ನೆನ್ನೆ ನಡೆದ ಸಭೆಯಲ್ಲಿ ಶಾಸಕರು ಸಿಎಂ ಜೊತೆ ಮಾತನಾಡಿದ್ದಾರೆ. ಇದುವರೆಗೂ ಶಾಸಕ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ ಉಳಿದ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಸಿಎಂ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಸಿಎಂ ಜೊತೆ ವೀಡಿಯೋ ಕಾನ್ಫರೆನ್ಸ್‍ನಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರತೆಯಿರುವ ವೈದ್ಯರನ್ನು ನೇಮಿಸಿದೆ. ಖಾಲಿಯಿದ್ದ ಒಟ್ಟು 63 ವೈದ್ಯರನ್ನು ಸರ್ಕಾರ ಭರ್ತಿ ಮಾಡಿದೆ. ಎಲ್ಲಾ ತಾಲ್ಲೂಕುಗಳಲ್ಲೂ ಆಕ್ಸಿಜನ್ ಪ್ಲಾಂಟ್‍ಗಳನ್ನು ಪ್ರಾರಂಭ ಮಾಡಲು ಟೆಂಡರ್ ಕರೆಯಲು ಸೂಚನೆ ಕೊಟ್ಟಿದ್ದೇನೆ ಎಂದರು.
ಲಾಕ್‍ಡೌನ್ ವಿಸ್ತರಣೆ ಬಗ್ಗೆ ಇನ್ನೊಂದು ದಿನ ಸಭೆ ಸೇರಿ ನಿರ್ಧಾರ ಮಾಡುತ್ತೇವೆ. ಸರ್ಕಾರ ಜಿಲ್ಲಾಧಿಕಾರಿಗೆ ಸಂಪೂರ್ಣ ಅಧಿಕಾರ ನೀಡಿದೆ. ಜೂ.30 ರವರೆಗೆ ಲಾಕ್‍ಡೌನ್ ಮಾಡುವ ಬಗ್ಗೆ ಕೇಂದ್ರ ಸೂಚನೆ ಕೊಟ್ಟರೆ ನಾವು ಅದನ್ನು ಪಾಲೀಸಬೇಕು. ಜಿಲ್ಲೆಯ ಎಲ್ಲಾ ಶಾಸಕರು ಕುಳಿತು ಚರ್ಚಿಸಿ ಲಾಕ್‍ಡೌನ್ ಮಾಡಬೇಕೋ ಬೇಡವೋ ಎಂಬುದರ ಬಗ್ಗೆ ತೀರ್ಮಾನ ಮಾಡುತ್ತೇವೆ.
ಇನ್ನೊಂದು ವಾರದಲ್ಲಿ ಕೊರೊನಾ ಅಲೆ ಕಡಿಮೆಯಾಗಲಿದೆ. ಈ ಸಭೆಯಿಂದ ಏನೂ ಪ್ರಯೋಜನವಿಲ್ಲ ಎಂಬ ರೇವಣ್ಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಮುಖ್ಯಮಂತ್ರಿಗಳೇ ರೇವಣ್ಣ ಅವರ ಜೊತೆ ಮಾತನಾಡುತ್ತೇನೆ ಎಂದಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ ಆಗಿದೆ ಎಂದರು.
ಈಗಾಗಲೇ ಎರಡು ತಿಂಗಳಿಂದ ಲಾಕ್ ಡೌನ್ ಆಗಿದೆ. ಜೂನ್ 7ರ ನಂತರ ಲಾಕ್‍ಡೌನ್ ಬೇಡ. ಎರಡು ತಿಂಗಳಿಂದ ಲಾಕ್ ಡೌನ್ ಆಗಿರುದುದರಿಂದ ದಿನ ಕೂಲಿ ಮಾಡಿ ಜೀವನ ಮಾಡುವವರ ಜೀವನ ಈಗಲೇ ಕಷ್ಟವಾಗಿದೆ. ಮತ್ತೆ ಲಾಕ್ ಡೌನ್ ಮುಂದುವರೆಸಿದರೆ ಕಷ್ಟವಾಗುತ್ತೆ. ಸಿಎಂ ಅಭಿಪ್ರಾಯ ಕೇಳಿದರೆ ಇದೆ ಅಭಿಪ್ರಾಯವನ್ನು ತಿಳಿಸುತ್ತೇನೆ. ಈಗಾಗಲೇ ಕೊರೊನಾ ಪ್ರಕರಣ ಇಳಿಮುಖವಾಗುತ್ತಿದೆ. ಇದರಿಂದ ಲಾಕ್‍ಡೌನ್ ಮುಂದುವರೆಸುವುದು ಬೇಡ ಎಂದು ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.