#ಸ್ವಾಭಿಮಾನಿಗೊಂದು_ಸಲಾಮ್
ಹಾಸನ :
ಹೆಸರು ರೆಹಮತ್ ದಾ , ವಯಸ್ಸು ಬರೋಬ್ಬರಿ 80ಆಗ್ತಾ ಬಂದ್ರು , ಚಿರ ಯುವಕರನ್ನು ನಾಚಿಸೋ ಹಾಗೆ KGಗಟ್ಟಳೆ ಹೆಗಲಿಗೇರಿಸಿ., ಟಾಂಗಾ ಗಾಡಿಗೆ ಶಿಫ್ಟ್ ಮಾಡಿ, ಟನ್ ಗಟ್ಟಳೆ ಕಬ್ಬಿಣ ಸಲಾಕಿ ಗಳನ್ನು ಮಾಲೀಕರು ಹೇಳಿದ ಜಾಗಕ್ಕೆ ತಲುಪಿಸಿ ಬರುತ್ತಾರೆ., ಏನಪ್ಪ ಈ ವಯಸ್ಸಲ್ಲು ದುಡಿತವ್ರಲ್ಲ., ಇವ್ರಿಗೇನು ಮಕ್ಳು ಮರಿಗೊಳಿಲ್ವ ಅಂತ ನೀವ್ ಕೇಳ್ಬಹುದು., ರೆಹಮತ್ ಬಾಯ್ ಗೆ ಮಕ್ಳು , ಮೊಮ್ಮಕ್ಳು , ಮರಿ ಮಕ್ಳು ಅವ್ರೆ ; ಸ್ವಂತ ಮನೆ ಇದ್ರು ಕೂತು ತಿನ್ನೋ ಆಸ್ತಿ ಇದ್ರು., ಸಾಯೋ ಗಳ್ಗೆ ವರ್ಗು ನಾನ್ ನನ್ ಮಕ್ಳತ್ರಾನು ಕೈಚಾಚಲ್ಲ., ದುಡುದ್ ತಿನ್ನತೀನಿ ಅನ್ನೋ ಛಲ ಇವರದು., ನಮ್ಮ ಹಾಸನ್ ನ್ಯೂಸ್ ತಂಡ ಅವರತ್ರ ಮಾತಾಡ್ಸಿ ಅವ್ರಿಗೇನಾದ್ರು ಸಹಾಯ ಮಾಡೋಣ ಅಂತ ಹೋದ್ರೆ ., ಅವರೇ ಒಂದ್ ಮಾಮು ಕ್ಯಾಂಟೀನ್ ಗೆ ಕರ್ಕೋಂಡ್ ಹೋಗಿ ಒಂದ್ ಬಿಸ್ಕತ್ ಟೀ ಕುಡ್ಸಿ ಅವರೇ ಕಾಸ್ ಕೊಟ್ರು., ಇಲ್ಲ ನಾವ್ ಹುಡುಗ್ರು ನಿಮ್ಮತ್ರ ಕಾಸ್ ಖರ್ಚ್ ಮಾಡ್ಸ್ಬಾರ್ದು ಅಂದ್ರು ಕೇಳ್ಳಿಲ್ಲ ಸ್ವಾಮಿ!,
ಇವರು ಮತ್ತೊಬ್ಬ ವಯಸ್ಕರಿಗಲ್ಲ., ಇವತ್ತು ಕೆಲಸ ಮಾಡದೇ ತಂದೆ ತಾಯಿ ಹಣದಲ್ಲಿ ಕೂತು ತಿಂತಿರೋ ಮಕ್ಕಳಿಗೆ ಒಂದು ಮಾದರಿ., ಗಂಟೆ ಗಟ್ಟಳೆ ಕೂತು PUBG , CANDY ಕ್ರಷ್ , CLUB HOUSE ಅಲ್ಲಿ ಕಾಲಕಳೆಯೋ ಮೊದಲು ಈ ಪೋಸ್ಟ್ ನ ಶೇರ್ ಮಾಡಿ … ಮರಿಬೇಡಿ “ಕಾಯಕವೇ ಕೈಲಾಸ ” 🙂
HASSAN NEWS ಸಖತ್ NEWZZ ಮಗ