ಹೊಳೆನರಸೀಪುರ ಚಾ.ವಿ.ಸ.ನಿ.ನಿ ವಿಭಾಗೀಯ ಕಚೇರಿಯ ಮುಂದೆ ಇಂದು ನೌಕರರರು ಖಾಸಗೀಕರಣದ ವಿರುದ್ಧ ಪ್ರತಿಭಟಿಸಿದರು. ಖಾಸಗೀಕರಣದ ವಿರುದ್ಧ ಎಲ್ಲಾ ಅಧಿಕಾರಿಗಳು / ನೌಕರರು ಕಪ್ಪು ಪಟ್ಟಿ ಧರಿಸಿ ಸಾಂಕೇತಿಕವಾಗಿ ಪ್ರತಿಭಟಿಸಿ ಘೋಷಣೆಯನ್ನು ಕೂಗಿದರು.ಕ.ವಿ.ಪ್ರ.ನಿ.ನಿ ಸಂಘದ ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ರವರು ಮಾತನಾಡಿ ಖಾಸಗೀಕರಣದಿಂದ ಸಾರ್ವಜನಿಕರಿಗೆ, ರೈತರಿಗೆ ಹಾಗೂ ನೌಕರರ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿದರು.
ಪ್ರತಿಭಟನೆಯಲ್ಲಿ ಕ.ವಿ.ಪ್ರನಿ.ನಿ ನೌಕರರ ಸಂಘದ ಸಿ.ಇ.ಸಿ., ದೇವೇಂದ್ರ ಕೆ. ಎಸ್., ಅಧ್ಯಕ್ಷರಾದ ಶಿವಕುಮಾರ್ ಸಿ.ಸಿ., ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಹೆಚ್.ಟಿ., ಕಾರ್ಯದರ್ಶಿ ಮಂಜುನಾಥ್ ಡಿ.ಎ ಮತ್ತು ಕ.ವಿ.ಪ್ರನಿ.ನಿ ನೌಕರರ ಸಂಘದ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಂಘಟನಾ ಕಾರ್ಯದರ್ಶಿಯಾದ ರಂಗಸ್ವಾಮಿ ಡಿ., ಹಾಗೂ ಎಲ್ಲಾ ಪದಾಧಿಕಾರಿಗಳು, ನೌಕರರು ಹಾಜರಿದ್ದರು.