ಶಾಂತಿ ಸಭೆ ಹಬ್ಬಗಳ ಸುಗಮ ಆಚರಣೆಗೆ

0

ಜಾವಗಲ್: ಗೌರಮ್ಮ ಹಾಗೂ ಗಣಪತಿ ಹಬ್ಬವನ್ನು
ಆಚರಿಸಲು ನಿಯಮಗಳ ಬಗ್ಗೆ ವೃತ್ತ ನಿರೀಕ್ಷಕರಾದ
ವಸಂತಕುಮಾರ್ ಹೋಬಳಿಯ ಮುಖಂಡರಿಗೆ ತಿಳಿಸಿದರು,
ಪಟ್ಟಣದ ಪೋಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು ಸತತ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಹಿಂದೂಗಳ ಪವಿತ್ರ ಹಬ್ಬ ಗಣೇಶನ
ಹಬ್ಬವನ್ನು ಆಚರಿಸಲು ಸರ್ಕಾರ ಈ ವರ್ಷವು ಕೂಡ ಸಾಕಷ್ಟು ನಿಯಮ ಜಾರಿಗೊಳಿಸಿದೆ ಅದರಂತೆ ನಿಮ್ಮ ಗ್ರಾಮಗಳ ಪರಿಮಿತಿಯಲ್ಲಿ ಸರ್ಕಾರದ ನಿಯಮಾ‌ನುಸಾರ ಗಣೇಶ ಹಬ್ಬ ಆಚರಿಸಲು
ಮನವಿ ಮಾಡಿದರು,
ಸಾರ್ವಜನಿಕವಾಗಿ ಹಾಗೂ ದೇವಾಲಯದಲ್ಲಿ ಪ್ರತಿಷ್ಠಾಪಿಸುವ ಗಣೇಶನ ವಿಗ್ರಹ 4 ಅಡಿ ಮೀರದೆ
ಮನೆಯಲ್ಲಿ ಪ್ರತಿಷ್ಠಾಪಿಸುವ ಗಣೇಶ 2 ಅಡಿ ಮೀರದಿರಲು, ಗಣೇಶ ವಿಗ್ರಹ ಕೂರಿಸಲು ಸ್ಥಳೀಯ
ಗ್ರಾಮ ಪಂಚಾಯಿತಿ ಅನುಮತಿ ಕಡ್ಡಾಯ, ಸಾಂಸ್ಕೃತಿಕ, ಸಂಗೀತ, ನೃತ್ಯ ಕಾರ್ಯಮಗಳು ನಿಷೇಧ ಮಾಡಲಾಗಿದೆ, ಅಯೋಜಕರು ಲಸಿಕೆ ಕಾರ್ಯಕ್ರಮ ರೂಪಿಸಲು ಅವಕಾಶ ನೀಡಲಾಗಿದೆ,ಐದು ದಿನಗಳಲ್ಲಿ ವಿಸರ್ಜಿಸ ಬೇಕು, ಗಣೇಶನ ವಿಸರ್ಜಿಸಲು ಮೆರವಣಿಗೆಗೆ ಅವಕಾಶವಿಲ್ಲ ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಗಣೇಶನ ದರ್ಶನಕ್ಕೆ 20 ಜನಕ್ಕಿಂತ ಹೆಚ್ಚು ಜನಕ್ಕೆ ಅವಕಾಶ
ನೀಡದೆ ಯಾವುದೇ ಅನ್ಯಧರ್ಮದವರಿಗೆ ಚುತಿ
ಬರದೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು
ತಿಳಿಸಿದರು,
ಈ ಸಂದರ್ಭದಲ್ಲಿ ಠಾಣಾ ಉಪನಿರೀಕ್ಷಕರಾದ ಎಂ ಬಿ ಶೋಭಾ, ಜೆಡಿಎಸ್ ಮುಖಂಡರಾದ ಜೆ.ಜಿ ತಿಮ್ಮೇಗೌಡ, ತಾ ಪಂ ಸದಸ್ಯ ವಿಜಯಕುಮಾರ್, ವಿ ಟಿ ಎಸ್ ನಾಗರಾಜು ಮಾತನಾಡಿದರು,
ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷರಾದ ಮಸಾಲೆ ರಮೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಂದೂರು ವಿಶ್ವನಾಥ್, ಗ್ರಾಮ ಪಂಚಾಯಿತಿ ಸದಸ್ಯರಾದ ದೊರೆಸ್ವಾಮಿ, ಅಶೋಕ್, ಆನಂದಪ್ಪ, ರಂಗಸ್ವಾಮಿ, ಬಾಬು ದಿಗ್ಗೇನಹಳ್ಳಿ, ಅರುಣ್, ಪುರುಷೋತ್ತಮ ಹಾಗೂ ಸುತ್ತ ಮುತ್ತ ಗ್ರಾಮಸ್ಥರು ಇದ್ದರು

LEAVE A REPLY

Please enter your comment!
Please enter your name here