” ಕಡಿಮೆ ಬಡ್ಡಿದರದ ಸಾಲ ಸೌಲಭ್ಯ ವರದಾನವಾಗಿದ್ದು ಅದನ್ನು ಗ್ರಾಹಕರು ಸದುಪಯೋಗಪಡಿಸಿಕೊಂಡು ತಮ್ಮ ಆಸೆಯನ್ನು ಈಡೇರಿಸಿಕೊಳ್ಳಬಹುದಾಗಿದೆ – -ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ವಿನೋದ್ ಚಂದ್ರ

0

ಸ್ವಂತ ಮನೆ ಕನಸಿಗೆ ಬ್ಯಾಂಕ್ ಸಾಲ ವರದಾನ
ಹಾಸನ ಜ.22 (ಹಾಸನ್_ನ್ಯೂಸ್ ) !, ಸ್ವಂತ ಮನೆ ಹೊಂದುವುದು  ಪ್ರತಿಯೊಬ್ಬರ ಕನಸು  ಅದರ ನಿರ್ಮಣಕ್ಕೆ ಆರ್ಥಿಕ ಕ್ರೋಡಿಕರಣ ದೊಡ್ಡ ಸವಲಾಗಿರುತ್ತದೆ ಅಂತಹವರಿಗೆ ಬ್ಯಾಂಕ್‍ಗಳು  ಕಡಿಮೆ ಬಡ್ಡಿದರದ ಸಾಲ ಸೌಲಭ್ಯ ವರದಾನವಾಗಿದ್ದು ಅದನ್ನು ಗ್ರಾಹಕರು ಸದುಪಯೋಗಪಡಿಸಿಕೊಂಡು ತಮ್ಮ ಆಸೆಯನ್ನು ಈಡೇರಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾ  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ವಿನೋದ್ ಚಂದ್ರ ಅವರು ತಿಳಿಸಿದರು.


ನಗರದ ಎನ್.ಆರ್ ಸರ್ಕಲ್‍ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಏರ್ಪಡಿಸಿದ್ದ ಗೃಹ ಸಾಲಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು ಮನೆ ನಿರ್ಮಾಣಕ್ಕೆ ಬ್ಯಾಂಕ್ ಬಡ್ಡಿ ದರದಲ್ಲಿಯೂ ಕಡಿತವಿದ್ದ ಸರ್ಕಾರದ ಸಬ್ಸಿಡಿ ಸೌಲಭ್ಯಗಳೂ ಇವೆ. ಖಾಸಗಿ ಸಾಲಗಳ ಮೂಲಕ ಸಮಸ್ಯೆ ಸುಳಿಗೆ ಸಿಗುವ ಬದಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತಿತರರ ಬ್ಯಾಂಕ್‍ಗಳಲ್ಲಿ ಸಿಗುವ ಸುಲಭ ಕಂತುಗಳ ಸಾಲಪಡೆಯುವುದು ಸೂಕ್ತ ಎಂದರು.
ಸಾಲ ಪಡೆಯುವಾಗ ಇರುವ ಆಸಕ್ತಿ ಅದನ್ನು ಹಿಂದಿರುಗಿಸುವಾಗಲು  ಇರಬೇಕು, ಹೊಣೆಗಾರಿಕೆ ಹಾಗೂ ಜವಬ್ದಾರಿ ಪ್ರದರ್ಶಿಸಿ ಆರ್ಥಿಕ ಶಿಸ್ತು ಪ್ರದರ್ಶಿಸಿದರೆ ನೆಮ್ಮದಿಯ ಜೊತೆಗೆ  ಕುಟುಂಬ ಹಾಗೂ ರಾಷ್ಟದ ಪ್ರಗತಿ ಸಾದ್ಯ ಎಂದು ಅವರು ಹೇಳಿದರು.

ಸ್ಟೇಟ್ ಆಫ್ ಇಂಡಿಯಾದ ಪ್ರಾದೇಶಿಕ  ವ್ಯವಸ್ಥಾಪಕರಾದ ಶ್ರೀಪತಿ ಎಂ. ಅವರು ಮಾತನಾಡಿ ಮನೆಕಟ್ಟುವುದು ಎಲ್ಲರ ಒಂದು ಗುರಿಯಾಗಿದ್ದು ಇದಕ್ಕೆ ನಮ್ಮ ಬ್ಯಾಂಕ್‍ನ  ಶಾಖೆಗಳಲ್ಲಿ   ಇತರೆ ಬ್ಯಾಂಕ್‍ಗಳಿಗಿಂತ ಆಕರ್ಷಕ ಕಡಿಮೆ ಬಡ್ಡಿದರದಲ್ಲಿ, ಹಾಗೂ ಕಂತುಗಳ ರೂಪದಲ್ಲಿ, ಸಾಲ ದೊರೆಯಲಿದೆ  ದಾಖಲೆಗಳನ್ನು ಪರೀಶಿಲಿಸಿ ಸ್ಥಳದಲ್ಲೇ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ ಅದನ್ನು ವಿನಿಯೋಗಿಸಿಕೊಳ್ಳಿ ಎಂದು ಹೇಳಿದರು.
ಮನೆ ಕಟ್ಟುವುದಕ್ಕೆ  ಖರೀದಿಗೆ ಖಾಲಿ ನಿವೇಶನ ಕೊಂಡುಕೊಳ್ಳುವುದಕ್ಕೆ ಆರ್ಥಿಕ ನೆರವನ್ನು ಒದಗಿಸಲಾಗುವುದು  ಚಿನ್ನದ ಗಿರವಿ ಸಾಲಗಳನ್ನು ನೀಡುಲಾಗುತ್ತದೆ ಇದರ ಲಾಭವನ್ನು ಎಲ್ಲರೂ ಬಳಸಿಕೊಳ್ಳಿ ಎಂದು ಹೇಳಿದರು
ಇದೊಂದು ವಿಶೇಷ ಸಾಲ ಮೇಳವಾಗಿದೆ ಈ ಸಂದರ್ಭದಲ್ಲಿ ಗೃಹ ಸಾಲ ಪಡೆದರೆ ಪ್ರೊಸಸಿಂಗ್ ವೆಚ್ಚ ಸಂಪೂರ್ಣ ಉಚಿತವಾಗಿರುತ್ತದೆ ಗ್ರಾಹಕರು ಇದರ ಲಾಭ ಪಡೆಯಬೇಕು ಇದಲ್ಲದೆ ವಿಶೇಷ ಬಹುಮಾನ ಗೆಲ್ಲುವ ಅವಕಾಶ ಕೂಡ ಇರಲಿದೆ ಎಂದು  ಶ್ರೀಪತಿ ತಿಳಿಸಿದರು


ಕಾರ್ಯಕ್ರಮದಲ್ಲಿ ಪ್ರಾದೇಶಿಕ ಶಾಖಾ ವ್ಯವಸ್ಥಾಪಕರಾದ ಶ್ರೀಜಿತ್, ಎನ್. ಆರ್. ವೃತ್ತದ ಎಸ್.ಬಿ.ಐ ಶಾಖಾ ವ್ಯವಸ್ಥಾಪಕರಾದ ಬಾಲಸುಬ್ರಹ್ಮಣ್ಯ, ಶಾಖಾ ವ್ಯವಸ್ಥಾಪಕರಾದ ಬೋಪಣ್ಣ ಹಾಗೂ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here