ಹಾಸನದಲ್ಲಿ ಐಪಿಎಲ್ ಬೆಟ್ಟಿಂಗ್: 6 ಮಂದಿ ಸೆರೆ

0

ಬೇಲೂರು: ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಮುಂಬೈ ಇಂಡಿಯನ್ಸ್-ಲಕ್ನೋ ತಂಡಗಳ ನಡುವಿನ ಐಪಿಎಲ್ ಕ್ರಿಕೆಟ್ ಪಂದ್ಯದ ವೇಳೆ ಬೆಟ್ಟಿಂಗ್ ಆಡುತ್ತಿದ್ದ ಅಡ್ಡೆ ಮೇಲೆ ಪಿಎಸ್‌ಐ ಶಿವನಗೌಡ ಜಿ.ಪಾಟೀಲ್ ಹಾಗೂ ಸಿಬ್ಬಂದಿ ಭಾನುವಾರ ಸಂಜೆ ದಿಢೀರ್ ದಾಳಿ ನಡೆಸಿ 6 ಮಂದಿಯನ್ನು ಬಂಧಿಸಿದ್ದಾರೆ.

ಬೇಲೂರಿನ ಜಯರಾಮ, ರಾಜು, ಸೂರಾಪುರ ಗ್ರಾಮದ ವೆಂಕಟೇಶ್, ಬಿಟ್ರುವಳ್ಳಿ ಗ್ರಾಮದ ಜಯರಾಮ ಬಿ.ಹೆಚ್., ಹೊಳೆಬೀದಿಯ ಚರಣ್ ಮತ್ತು ಮೂಡಿಗೆರೆ ತಾಲೂಕು ಬೆಟ್ಟದ ಮನೆ ಗ್ರಾಮದ ಸ್ಥಾನಿ ಬಂಧಿತ ಆರೋಪಿಗಳು. ಪಣವಾಗಿಟ್ಟಿದ್ದ 89,140 ರೂ. ನಗದು ಕೀ ಪ್ಯಾಡ್ ಮತ್ತು ಐಫೋನ್. ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅದೇ ದಿನ ರಾತ್ರಿ 10.30 ರಲ್ಲಿ ಕಸಬಾ ಹೋಬಳಿ, ಮರೂರು ಗ್ರಾಮದ ಬಸವೇಶ್ವರ ಬೀದಿಯ ಶ್ರೀ ಯಲ್ಲಮ್ಮ, ದೇವಸ್ಥಾನದ ಹತ್ತಿರವಿರುವ ಬೀದಿ ಲೈಟ್ ಬೆಳಕಿನಲ್ಲಿ ಜೂಜಾಡುತ್ತಿದ್ದಾರೆಂಬ ಮಾಹಿತಿ ಆಧರಿಸಿ ಪಿಐ ಯೋಗೇಶ್ ಕೆ.ಎಂ. ಅವರ ತಂಡ ಕಾರ್ಯಾಚರಣೆ ನಡೆಸಿ 7 ಮಂದಿಯನ್ನು ಬಂಧಿಸಿ ಪಣಕ್ಕಿಟ್ಟಿದ್ದ 15,800 ರೂ. ನಗದು ವಶಪಡಿಸಿಕೊಂಡಿದೆ. ಎರಡು ಪ್ರಕರಣಗಳಲ್ಲಿ ಒಟ್ಟು 13 ಮಂದಿಯನ್ನು ಬಂಧಿಸಿರುವ ಪೊಲೀಸರು, 1 ಲಕ್ಷದ 4940 ರೂ. ನಗದು ವಶಪಡಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here