ಎಲ್ಲ ಜೀವಿಗಳಿಗೆ ಮೂಲ ಸಂಪನ್ಮೂಲ ಕೇಂದ್ರ ಅರಣ್ಯ

0

ಜಾವಗಲ್: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಜಗದ ಎಲ್ಲ ಜೀವಿಗಳಿಗೆ ಮೂಲ ಸಂಪನ್ಮೂಲ ಕೇಂದ್ರ ಅರಣ್ಯ ಎಂದು ನಾಗೇಂದ್ರ ಪ್ರತಿಷ್ಠಾನದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಅಭಿಪ್ರಾಯಪಟ್ಟರು
ಪಟ್ಟಣದ ಜಾವಗಲ್ ಶ್ರೀನಾಥ್ ಕ್ರೀಡಾಂಗಣದಲ್ಲಿ ನಾಗೇಂದ್ರ ಪ್ರತಿಷ್ಠಾನದ ವತಿಯಿಂದ ಸ್ವಚ್ಚತೆ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇಂದು ಆಧುನಿಕ ಪ್ರಪಂಚದ ಭರಾಟೆಯಲ್ಲಿ ಅರಣ್ಯನಾಶದಿಂದ ಹಸಿರು ಮನೆ ಪರಿಣಾಮ ಹೆಚ್ಚಿನ ಅಂತರಿಕ ಉಷ್ಣಾಂಶ, ದಿಕ್ಕುತಪ್ಪಿದ ಮಾರುತಗಳನ್ನು ನೋಡುತ್ತಿದ್ದೇವೆ. ಆದ್ದರಿಂದ ಪ್ರತಿಯೊಬ್ಬರೂ ವರ್ಷಕ್ಕೊಂದು ಗಿಡ ನೆಟ್ಟು ಪೋಷಿಸಿ ಬೆಳೆಸಬೇಕೆಂದರು.
ಆರ್.ಎಸ್.ಎಸ್. ಮುಖಂಡ ಚಂದ್ರಶೇಖರ್ ಮಾತನಾಡಿ ಅರಣ್ಯ ಇಲಾಖೆಯಿಂದ ರೈತರು ರಿಯಾಯಿತಿ ದರದಲ್ಲಿ ಗಿಡಗಳನ್ನು ಖರೀದಿಸಿ, ತಮ್ಮ ಜಮೀನಿನಲ್ಲಿ ಕೃಷಿಯ ಜೊತೆಗೆ ಸಸಿಗಳನ್ನೂ ನೆಟ್ಟು ಪೋಷಿಸಿದರೆ ಇಲಾಖೆ ಅವರಿಗೆ ಪ್ರೋತ್ಸಾಹಧನ ನೀಡುತ್ತದೆ. ನೆಟ್ಟ ಗಿಡಗಳನ್ನು ಸಂರಕ್ಷಣೆ ಮಾಡಿದರೆ ವರ್ಷದ ಲೆಕ್ಕದಲ್ಲಿ ಹಣವನ್ನು ರೈತರ ಖಾತೆಗೆ ನೇರವಾಗಿ ಹಾಕಲಾಗುತ್ತದೆ. ಈ ಸೌಲಭ್ಯವನ್ನು ಎಲ್ಲಾ ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ದೊರೆಸ್ವಾಮಿ ಮಾತನಾಡಿ ಇಂದಿನ ದಿನಮಾನಗಳಲ್ಲಿ ಆರೋಗ್ಯಕರ ಬದುಕನ್ನು ನಡೆಸಲು ಉತ್ತಮ ಜೀವನ ಶೈಲಿಯೊಂದಿಗೆ ಸ್ವಚ್ಚ ಹಾಗೂ ಉತ್ತಮ ಪರಿಸರ ಅತಿ ಅಗತ್ಯವಾಗಿದ್ದು, ಅದಕ್ಕಾಗಿ ನಾವು ಮರ ಗಿಡಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಸುವ ಮೂಲಕ ಪ್ರಕೃತಿಗೆ ನಮ್ಮ ಕೊಡುಗೆ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು
ಕಾರ್ಯಕ್ರಮದಲ್ಲಿ ಬಿಜೆಪಿ ಹೋಬಳಿ ಅಧ್ಯಕ್ಷ ಮಸಾಲೆ ರಮೇಶ್, ಉಪಪ್ರಾಂಶುಪಾಲ ಯೋಗೀಶ್, ಎಸ್.ಡಿ‌.ಎಂ.ಸಿ. ಅಧ್ಯಕ್ಷ ಪುಟ್ಟೇಗೌಡ, ಮುಖಂಡರಾದ ಶಿವನೇನಹಳ್ಳಿ ಲಕ್ಷ್ಮೀಶ್, ಬೋಜಣ್ಣ. ದಯಾನಂದ್, ಕೃಷ್ಣೋಜಿರಾವ್, ಮಂಜುನಾಥ್ ಮತ್ತಿತರರು ಇದ್ದರು

LEAVE A REPLY

Please enter your comment!
Please enter your name here