ಬೇಲೂರು ತಾಲೂಕಿನ ಸಂಕೆನಹಳ್ಳಿ ಕ್ಯಾಂಟರ್ ಮತ್ತು ಕಾರು ನಡುವೆ ಅಪಘಾತ: ಓರ್ವ ಸಾವು ಮತ್ತೋರ್ವ ಗಂಭೀರ

0

ಹಾಸನ: ಕಾರು ಹಾಗೂ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಓರ್ವ ಯುವಕ ಸಾವನ್ನಪ್ಪಿ ಮತ್ತೊರ್ವ ಯುವಕ

ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಸಂಕೇನಹಳ್ಳಿ ಬಳಿ ನಡೆದಿದೆ. ಚಿಕ್ಕಮಗಳೂರು ಮೂಲದ ಹನಿಕ್ (19) ಮೃತ ಯುವಕ ನಾ, ಕೆಎ-18-ಪಿ-4442 ನಂಬರ್‌ನ ಕಾರಿನಲ್ಲಿ ಚಿಕ್ಕಮಗಳೂರಿದಿಂದ ಹಾಸನದ ಕಡೆಗೆ ಹನಿಕ್ ಹಾಗೂ

ಆತನ ಸ್ನೇಹಿತ ಬರುತ್ತಿದ್ದ ವೇಳೆ ಕೆಎ-12-ಡಿ-4142 ನಂಬರ್‌ನ ಕ್ಯಾಂಟರ್ ಹಾಸನದಿಂದ ಬೇಲೂರು ಕಡೆಗೆ ಹೋಗುತ್ತಿದ್ದು ಈ ವೇಳೆ ಮುಖಾಮುಖಿ ಡಿಕ್ಕಿಯಾಗಿದೆ.ತೀವ್ರವಾಗಿ ಗಾಯಗೊಂಡಿದ್ದ ಹನಿಕ್‌ನನ್ನು

ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಕಾರು ಚಾಲನೆ ಮಾಡುತ್ತಿದ್ದ ಯುವಕನ ಸ್ಥೀತಿ ಗಂಭೀರವಾಗಿದ್ದು ಹಾಸನದ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಆತನ ಗುರುತು ಪತ್ತೆಯಾಗಿಲ್ಲ.ಅಪಘಾತದಿಂದ ಹಾಸನ-ಬೇಲೂರು ರಸ್ತೆಯಲ್ಲಿ ಕೆಲ ಕಾಲ

ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿತ್ತು.ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಟ್ರಾಫಿಕ್ ಜಾಮ್ ತೆರವುಗೊಳಿಸಿದರು.

LEAVE A REPLY

Please enter your comment!
Please enter your name here