ಸತತ 18 ವರ್ಷ ದೇಶಸೇವೆ ಸಲ್ಲಿಸಿ ನಿವೃತ್ತರಾದ ಹಾಸನ ಜಿಲ್ಲೆಯ ಹೆಮ್ಮೆಯ ಪುತ್ರ ಅಹಮದ್ ಅವರಿಗೆ ಕೃತಜ್ಞತಾ ಸನ್ಮಾನ

0

ಕಳೆದ 18 ವರ್ಷಗಳಿಂದ ಅಂದರೆ 2004ರಿಂದ 2021 ಭಾರತೀಯ ಸೇನೆ ” ರಜಪೂತ್ ರೆಜಿಮೆಂಟ್ ” ನಲ್ಲಿ ನಿರಂತರ ದೇಶ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನಮ್ಮ ಹಾಸನ ಜಿಲ್ಲೆಯ ಹೆಮ್ಮೆಯ ಪುತ್ರ ಅಹಮದ್ ಅವರಿಗೆ ಸಕಲೇಶಪುರದಲ್ಲಿ ಕುಟುಂಬಸ್ಥರು , ಸ್ನೇಹಿತರು , ಊರಿನವರಿಂದ ಸವಿನೆನಪಿನ ಕೃತಜ್ಞತಾ ಸನ್ಮಾನ !!

ನೀವು ನೋಡ್ತಾ ಇರೋ ಭಾವಚಿತ್ರಗಳ ಖಡಕ್ ಯೋಧ ಕಳೆದ 2005 ರಿಂದ 2008 ರವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ OP ರಕ್ಷಕ ಮತ್ತು OP ಪರಾಕ್ರಮ್ ಕಾರ್ಯಾಚರಣೆಗಳಲ್ಲಿ ಭಾಗವಹಿಸಿ.


2011 ರಿಂದ 2013 ಸಿಕ್ಕಿಂ ಎತ್ತರದ ಪ್ರದೇಶ, ಚೀನಾ ಗಡಿ ಕಾರ್ಯಾಚರಣೆಗಳು‌ ನಡೆಸಿ.
ವಿಶೇಷ ಟ್ರೋಗಾಗಿ 2017 UN ಮಿಸನ್ ಕಾಂಗೋ (ದಕ್ಷಿಣ ಆಫ್ರಿಕಾ) ಹೀಗೆ ದೇಶಕ್ಕಾಗಿ ಜೀವದದ ಹಂಗಿಲ್ಲದೆ ಹೋರಾಡುತ್ತ

ಇಂದು ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿ ಮರಳಿ ಮನೆಗೆ ಬಂದಿದ್ದು ., ಈ ವರೆಗೂ ದೇಶಕ್ಕಾಗಿ ಸಲ್ಲಿಸಿದ ಸೇವೆ ಹೆಮ್ಮೆಯ ವಿಷಯವಾಗಿದ್ದು ಮತ್ತೊಂದು ಜನುಮ ಅಂತಿದ್ದರೆ , ಪುನಃ ದೇಶ ಸೇವೆ ಅಂದರೆ ಭಾರತೀಯ ಸೇನಾಪಡೆಯಲ್ಲೇ ಕರ್ತವ್ಯ ಸಲ್ಲಿಸಲು ಇಚ್ಚಿಸುತ್ತೇನೆ ಎಂದರು .

ಅಹಮದ್ ಬೇಲೂರು ಇವರು ನಿವೃತ್ತಿ ಜೀವ ಸುಖ ಶಾಂತಿ ನೆಮ್ಮದಿ ಸಂತೋಷದಿಂದ ಕೂಡಿರಲಿ ಎಂದು ಹಾಸನ ಜನತೆಯ ಪರವಾಗಿ ಶುಭ ಆಶಿಸೋಣ ಧನ್ಯವಾದಗಳು

indianarmy hassan hassannews belur

LEAVE A REPLY

Please enter your comment!
Please enter your name here