ಫೋನ್ ನಲ್ಲಿ ಬೇರೆಯವರೊಂದಿಗೆ ಮಾತನಾಡುತ್ತಿದ್ದಳು, ಕೇಳಿದರೆ ಬೈಯ್ಯುತ್ತಿದ್ದಳು, ಊಟ ತಿಂಡಿ ಕೊಡುತ್ತಿರಲಿಲ್ಲ ಎಂದ ಗಂಡ

0

ಬೇಲೂರು : ಮಲಗಿದ್ದ ವೇಳೆ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿ ತಟ್ಟೆಕೆರೆಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ತಟ್ಟೆಕೆರೆ ಅಂಗನವಾಡಿ ಕೇಂದ್ರದ ಶಿಕ್ಷಕಿ ಪ್ರೇಮ (40) ಕೊಲೆಯಾದ ದುರ್ಧೈವಿ. ಕೊಲೆ ಮಾಡಿರುವ ಪತಿ ಶಾಂತೋಜಿರಾವ್ (43) ಸಹ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು

ಬೇಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೊಲೆ ಆರೋಪಿ ಶಾಂತೋಜಿರಾವ್, ಫೋನ್ ನಲ್ಲಿ ಬೇರೆಯವರೊಂದಿಗೆ ಮಾತನಾಡುತ್ತಿದ್ದಳು, ಕೇಳಿದರೆ ಬೈಯ್ಯುತ್ತಿದ್ದಳು, ಊಟ ತಿಂಡಿ ಕೊಡುತ್ತಿರಲಿಲ್ಲ. ಅದಕ್ಕಾಗಿ ಕೊಲೆ ಮಾಡಿದೆ ಎಂದಿದ್ದಾನೆ.
ಕೊಲೆ ಆರೋಪಿಗೆ

ಕೊಲೆಯಾದ ಪ್ರೇಮ ಎರಡನೇ ಹೆಂಡತಿಯಾಗಿದ್ದಾಳೆ. ಮೃತ ಪ್ರೇಮ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

LEAVE A REPLY

Please enter your comment!
Please enter your name here