ಒಂದೇ ಬಾರಿಗೆ ಎರಡು ಕರುಗಳಿಗೆ ಜನ್ಮ ನೀಡಿದ ಹಸು : ಸ್ಥಳೀಯ ರೈತರಿಗೆ ಅಚ್ಚರಿ

0

ಪ್ರಪಂಚದಲ್ಲಿ ಏನೇ ವಾಸ್ತವಂಶವಿದ್ದರು ಹಲವು ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಐದು ಕಾಲಿನ ಕರು, ಎರಡು ಮುಖ ಇರುವ ಕರುಗಳು ಜನಿಸಿರುವುದು ಹಾಗೂ ಒಂದೇ ಬಾರಿಗೆ ನಾಲ್ಕು ಕರುಗಳಿಗೆ ಜನ್ಮ ನೀಡಿದ ಹಸುಗಳನ್ನು ನಾವು ಬಾಗಲಕೋಟೆಯಲ್ಲಿ ನೋಡಿದ್ದೇವೆ. ಆದರೆ,

ಈಗ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕುಂದೂರು ಹೋಬಳಿಯ ಗಂಜಿಗೆರೆ ಪೋಸ್ಟ್ ನ ಅಜ್ಜಗೋಡನಹಳ್ಳಿ  ಗ್ರಾಮದಲ್ಲಿ 4/5 ವರ್ಷದ ಹಸುವೊಂದು ಒಂದೇ ಬಾರಿಗೆ 2 ಕರುಗಳಿಗೆ ಜನ್ಮ ನೀಡಿದೆ. ಈ ಘಟನೆ ಸ್ಥಳೀಯ ರೈತರಿಗೆ ಅಚ್ಚರಿಯನ್ನು ಉಂಟುಮಾಡಿದೆ. ಜೊತೆಗೆ, ಎರಡು ಕರುಗಳು ಕೂಡ ಆರೋಗ್ಯವಾಗಿದ್ದು, ಹಸುವಿನ ಮಾಲೀಕನಿಗೆ ಸಂತಸವೂ ಉಂಟಾಗಿದೆ. , ರಂಗೇಗೌಡ ಎಂಬ ರೈತರಿಗೆ ಸೇರಿದ ಹಸು ನಿನ್ನೆ

ಎರಡು ಕರುಗಳಿಗೆ ಜನ್ಮ ನೀಡಿದೆ. ಇದರಲ್ಲಿ ಒಂದು ಹೆಣ್ಣು ಕರು, ಒಂದು ಗಂಡು ಕರು ಆಗಿದೆ …, ಇನ್ನು ಈ ಘಟನೆಯಿಂದ ನಮ್ಮ ಕುಟುಂಬಕ್ಕೆ ಅಚ್ಚರಿಯೂ ಉಂಟಾಗಿದೆ ಎಂದು ರೈತ ಕುಟುಂಬಸ್ಥರು ಹೇಳಿಕೊಂಡಿದ್ದಾರೆ. , ನಾವು ಹಲವು ತಲೆಮಾರುಗಳಿಂದ ಒಕ್ಕಲುತನ ಮಾಡಿಕೊಂಡು ಬಂದಿದ್ದೇವೆ. ನಮ್ಮ ಕುಟುಂಬದಲ್ಲಿ ಹಲವು ಹಸುಗಳು,  ಎಮ್ಮೆಗಳು ಇದ್ದು ಎಲ್ಲವನ್ನೂ ಸಾಮಾನ್ಯವಾಗಿಯೇ ಮೇವು ಹಾಕಿ ಸಾಕಣೆ ಮಾಡುತ್ತಿದ್ದೇವೆ. ಆದರೆ,

ಈಗ ನಮ್ಮ ಹಸುವೊಂದು ಚೊಚ್ಚಲ ಹೆರಿಗೆಯ ವೇಳೆ ಎರಡು ಕರುಗಳಿಗೆ ಜನ್ಮ ನೀಡಿರುವುದು ಸಂತಸವಾಗಿದೆ. 

– ವರದಿ : ಭೂಮಿಕಾ
 

LEAVE A REPLY

Please enter your comment!
Please enter your name here