ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ ಅಡಿ ಸಹಾಯಕ ಆರೋಗ್ಯ ಸಿಬ್ಬಂದಿ ತರಬೇತಿ ನಂತರ ಉದ್ಯೋಗ

0

ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ ಅಡಿ ಸಹಾಯಕ ಆರೋಗ್ಯ ಸಿಬ್ಬಂದಿ ತರಬೇತಿಗಳ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ  ಕೆ . ನಾರಾಯಣಮೂರ್ತಿ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಮಹಾಮಾರಿಯ ಪ್ರಭಾವವನ್ನು ನಿಯಂತ್ರಿಸಲು ಹಾಗೂ ಆರೋಗ್ಯ ಕ್ಷೇತ್ರದಲ್ಲಿ ನುರಿತ ಸಿಬ್ಬಂದಿ ಕೊರತೆ ನೀಗಿಸುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಸಚಿವಾಲಯವು ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ 3.0ರ ಮೂಲಕ ಆರೋಗ್ಯ ವಲಯದಲ್ಲಿ ವಿವಿಧ ಕೋರ್ಸ್‍ಗಳನ್ನು ಉಚಿತವಾಗಿ ಆಯೋಜಿಸುತ್ತಿದೆ. ಈ ಹಿನ್ನಲೆಯಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿ, ಹಾಸನ ವತಿಯಿಂದ ಆಸಕ್ತ ಯುವಕ ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಜೂ.4ರೊಳಗೆ ಸಲ್ಲಿಸಬಹುದಾಗಿದೆ.
ಆರ್ಹ ಅಭ್ಯರ್ಥಿಗಳು 18 ರಿಂದ 45 ವರ್ಷದ ವಯಸ್ಸಿನವರಾಗಿರಬೇಕು. ಎಸ್.ಎಸ್.ಎಲ್.ಸಿ/10 ತರಗತಿ ಪಾಸಾದ ಅಭ್ಯರ್ಥಿಗಳು, ಜನರಲ್ ಡ್ಯೂಟಿ ಅಸಿಸ್ಟೆಂಟ್, ಹೋಂ ಹೆಲ್ತ್‍ಏಡ್ ,ಜನರಲ್ ಡ್ಯೂಟಿ ಅಸಿಸ್ಟೆಂಟ್ ಅಡ್ವಾನ್ಸ್‍ಡ್,ಮೆಡಿಕಲ್ ಎಕ್ವಿಪ್‍ಮೆಂಟ್ ಟೆಕ್ನಾಲಜಿ ಅಸಿಸ್ಟೆಂಟ್ . ಪಿಯು/12 ನೇ ತರಗತಿ-ವಿಜ್ಞಾನಕೋರ್ಸ್ ಮುಗಿಸಿದವರಿಗೆ ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಷಿಯನ್-ಬೇಸಿಕ್, ಪ್ಲೇಬೇಟೋಮಿಸ್ಟ್   ಹಾಗೂ ಮೆಡಿಕಲ್ ರೆಕಾರ್ಡ್ ಅಸಿಸ್ಟಂಟ್ ತರಬೇತಿ ಪಡೆಯಲು ಅವಕಾಶ ಇರುತ್ತದೆ.
ಈಗಾಗಲೇ ಹೆಲ್ತ್ ಕೇರ್ ಅಥವಾ ನರ್ಸಿಂಗ್ ಕ್ಷೇತ್ರದಲ್ಲಿ ಅನುಭವ ಇರುವ ಅಭ್ಯರ್ಥಿಗಳು ಸಹ ಕೌಶಲ್ಯ ವೃಧ್ಧಿಗಾಗಿ ಅರ್ಜಿ ಸಲ್ಲಿಸಬಹುದು.
ಅರ್ಹ ಅಭ್ಯರ್ಥಿಗಳು ಗೂಗಲ್ ಫಾರ್ಮ https://docs.google.com/forms/d/e/1FAIpQLSeZx5iH59LAp11p6m22WrC8O2sSO0HRzi8Awsqx8n5cWxsqRg/viewform?usp=sf_link

ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು ಎಂದು ಅವರು ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಯವರ ಕಛೇರಿಯ ಮೊ: 8861391568/8861646939/9844552919/9008509040 ನ್ನು ಸಂಪರ್ಕಿಸಬಹುದಾಗಿದೆ.

ನೀವು ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳಿ ಮತ್ತು ಇದರ ಸೌಲಭ್ಯ ಪಡೆದುಕೊಳ್ಳಿ

LEAVE A REPLY

Please enter your comment!
Please enter your name here