ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ, ಶಾಶ್ವತ ನೋಂದಣಿ ಪ್ರಮಾಣ ಪತ್ರ/ಐ.ಇ.ಎಂ./ಉದ್ಯೋಗ್ ಆಧಾರ್ ಪ್ರಮಾಣ ಪತ್ರ ಪಡೆಯೋದು ಕಡ್ಡಾಯ !!

0

ಹಾಸನ ಮಾ.22 (ಹಾಸನ್_ನ್ಯೂಸ್ !, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ, ಶಾಶ್ವತ ನೋಂದಣಿ ಪ್ರಮಾಣ ಪತ್ರ/ಐ.ಇ.ಎಂ./ಉದ್ಯೋಗ್ ಆಧಾರ್ ಪ್ರಮಾಣ ಪತ್ರಗಳನ್ನು ಪಡೆದು ಕಾರ್ಯನಿರ್ವಹಿಸುತ್ತಿ ರುವ ಕೈಗಾರಿಕಾ ಘಟಕಗಳು ಹಾಗೂ ಈವರೆಗೂ ಯಾವುದೇ ಪ್ರಮಾಣ ಪತ್ರಗಳನ್ನು ಪಡೆ ಯದೆ ಕಾರ್ಯನಿರ್ವಹಿಸು ತ್ತಿರುವ ಕೈಗಾರಿಕಾ ಘಟಕಗಳು  ಜು.01 ರಿಂದ ಕಡ್ಡಾಯವಾಗಿ ಉದ್ಯಮ್ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಪಡೆಯಬೇಕಾ ಗಿರುತ್ತದೆ. ಆದ್ದರಿಂದ ಜಿಲ್ಲೆ ಯಲ್ಲಿ ಕಾರ್ಯನಿರ್ವಹಿಸು ತ್ತಿರುವ ಎಲ್ಲಾ ಕೈಗಾರಿಕಾ ಘಟಕಗಳು ಕಡ್ಡಾಯವಾಗಿ ಉದ್ಯಮ್ ರಿಜಿಸ್ಟ್ರೇಷನ್ ಸರ್ಟಿಫಿಕೇಟ್‍ನ್ನು ಆನ್‍ಲೈನ್ ಪೋರ್ಟಲ್ ಮುಖಾಂತರ ಪಡೆಯಲು  ಇ-ಪೋರ್ಟಲ್ ವೆಬ್ ಸೈಟ್ https://udyamregistration.gov.in/Print_msme_udyam_classification_registration_certificate.htm  ನಲ್ಲಿ ಪಡೆಯಬಹುದಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

Advertisements

LEAVE A REPLY

Please enter your comment!
Please enter your name here