Hassan Politics JDS vs BJP

0

ಪ್ರೀತಮ್ ಜೆ ಗೌಡ : ‘ ಜೆಡಿಎಸ್ ಕುಟುಂಬಕ್ಕೆ ಮಾತ್ರ ಸೀಮಿತವಾಗಿರುವ ಪಕ್ಷ. ಕಾರ್ಯಕರ್ತರು ಇರುವುದೇ ಜೀತ ಮಾಡಲು ಎನ್ನುವಂತಾಗಿದೆ ‘

HD ರೇವಣ್ಣ : ‘ಎಲ್ಲ ರಾಜಕೀಯ ಪಕ್ಷದಲ್ಲೂ ಕುಟುಂಬ ರಾಜಕಾರಣ ಇದೆ. ನಾವೇನು ಹಿಂಬಾಗಿಲ ರಾಜಕೀಯ ಮಾಡುತ್ತಿದ್ದೆವೆಯೇ’?

ಪ್ರೀತಮ್ ಜೆ ಗೌಡ : ಜೆಡಿಎಸ್ ಪ್ರಾದೇಶಿಕ ಪಕ್ಷವಲ್ಲ. ಎರಡು- ಮೂರು ಜಿಲ್ಲೆಗಷ್ಟೇ ಸೀಮಿತವಾಗಿರುವ ಪಕ್ಷ. ಅವರ ಮನೆಯವರ ಉದ್ಧಾರಕ್ಕಾಗಿಯೇ ಪಕ್ಷ ಕಟ್ಟಿಕೊಂಡಿದ್ದಾರೆ.

HD ರೇವಣ್ಣ : ಕಾಂಗ್ರೆಸ್‌ ಪಕ್ಷದಲ್ಲಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸಂಜಯ್‌ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ, ಬಿಜೆಪಿಯಲ್ಲಿ ಯಡಿಯೂರಪ್ಪ ಮತ್ತು ಅವರ ಮಕ್ಕಳು ರಾಜಕೀಯಕ್ಕೆ ಬಂದಿದ್ದಾರೆ

ಪ್ರೀತಮ್ ಜೆ ಗೌಡ : ‘ ಗೌಡರ ಕುಟುಂಬ ಇರುವುದೇ ಚುನಾವಣೆಯಲ್ಲಿ ಸ್ಪರ್ಧಿಸಲು. ಅವರಿಗೆ ಮತ ಹಾಕೋದು ಕೇವಲ ಅಪ್ಪ, ಮಕ್ಕಳು, ಮೊಮ್ಮಕ್ಕಳಿಗೆ ಮತ ಹಾಕಿದಂತೆ

HD ರೇವಣ್ಣ : ‘ ಮೀಸಲಾತಿ ಇಲ್ಲದೆ ಇರುವಾಗಲೂ ಹಿಂದುಳಿದ ವರ್ಗದವರನ್ನು ಜಿಲ್ಲಾ ಪಂಚಾ ಯಿತಿ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಅವರೇನು ಗೌಡರ ಕುಟುಂಬದವರಲ್ಲ. ಬಿಜೆಪಿಯವರಿಗೆ ವೀರಶೈವ ಸಮಾಜದ ವರಿಗೆ ಟಿಕೆಟ್‌ ನೀಡಲು ಆಗಲಿಲ್ಲ ‘

ಪ್ರೀತಮ್ ಜೆ ಗೌಡ : ‘ ಜಿಲ್ಲೆಯಲ್ಲಿ ಈ ಬಾರಿ ಕುಟುಂಬಕ್ಕೆ ಸೀಮಿತವಾಗಿರುವ ಹಾಗೂ ಪ್ರಜಾಪ್ರಭುತ್ವಕ್ಕೆ ಸೀಮಿತವಾಗಿರುವ ಪಕ್ಷಗಳ ನಡುವೆ ಚುನಾವಣೆ ನಡೆಯುತ್ತಿದೆ. ಜೆಡಿಎಸ್ ತಮ್ಮ ಕುಟುಂಬ ದವರಿಗೆ ಮಾತ್ರ ಟಿಕೆಟ್ ನೀಡಿದರೆ, ಬಿಜೆಪಿ ಪ್ರಧಾನ ಮಂತ್ರಿಯಿಂದ ಹಿಡಿದು ತಾಲ್ಲೂಕು ಪಂಚಾಯಿತಿವರೆಗೂ ಕಾರ್ಯಕರ್ತರು, ಮುಖಂಡರನ್ನು ಗುರುತಿಸಿ ಅವಕಾಶ ನೀಡುತ್ತಿದೆ. ಹಾಗಾಗಿ ಈ ಚುನಾವಣೆಯಲ್ಲಿ ಯಾರೂ ಧೃತಿಗೆಡಬೇಕಿಲ್ಲ

HD ರೇವಣ್ಣ : ‘ ಕುಟುಂಬದಿಂದ ಒಬ್ಬರೇ ಸ್ಪರ್ಧಿಸಬೇಕೆಂಬ ಕಾನೂನು ತಂದು ಕಡಿವಾಣ ಹಾಕಲಿ. ಅದಕ್ಕೆ ನಾವು ಬದ್ಧ. ಎಚ್‌.ಡಿ. ದೇವೇಗೌಡರ ಕಂಪನಿಯಲ್ಲಿ ತಯಾರದವರೇ ಇಂದು ಬಿಜೆಪಿ, ಕಾಂಗ್ರೆಸ್‌ನಲ್ಲಿ ಇರುವುದು ‘

ಪ್ರೀತಮ್ ಜೆ ಗೌಡ : ‘ ಜೆಡಿಎಸ್ ಪಕ್ಷದಲ್ಲಿ ಅವರ ಕುಟುಂಬದವರು ಮಾತ್ರ ಅಧಿಕಾರ ನಡೆಸಬೇಕು, ಕಾರ್ಯಕರ್ತರು ಅವರ ಮನೆ ಜೀತ ಮಾಡಬೇಕಾ?

HD ರೇವಣ್ಣ : ‘ ಹತ್ತು ವರ್ಷಗಳಿಂದ ಹಲವು ಕಾಮಗಾರಿಗಳು ನನೆಗುದಿಗೆ ಬಿದ್ದಿದೆ. ರಾಷ್ಟ್ರೀಯ ಪಕ್ಷಗಳು ಅಭಿವೃದ್ಧಿ ವಿಚಾರದಲ್ಲಿ  ಜಿಲ್ಲೆಯನ್ನು ಕಡೆಗಣಿಸಿವೆ , ಅಭಿವೃದ್ಧಿ ಬಗ್ಗೆ ಗಮನ ಹರಿಸಿ ‘

ಪ್ರೀತಮ್ ಜೆ ಗೌಡ : ಜೆಡಿಎಸ್ ಪಕ್ಷದವರೇ ರೋಸಿ ಹೋಗಿ ಪ್ರಶ್ನೆ ಮಾಡುತ್ತಿದ್ದಾರೆ. ಆದ್ದರಿಂದ ಅವರ ಕುಟುಂಬಕ್ಕೆ ಬುದ್ಧಿ ಕಲಿಸಲು ಈ ಬಾರಿ ಸ್ವಪಕ್ಷೀಯರೇ ನಿರ್ಧರಿಸಿದ್ದಾರೆ , ಕಾದು ನೋಡಿ.

HD ರೇವಣ್ಣ : ‘ ಅಭಿವೃದ್ಧಿ ಕಾಮಗಾರಿಗಳಲ್ಲಿ ಶೇ 35 ರಿಂದ 40 ರಷ್ಟು ಲಂಚ ಕೊಡಬೇಕಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಈಗ ರಾಜ್ಯದಲ್ಲಿ 40 ಪರ್ಸೆಂಟ್‌ ಸರ್ಕಾರ ಆಡಳಿತ ನಡೆಸುತ್ತಿದೆ. ಈ ಬಗ್ಗೆ ಪ್ರಧಾನಿಗೆ ಮಾಹಿತಿ ಇಲ್ಲವೇ? ಪ್ರಧಾನಿ ಮೋದಿ ಅವರು ರಾಜ್ಯದ ಕಡೆ ಕಣ್ಣು ಬಿಡಬೇಕು ‘

ಪ್ರೀತಮ್ ಜೆ ಗೌಡ : ‘ ಈ ಚುನಾವಣೆ ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರ ಹೋರಾಟ , ಬಿಜೆಪಿ ಅಭ್ಯರ್ಥಿ ಎಚ್.ಎಂ. ವಿಶ್ವನಾಥ್ ಗೆಲ್ಲಲಿದ್ದಾರೆ , ಇದಕ್ಕಾಗಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಬೇಕು

HD ರೇವಣ್ಣ : ‘ ಅಕಾಲಿಕ ಮಳೆಯಿಂದ ಜಿಲ್ಲೆಯಲ್ಲಿ ಒಂದು ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿ, 420 ಕೋಟಿಗೂ ರೂ ಅಧಿಕ ನಷ್ಟವಾಗಿದೆ. ಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸದ ರಾಜ್ಯ ಬಿಜೆಪಿ ಸರ್ಕಾರ ಎಚ್‌.ಡಿ.ಕುಮಾರಸ್ವಾಮಿ ನೀಡಿದ್ದ ಶಂಖ ಹಿಡಿದುಕೊಂಡು ರಾಜ್ಯ ಸುತ್ತುತ್ತಿದೆ ‘

#hassanpolitics #hdrevanna #preethamjgowda #hassanbjp #hassanjds #bjp #jds #hassan #hassannews

LEAVE A REPLY

Please enter your comment!
Please enter your name here