ಹಾಸನ / ಕರ್ನಾಟಕ : ಹಂಪಿ ಮತ್ತು ಬಾದಾಮಿ ಐಹೊಳೆ ರೀತಿಯಲ್ಲಿ ಬೇಲೂರು ಮತ್ತು ಹಳೇಬೀಡನ್ನು ವಿಶ್ವ ಪಾರಂಪರಿಕ ತಾಣಗಳನ್ನಾಗಿ ಘೋಷಣೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ಪ್ರಸ್ತಾವ ಸಲ್ಲಿಕೆ . ಜಿಲ್ಲೆಯ ಮಲೆನಾಡು ಭಾಗದಲ್ಲಿ ಹೋಂ ಸ್ಟೇಗಳ ಅಭಿವೃದ್ಧಿಗೆ ಗಮನ ; ಬೇಲೂರು, ಹಳೇಬೀಡು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಯಾಗುವ ವಿಶ್ವಾಸದಲ್ಲಿ ಹಾಸನಿಗರು .,
ಸಚಿವರಿಂದ ತ್ರೀಸ್ಟಾರದ ಹೊಟೇಲ್ ನಿರ್ಮಿಸಲು ಗ್ರೀನ್ ಸಿಗ್ನಲ್ …ತಾಲ್ಲೂಕಿನ ಚಿಕ್ಕಬ್ಯಾಡಗೆರೆ ಗ್ರಾಮದಲ್ಲಿ ತ್ರೀಸ್ಟಾರ್ ಹೋಟೆಲ್ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ :
ವಿಶೇಷತೆಗಳು : 6 ಎಕರೆ 35 ಗುಂಟೆ ಜಾಗದಲ್ಲಿ 20 ಕೋಟಿ ವೆಚ್ಚದಲ್ಲಿ ತ್ರೀಸ್ಟಾರ್ ಹೋಟೆಲ್ ತಲೆ ಎತ್ತಲಿದ್ದು, 64 ಡಿಲಕ್ಸ್ ಕೊಠಡಿಗಳು, 4 ಸೂಟ್‌ರೂಮ್ಸ್ ಹಾಗೂ 4 ಕ್ಲಬ್‌ರೂಮ್ಸ್, ಪಾರ್ಕಿಂಗ್, ಜಿಮ್, ಓಪನ್ ರೆಸ್ಟೋರೆಂಟ್, ಸ್ಪಾ ಸೌಲಭ್ಯ
ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ ಸೇರಿರುವ ಬೇಲೂರು, ಹಳೇಬೀಡಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಶೀಘ್ರದಲ್ಲೇ ₹50 ಕೋಟಿ ಬಿಡುಗಡೆ
ಬೇಲೂರು ತಾಲ್ಲೂಕಿನ ಚಿಕ್ಕಬ್ಯಾಡಗೆರೆ ಗ್ರಾಮದಲ್ಲಿ ತ್ರೀಸ್ಟಾರ್ ಹೋಟೆಲ್ ಕಟ್ಟಡ ನಿರ್ಮಾಣಕ್ಕೆ ಆನಂದ್ ಸಿಂಗ್ ಶಂಕುಸ್ಥಾಪನೆ ನೆರವೇರಿಸಿ ಗೋಪಾಲಯ್ಯ, ಸಿ.ಟಿ.ರವಿ, ಲಿಂಗೇಶ್ ಇದ್ದರು.
ಹಳೇಬೀಡು ಮತ್ತು ಸೋಮನಾಥ ಪುರದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಿಸಿದ ದೇವಾಲಯಗಳನ್ನು ವಿಶ್ವ ಪರಂಪರೆ ಸ್ಮಾರಕಗಳ ತಾತ್ಕಾಲಿಕ ಪಟ್ಟಿಗೆ ಸೇರಿಸಲಾಗಿದ್ದು, ಅದ್ಭುತ ಹೊಯ್ಸಳ ವಾಸ್ತು ಶಿಲ್ಪವನ್ನು ವೀಕ್ಷಿಸಲು ದೇಶಿ-ವಿದೇಶದಿಂದ ಪ್ರವಾಸಿಗರು ಆಗಮಿಸುತ್ತಾರೆ , ಸ್ಥಳೀಯ ಉದ್ಯಮ ಬೆಳೆಯಲು ಈ ಮೂಲಕ ಸಹಕಾರಿ ಯಾಗಬಹುದು ಎನ್ನಲಾಗಿದೆ.