ಹಾಸನ : ಜಿಲ್ಲೆಗೆ ನೂತನ ಎಸ್ಪಿಯಾಗಿ ನೇಮಕಗೊಂಡಿರುವ ಹರಿರಾಂ ಶಂಕರ್ ಅವರು ಇಂದು 27ಜೂನ್ 2022 ರ ಸಂಜೆ ಜಿಲ್ಲೆಗೆ ಆಗಮಿಸಿ ಅಧಿಕಾರ ಸ್ವೀಕರಿಸಿದರು ಶ್ರೀನಿವಾಸಗೌಡ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿರುವ ಸರ್ಕಾರ ಮಂಗಳೂರಿನಲ್ಲಿ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹರಿರಾಂ ಶಂಕರ್ ಅವರನ್ನು ನೇಮಿಸಿ ಇಂದು ಬೆಳಿಗ್ಗೆ ಆದೇಶ ಹೊರಡಿಸಿತ್ತು .,
ನೂತನ ಎಸ್ಪಿ ಹರಿರಾಂ ಶಂಕರ್ ಕಿರು ಪರಿಚಯ ?
ಜಿಲ್ಲೆಗೆ ನೂತನ ಎಸ್ಪಿಯಾಗಿ ನೇಮಕಗೊಂಡಿರುವ ಹರಿರಾಂ ಶಂಕರ್ ಅವರು ಮೂಲತಃ ಕೇರಳ ರಾಜ್ಯದ ತ್ರಿಚೂರಿನವರು. ಇವರು 1990 ಆಗಸ್ಟ್ 26 ರಂದು ಜನಿಸಿದ್ದು, ತಂದೆ ವೆಂಕಟಾಚಲಂ ಅವರು ಸೆಷನ್ಸ್ ಆಫಿಸರ್ ಆಗಿದ್ದಾರೆ. ತಾಯಿ ಆಯುರ್ವೇದ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಓರ್ವ ಸಹೋದರ ಮುಂಬೈನಲ್ಲಿ IITಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಶಂಕರ್ ಅವರು 1 ರಿಂದ ತರಗತಿಯವರೆಗೂ ತ್ರಿಚೂರ್ ಸೆಂಟ್ ಪಾಲ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, ನಂತರ 4ರಿಂದ 12ನೇ ತರಗತಿವರೆಗೆ ಭಾರತಿ ವಿದ್ಯಾಭವನದಲ್ಲಿ ಪೂರ್ಣಗೊಳಿಸಿ ನಂತರ ಮೆಕಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ನಂತರ SBI ನಲ್ಲಿ ಪ್ರೊಬೆಷನರಿ ಆಫೀಸರ್ ಆಗಿ ಕೆಲ ಕಾಲ ಕರ್ತವ್ಯ ನಿರ್ವಹಿಸಿ ನಂತರ UPSC ಪರೀಕ್ಷೆಯ ಮೂಲಕ ಭಾರತೀಯ ಆಡಿಟ್ ಮತ್ತು ಅಕೌಂಟ್ ಸರ್ವೀಸ್‌ನಲ್ಲಿ ಆಯ್ಕೆಯಾಗಿದ್ದರು. ನಂತರ 2017ರಲ್ಲಿ IPS ಪರೀಕ್ಷೆಯ 5ನೇ ಪ್ರಯತ್ನದಲ್ಲಿ
145ನೇ ರ್ಯಾಂಕ್ ಪಡೆಯುವ ಮೂಲಕ ಪೊಲೀಸ್ ಇಲಾಖೆಗೆ ಸೇರ್ಪಡೆಯಾದರು.
ಹರಿರಾಂ ಶಂಕರ್ ಅವರು ಮೊದಲು ಬೆಳಗಾವಿಯ ಜಿಲ್ಲೆಯ ಅಥಣಿಯಲ್ಲಿ ಪ್ರೊಬೆನಷರಿಯಾಗಿ ಕರ್ತವ್ಯ ನಿರ್ವಹಿಸಿ ನಂತರ ಕುಂದಾಪುರ ಉಪ ವಿಭಾಗದಲ್ಲಿ ASPಯಾಗಿ ನಿಯೋಜನೆಗೊಂಡರೆ, ಪ್ರಸ್ತುತ ಅವರು ಮಂಗಳೂರು ನಗರದ ಕಾನೂನು ಸುವ್ಯವಸ್ಥೆಯ DCPಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರನ್ನು ಹಾಸನ ಎಸ್ಪಿಯಾಗಿ ಆದೇಶ ಹೊರಿಡಿಸಿದೆ.