ್ ವ್ಯವಸ್ಥೆಯನ್ನು ಮಾಡಲಾಗಿದೆ. ದೇವಾಲಯ ಗರ್ಭಗುಡಿ ಹಾಗೂ

ಸುತ್ತಮುತ್ತ ನಾಲ್ಕರಿಂದ ಐದು ಇ- ಹುಂಡಿ ಬ್ಯಾನರ್ ಇಡುವ ಸಂಬಂಧ ದೇವಾಲಯ ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ . ಬಹುತೇಕ ರಾಜ್ಯದ ದೇವಾಲಯಗಳಲ್ಲಿ ಇ- ಹುಂಡಿ ವ್ಯವಸ್ಥೆ ಇದ್ದು ಭಕ್ತರು ಗೂಗಲ್ ಪೇ, ಪೋನ್ ಪೇ ಹಾಗೂ

ಪೇಟಿಎಂ ಮೂಲಕ ಹಣ ಸಂದಾಯ ಮಾಡುತ್ತಿರುವುದು ಸಾಮಾನ್ಯವಾಗಿದೆ ಆದ್ದರಿಂದ ಹಾಸನಾಂಬ ದರ್ಶನೋತ್ಸವದಲ್ಲು ಇ-ಹುಂಡಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಾಣಿಕೆ ಹಾಕುವ ಸಾಧ್ಯತೆಗಳು ಹೆಚ್ಚಿದೆ.
,
ತುಲಾಭಾರ ವ್ಯವಸ್ಥೆ
ಇದೇ ಪ್ರಥಮ ಬಾರಿಗೆ ಭಕ್ತಾದಿಗಳಿಗೆ ತುಲಾಭಾರ ವ್ಯವಸ್ಥೆಯನ್ನು ಮಾಡಲಾಗಿದ್ದು ಹಣ್ಣು, ತರಕಾರಿ , ಧನ ಧಾನ್ಯ ಸೇರಿದಂತೆ ಇತರೆ ವಸ್ತುಗಳ ಮೂಲಕ ತುಲಾಭಾರ ವನ್ನು ಮಾಡುವ ಸಂಬಂಧ

ಜಿಲ್ಲಾಡಳಿತ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಮೂಲೆ ಮೂಲೆ ಗಳಿಂದ ಲಕ್ಷಾಂತರ ಮಂದಿ ಭಕ್ತರು ಆಗಮಿ ಸುವ ಹಿನ್ನೆಲೆಯಲ್ಲಿ ತುಲಾಭಾರ ದಲ್ಲಿಯೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ.

LEAVE A REPLY

Please enter your comment!
Please enter your name here