20 ದಿನ ಆಯ್ತು ಸರಿಯಾಗಿ ನೀರು ಬಿಡ್ತಿಲ್ಲ ಅದು ತೊಳೆದುಕೊಳ್ಳೋಕು ನೀರಿಲ್ಲ

0

ಸರ್ಕಾರಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಮುಖ್ಯಕಟ್ಟಡ 1, ಈ ನಿಲಯದಲ್ಲಿ ಸುಮಾರು 20 ದಿನಗಳಿಂದ ಪಿಟ್ ಗುಂಡಿ ನೀರು ಕುಡಿಯುವ ನೀರಿನೊಂದಿಗೆ ಬೆರೆಸಿ ಬರುತ್ತಿರುವುದರಿಂದ ನಿಲಯದಲ್ಲಿ 50% ವಿದ್ಯಾರ್ಥಿಗಳು ಅನೇಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಈ ವಿಷಯವಾಗಿ

ಉಪನಿರ್ದೇಶಕರಾದ ಮಂಜುನಾಥ್ ರವರಿಗೆ ತಿಳಿಸಲಾಗಿ ಇನ್ನೇರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದರೂ 3 ದಿನಗಳಾದರೂ ಯಾವುದೇ ಕ್ರಮ ಕೈಗೊಳ್ಳದೆ ಉಡಾಫೆಯಿಂದ ಉತ್ತರಿಸಿದ್ದರಿಂದ ನೊಂದ ವಿದ್ಯಾರ್ಥಿಗಳು ನಿಲಯದ ಮುಂದೆ ಪ್ರತಿಭಟನೆ ಮಾಡಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು, ಈ ವೇಳೆ

ಹಾಸ್ಟೆಲ್ ವಿದ್ಯಾರ್ಥಿಗಳಾದ ಹರೀಶ್, ಪ್ರತಾಪ್, ಪ್ರವೀಣ್,ಚಂದನ್,ರಾಕೇಶ್ ಇನ್ನೂ ಅನೇಕ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು, ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವುದಾಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here