ನೈಋತ್ಯ ರೈಲ್ವೆಯ ವಿಶೇಷ ಸಹಯೋಗದೊಂದಿಗೆ ಯಶವಂತಪುರ – ಮುರುಡೇಶ್ವರ ಹಾಗೂ ಮುರುಡೇಶ್ವರ – ಯಶವಂತಪುರ ಮಧ್ಯೆ ವಿಶೇಷ ರೈಲು (ಸಂಖ್ಯೆ 06587/06588) ಸಂಚರಿಸಲಿದ್ದು ಈ ವಿಷಯ ಭಾರತೀಯ ರೈಲ್ವೆ ತಿಳಿಸಿದೆ. ರೈಲು ಸಂಖ್ಯೆ 06588 ಮುರುಡೇಶ್ವರದಿಂದ ಬುಧವಾರ ಮಧ್ಯಾಹ್ನ 1.30ಕ್ಕೆ ಹೊರಟು
ಗುರುವಾರ ಬೆಳಿಗ್ಗೆ 4 ಗಂಟೆಗೆ ಯಶವಂತಪುರ ತಲುಪಲಿದೆ . ,ಈ ರೈಲಿಗೆ ಚಿಕ್ಕಬಾಣಾವರ, ನೆಲಮಂಗಲ, ಕುಣಿಗಲ್, ಶ್ರವಣಬೆಳಗೋಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಮೂಕಾಂಬಿಕಾ ರಸ್ತೆ, ಬೈಂದೂರು ಹಾಗೂ ಭಟ್ಕಳಗಳಲ್ಲಿ ನಿಲುಗಡೆ ಇರಲಿದೆ ., ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೂಡ ನೈಋತ್ಯ ರೈಲ್ವೆ ಮೂರು ವಿಶೇಷ ರೈಲುಗಳನ್ನು ಆಯೋಜಿಸಿತ್ತು. ಈ ರೈಲುಗಳು
ಈಗಾಗಲೇ ಪ್ರಯಾಣ ಬೆಳೆಸಿವೆ. ಇದೀಗ ಬೇಸಗೆ ರಜಾ ಅವಧಿಯ ನಿಮಿತ್ತ ಮಂಗಳೂರು – ಇಂದೋರ್ ಹಾಗೂ ಯಶವಂತಪುರ – ಮುರುಡೇಶ್ವರ ಮಧ್ಯೆ ವಿಶೇಷ ರೈಲು ಸೌಲಭ್ಯ ಕಲ್ಪಿಸಿದೆ.