ಕಳೆದ ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ್ದರಿಂದ ಜೆಡಿಎಸ್ ಗೆ ಸೇರ್ಪಡೆ ಗೊಂಡು ಹಾಸನ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಯಾಗುವ ಮಹದಾಸೆಯಿಂದ ಲಾಕ್ ಡೌನ್ನಲ್ಲಿ ಫುಡ್ಕಿಟ್ ವಿತರಣೆ, ತರಕಾರಿ ವ್ಯಾಪಾರಿಗಳಿಗೆ ತಳ್ಳುವಗಾಡಿ ನೀಡುವುದರಿಂದ ಹಿಡಿದು ಎಲ್ಲ ವರ್ಗದ ಜನತೆಗೂ ಕೈಲಾದ ಸೇವೆ ಮಾಡುತ್ತ ಗುರುತಿಸಿಕೊಂಡಿದ್ದ ಆಗಿಲೆ ಯೋಗೇಶ್ ಗೆ ಜೆಡಿಎಸ್ ಬಗ್ಗೆಯೂ ಅದೇಕೋ ಮುನಿಸಿಕೊಂಡಂತೆ ಚಟುವಟಿಕೆಯಿಂದ ದೂರ ಉಳಿದಿದ್ದು, ಎಎಪಿ ವರಿಷ್ಠರನ್ನು ಭೇಟಿ ಮಾಡಿ ಪಕ್ಷ ಸೇರ್ಪಡೆಗೆ ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ ಎಂದು ಒಂದು ಮೂಲ ತಿಳಿಸಿದೆ., ಈಗಾಗಲೇ AAP ರಾಜ್ಯ ಕೆಲ ವರೀಷ್ಠರು ಇವರ ಮನೆಗೆ ಭೇಟಿ ನೀಡಿದ್ದು . ಇದೇ ಜೂನ್ 18ರಂದು ಅಧಿಕೃತ ಸೇರ್ಪಡೆಯ ವರದಿ ಸಿಗಬಹುದಾಗಿದೆ . , ಬಿಜೆಪಿಯಿಂದ ಮುನಿಸಿಕೊಂಡು 2018ರ ಚುನಾವಣೆ ವೇಳೆ ಜೆಡಿಎಸ್ ಗೆ ಸೇರ್ಪಡೆಗೊಂಡಿದ್ದ ಮುಖಂಡ ಅಗಿಲೆ ಯೋಗೀಶ್ ಆ ಪಕ್ಷಕ್ಕೂ ಗುಡ್ ಬೈ ಹೇಳಿ ಎಎಪಿ ಸೇರ್ಪಡೆಗೊಳ್ಳುವರೇ? ಬಹುತೇಕ ಖಚಿತ ಎನ್ನುತ್ತಿದೆ ಈ ಕೆಳಕಂಡ ಅವರ ಮಾತುಗಳು .,
” ಎಎಪಿ ಭವಿಷ್ಯದ ಪಕ್ಷ. ಪಕ್ಷಕ್ಕೆ ಸೇರ್ಪಡೆ ಗೊಳ್ಳಿ ಒಳಿತಾಗುತ್ತದೆ ಎಂದು ಎಎಪಿ ವರಿಷ್ಠ ಅರವಿಂದ್ ಮತ್ತಿತರ ಮುಖಂಡರು ಆಹ್ವಾನ ನೀಡಿರುವುದು ನಿಜ. ಅಭಿಮಾನಿಗಳೊಂದಿಗೆ ಚರ್ಚಿಸಿ ತೀರ್ಮಾನಗೊಳ್ಳುತ್ತೇನೆ “–ಅಗಿಲೆ ಯೋಗೀಶ್
ಎಎಪಿ ವರಿಷ್ಠ ಅರವಿಂದ್ ಕೇಜಿವಾಲ್ ಹಾಗೂ ರಾಜ್ಯ ಮುಖಂಡ ಭಾಸ್ಕರ್ ರಾವ್ ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿದ್ದು. ಜತೆಗೆ ರಾಜ್ಯ ಉಸ್ತುವಾರಿ ಪೃಥ್ವಿರೆಡ್ಡಿ ಕೂಡ ಅಗಿಲೆಯೋಗೀಶ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಜಿಲ್ಲಾ ಎಎಪಿ ಮುಖಂಡರು ಆಗಿಲೆ ಯೋಗೀಶ್ ಪಕ್ಷ ಸೇರ್ಪಡೆಯ ಚರ್ಚೆಯನ್ನು ಖಚಿತಪಡಿಸಿದ್ದಾರೆ. ಒಟ್ಟಾರೆ ಚುನಾವಣೆಗೆ ಇನ್ನೂ ಸಮಯ ಇದೆ ಆದರೂ ರಾಜಕೀಯದಲ್ಲಿ ಪಕ್ಷ ಪಲ್ಲಟನಾ , ಪಕ್ಷಗಳ ಈಗಿನ ಅಲೆ ನೋಡಿ ಇರುವಂತೆಯೇ ಚಟುವಟಿಕೆಗಳು ನಡೆಯುತ್ತಿರುತ್ತವೆ . ಒಟ್ಟಿನಲ್ಲಿ ಹಾಸನ ರಾಜಕೀಯ ಮುಂದಿನ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಬಾರಿ ಪೈಪೋಟಿಯಿಂದ ಕೂಡಿರೋದಂತು ನಿಜ