ಹಾಸನ : ಪ್ರಶಾಂತ್ ನಾಗರಾಜ್ ಅವರ ನಿಧನದ ಹಿನ್ನೆಲೆಯಲ್ಲಿ ತೆರುವಾಗಿದ್ದ ನಗರಸಭೆಯ 16ನೇ ವಾರ್ಡಿನ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ನ ವೀನ್ ನಾಗರಾಜ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
16ನೇ ವಾರ್ಡಿನ ಉಪಚುನಾವಣೆಗೆ ದಿನಾಂಕ ನಿಗದಿಯಾಗಿದ್ದು ಅದರಂತೆ ಜೆಡಿಎಸ್ ಪಕ್ಷದಿಂದ ಹಾರ ನಾಗರಾಜ್ ಅವರ ಸುಪುತ್ರ ನವೀನ್ ನಾಗರಾಜ್ ಅವರು ನಾಮಪತ್ರವನ್ನು ಜೆಡಿಎಸ್ ಪಕ್ಷದಿಂದ ಸಲ್ಲಿಸಿದ್ದರು ಆದರೆ ಬಿಜೆಪಿ ಪಕ್ಷದ ವತಿಯಿಂದ ಶಾಸಕರು ಸೂಚನೆ ಮೇರೆಗೆ ಯಾರು ಕೂಡ ನಾಮಪತ್ರ ಸಲ್ಲಿಸಿರಲಿಲ್ಲ ಕಾರಣ ಹಾರ ನಾಗರಾಜ್ ಅವರ ಕುಟುಂಬದ ಮೇಲೆ ಇರುವಂತಹ ಪ್ರೀತಿ ವಿಶ್ವಾಸದಿಂದಾಗಿ ನಾಮಪತ್ರ ಸಲ್ಲಿಸಲಾಗುವುದಿಲ್ಲ ಎಂದು ಹೇಳಿದ್ದರು.
ಕಾಂಗ್ರೆಸ್ ಪಕ್ಷದಿಂದ ಓರ್ವ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದರು ಇಂದು ಅವರು ನಾಮಪತ್ರವನ್ನ ವಾಪಸ್ ಪಡೆದ ಹಿನ್ನೆಲೆಯಲ್ಲಿ ನವೀನ್ ನಾಗರಾಜ್ ಅವರು ಒಬ್ಬರೇ ಕಣದಲ್ಲಿ ಉಳಿದಿದ್ದರಿಂದ ಚುನಾವಣೆ ಅಧಿಕಾರಿಗಳು ಇವರನ್ನು ಅವಿರೋಧ ಎಂದು ಘೋಷಣೆ ಮಾಡಿದ್ದಾರೆ.
ಹಾರ ನಾಗರಾಜ್ ಮತ್ತು ಅವರ ಧರ್ಮಪತ್ನಿ ಅವರು ಕೂಡ ನಗರಸಭೆಯ ಸದಸ್ಯರಾಗಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದ್ದರು ಇದಾದ ಮೇಲೆ ಅವರ ಪುತ್ರ ಪ್ರಶಾಂತ್ ನಾಗರಾಜ್ ಅವರು ಕೂಡ ಕಳೆದ ಬಾರಿ ನಗರಸಭೆಯ 16ನೇ ವಾರ್ಡಿನಲ್ಲಿ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಿದ್ದರು ಆದರೆ ಅವರನ್ನು ಕಿಡಿಗೇಡಿಗಳು ಹತ್ಯೆ ಮಾಡಿ ಸಾಯಿಸಿದ್ದರಿಂದ ಅವರ ಸ್ಥಾನಕ್ಕೆ ಉಪಚುನಾವಣೆ ನಿಗದಿಯಾಗಿತ್ತು.
ಜೆಡಿಎಸ್ ಪಕ್ಷದಿಂದ ಅವರ ಅವರ ಕುಟುಂಬಕ್ಕೆ ಟಿಕೆಟ್ ನೀಡುವ ಭರವಸೆ
ನೀಡಿದ್ದರು ಇದಾದ ನಂತರ ಪ್ರಶಾಂತ್ ನಾಗರಾಜ್ ಅವರ ಸಹೋದರ ನವೀನ್ ನಾಗರಾಜ್ ಅವರನ್ನು ಕಣಕ್ಕಿಳಿಸಿತು. ಇಂದು ನಾಮಪತ್ರ ಹಿ೦ಪಡೆಯಲು ಕೊನೆಯ ದಿನವಾಗಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿದ್ದರಿಂದ ಇವರ ಆಯ್ಕೆ ಸುಗಮವಾಯಿತು ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹಾಗೂ ಹಾರ ನಾಗರಾಜ್ ಕುಟುಂಬದ ಸ್ನೇಹಿತರು ಮತ್ತು ಹಿತೈಷಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು