ಕುಮಾರಸ್ವಾಮಿ ಹಾಸನದಲ್ಲಿ ಚನ್ನರಾಯಪಟ್ಟಣ ವಿಧಾನ ಸಭಾ ಕ್ಷೇತ್ರದ ಶಾಸಕ ಸಿ.ಎನ್ ಬಾಲಕೃಷ್ಣ ಜೊತೆ ಪತ್ರಿಕಾ ಗೋಷ್ಠಿಯಲ್ಲಿ ಇಂದು ಮಾತನಾಡಿದ್ದು : ‘ ಇನ್ನು ಹಾಸನ ವಿಧಾನಸಭಾ ಚುನಾವಣೆಯನ್ನ ಈ ಬಾರಿ ನಾನೇ ಮುಂದಾಳತ್ವ ವಹಿಸಿಕೊಳ್ಳುತ್ತೇನೆ. ಅಲ್ಲಿನ ಶಾಸಕರಿಗೆ ಹಣದ ಅಹಾಂಕರ ಮದ, 50 ಸಾವಿರಕ್ಕಿಂತ ಕಡಿಮೆ ಮತ ಬಂದರೆ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ. ಪಾಪ ಅವರು ಆ ರಿಸ್ಕ್ ತೆಗೆದುಕೊಳ್ಳುವುದು ಬೇಡ. ಎಂತಂತವರನ್ನು ನೋಡಿದ್ದೇವೆ. ಇಂತಹ ಸವಾಲುಗಳನ್ನು ನಮ್ಮ ಕುಟುಂಬ ಎದುರಿಸಿದೆ ಚುನಾವಣೆ ಸಮಯದಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಜವಾಬ್ದಾರಿಯನ್ನು ನಾನೇ ವಹಿಸಿಕೊಳ್ಳುತ್ತೇನೆ , ಹಾಸನಕ್ಕೆ ರೇವಣ್ಣ ಯಾಕ್ ಬೇಕು ?
ರೇವಣ್ಣನ್ ಕುಟುಂಬ ಯಾಕ್ ಬೇಕು ?
2023 ರ ಚುನಾವಣೆಗೆ ಹಾಸನಕ್ಕೆ ಒಬ್ಬ ಸಾಮಾನ್ಯ ಕಾರ್ಯಕರ್ತನ್ನ ಹಾಕಿ ಗೆಲ್ಲುಸ್ಕಂಡ್ ಬರ್ತಿವಿ ನೋಡಿ..
ಇದುವರೆಗೆ ನಾನು ಹಾಸನದ ರಾಜಕೀಯಕ್ಕೆ ಇಂಟರ್ಫಿಯರ್ ಆಗಿಲ್ಲ ಆದ್ರೆ ಮುಂದೆ ನೋಡಿ…, ಎಂದರು
ಮಾಜಿ ಸಚಿವ ಹೆಚ್.ಡಿ ರೇವಣ್ಣರಿಗೆ ಮುಂದಿನ ಚುನಾವಣೆಯಲ್ಲಿ ನನ್ನ ಎದುರು ಸ್ಪರ್ಧಿಸಿ ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ ಸವಾಲು ಹಾಕಿದ್ದರ ಹಿನ್ನೆಲೆ
ಈ ವಿಚಾರವಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿದ್ದು ಹೀಗೆ. , ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕುಟುಂಬ ಸದಸ್ಯರು ಯಾರೂ ಬೇಡ. ಎಂದು ಹೇಳಿದ್ದು , ಅಭ್ಯರ್ಥಿ ಯಾರಾಗಬಹುದು ಕಾದುನೋಡಬೇಕಿದೆ.