ಅರಿಶಿನವನ್ನು ಏಕೆ ಬಳಸುತ್ತಾರೆ? ಇದು ನಮ್ಮ ದೇಹಕ್ಕೆ ಹೇಗೆ ಸಹಾಯಕಾರಿ?

0

ಅಡುಗೆಗೆ ಅರಿಶಿನ ಬಳಸುವುದು ನಮ್ಮ ಆರೋಗ್ಯಕ್ಕೆ ಬಹಳ ಉಪಯೋಗಕಾರಿ “ಅರಿಶಿನವನ್ನು ಸರ್ವಗುಣ ಸಂಪನ್ನ” ಎಂದು ಕರೆಯಬಹುದು.

ಅರಿಶಿನದಲ್ಲಿ ಬೀಟಾ ಕ್ಯಾರೊಟಿನ್, ಆಸ್ಕಾರ್ಬಿಕ್ ಆಸಿಡ್ , ಫೈಬರ್, ಐರನ್, ಪೋಟಾಸಿಯಂ ಝಿಂಕ್ ಅಡಗಿದೆ .

ಪ್ರಯೋಜನಗಳು

• ಯಾವುದೇ ಗಾಯ ಆದರೂ ಅರಿಶಿನ ಉಪಯೋಗಿಸುವುದು ಸಾಮಾನ್ಯ ಇದರಲ್ಲಿ ಹಲವಾರು ರೀತಿಯ ಔಷಧಿಗಳಿವೆ ಇದಕ್ಕೆ ಕ್ಯಾನ್ಸರ್ ಎಂಬ ದೊಡ್ಡ ರೋಗವೂ ನಿವಾರಣೆ ಮಾಡುವ ಶಕ್ತಿ ಇದೆ.
• ಇದು ಸಂಧಿವಾತ ಕಾಯಿಲೆಯನ್ನು ತೊಲಗಿಸುತ್ತದೆ, ಇದು ವಯಸ್ಸಾಗುತ್ತಾ ಬರುವ ಕಾಯಿಲೆ. ಅರಿಶಿನದ ಗುಣಗಳು ಇದನ್ನು ತಡೆದು ನೋವನ್ನು ಕಡಿಮೆ ಮಾಡುತ್ತದೆ.
• ಅರಿಶಿನದಲ್ಲಿ ಕರ್ಕ್ಯುಮಿನ್ ಎಂಬ ಅಂಶವಿದೆ ಇದು ನಮ್ಮ ದೇಹದಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಅನ್ನು ಉತ್ಪಾದಿಸುತ್ತದೆ.ಇದು ದೇಹದಲ್ಲಿರುವ ಫ್ರೀ ರಾಡಿಕಲ್ಸ್ ಜೊತೆ ಹೋರಾಡಿ ಕಾಯಿಲೆಗಳನ್ನು ದೂರ ಮಾಡುತ್ತದೆ.

• ಮುಖದಲ್ಲಿ ಸುಕ್ಕುಗಳು ಇದ್ದರೆ ಅರಿಶಿನ ಅದನ್ನು ತಡೆಗಟ್ಟಲು ಪ್ರಮುಖ ಪಾತ್ರವನ್ನು ಹೊಂದಿದೆ. ಇದನ್ನು ನಿಮ್ಮ ಮುಖದ ಮೇಲೆ ಹಚ್ಚಿ ಇಪ್ಪತ್ತು ನಿಮಿಷ ಕಾಲು ಬಿಟ್ಟು ಬಿಸಿ ನೀರಲ್ಲಿ ತೊಳೆದರೆ ನಿಮ್ಮ ಮುಖದಲ್ಲಿರುವ ಸುಕ್ಕುಗಳು ತೊಲಗುತ್ತದೆ.

-ತನ್ವಿ. ಬಿ

LEAVE A REPLY

Please enter your comment!
Please enter your name here