ಹಾಸನದ ಇಬ್ಬರು ಖೋ ಖೋ ಕ್ರೀಡಾಪಟುಗಳಿಗೆ ಪ್ರತಿಷ್ಠಿತ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಇದೇ ಮೊದಲ ಬಾರಿಗೆ ಇಬ್ಬರು ಖ್ಯಾತ ಖೋ ಖೋ ಆಟಗಾರರಿಗೆ ಪ್ರಶಸ್ತಿ ಲಭಿಸಿದೆ.
ಶಿವಕುಮಾರ್ ಹೆಚ್.ಎನ್. ಹಾಗೂ ಸುದರ್ಶನ್ ಪ್ರಶಸ್ತಿ ಪಡೆದ ಖೋ ಖೋ ಆಟಗಾರರು. ಇಬ್ಬರು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಖೋ ಖೋ ಪಂದ್ಯಾವಳಿಗಳಲ್ಲಿ ಭಾರತ ಖೋ ಖೋ ತಂಡವನ್ನು ಪ್ರತಿನಿಧಿಸಿ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಅಲ್ಲದೇ ಉತ್ತಮ ಆಟಗಾರ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ನಾಗರಾಜು-ಲಕ್ಷಮ್ಮ ದಂಪತಿಗಳ ಪುತ್ರ ಶಿವಕುಮಾರ್ ಎಚ್.ಎನ್. ಬಡತನದಲ್ಲಿ ಬೆಳೆದಿದ್ದು ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಹೂವಿನ ವ್ಯಾಪಾರ ಮಾಡುತ್ತಾನೆ. ಸಮಯ ಸಿಕ್ಕಾಗ ಖೋ ಖೋ ಅಭ್ಯಾಸ ಮಾಡಿ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ನಡೆದ ಟೂರ್ನಿಮೆಂಟ್ ಗಳಲ್ಲಿ ಭಾಗವಹಿಸಿ ತಂಡ ಗೆಲ್ಲಲು ಉತ್ತಮ ಪ್ರದರ್ಶನ ನೀಡಿದ್ದು, ವೈಯುಕ್ತಿಕ ಬೆಸ್ಟ್ ಚೇಸರ್, ಬೆಸ್ಟ್ ರೈಡರ್ ಸೇರಿದಂತೆ ಹಲವು ಅವಾರ್ಡ್ ಪಡೆದಿರುತ್ತಾರೆ.
ಶ್ರೀಕಂಠೇಗೌಡ ಹಾಗೂ ಸರೋಜಮ್ಮ ಅವರ ಪುತ್ರ ಸುದರ್ಶನ್ ಕೂಡ ಅತ್ಯುತ್ತಮ ಖೋ ಖೋ ಆಟಗಾರನಾಗಿದ್ದು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾನೆ. ಜನವರಿಯಲ್ಲಿ ನೇಪಾಳದ ಕಠ್ಮಂಡುವಿನಲ್ಲಿ ನಡೆದ ಹದಿಮೂರನೇ ಸೌತ್ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಖೋಖೋ ತಂಡವನ್ನು ಪ್ರತಿನಿಧಿಸಿ ಭಾರತ ತಂಡ ಪ್ರಥಮ ಸ್ಥಾನ ಪಡೆಯಲು ಉತ್ತಮ ಪ್ರದರ್ಶನ ನೀಡಿದ ಪ್ರಮುಖ ಆಟಗಾರನಾಗಿದ್ದಾನೆ. ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಾಗೂ ಹೊರ ರಾಜ್ಯಗಳಲ್ಲಿ ನಡೆದ ಖೋ ಖೋ ಟೂರ್ನಿಮೆಂಟ್ ಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸುವುದರ ಜೊತೆಗೆ ವೈಯುಕ್ತಿಕ ಬಹುಮಾನಗಳನ್ನು ಪಡೆದಿರುತ್ತಾನೆ.

ಇಬ್ಬರು ಖೋಖೋ ಆಟಗಾರರು ಪ್ರತಿಷ್ಠಿತ ಪ್ರಶಸ್ತಿ ಪಡೆದಿರುವುದರಕ್ಕೆ ಹಾಸನಾಂಬ ಖೋಖೋ ತಂಡದ ಆಟಗಾರರು ಹಾಗೂ ಹಿರಿಯ ಮತ್ತು ಕಿರಿಯ ಖೋ ಖೋ ಆಟಗಾರರು ಅಭಿನಂದನೆ ಸಲ್ಲಿಸಿದ್ದಾರೆ.
brand name cialis online His family history of cancer was negative