ಹಾಸನ : ಅಪರಿಚಿತ ವಾಹನ ಡಿಕ್ಕಿಯಾಗಿ ಯುವಕನೊಬ್ಬ ಸ್ಥಳದ ಸಾವನಪ್ಪಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಪಾಳ್ಯ ಬಳಿ ಜೂನ್ 20ರ ಮುಂಜಾನೆ ನಡೆದಿದೆ.
ಇಲ್ಲಿನ ಹಳೆಪಾಳ್ಯದ ನಿಂಗರಾಜು(35) ಎಂಬಾತನೆ ಮೃತಪಟ್ಟ ದುರ್ದವಿಯಾಗಿದ್ದಾನೆ.
ಇಂದು ಬೆಳಗ್ಗೆ ಹಳೆಪಾಳ್ಯದಿಂದ ಪಾಳ್ಯ ಗ್ರಾಮಕ್ಕೆ ಬರುವಾಗ ಸಕಲೇಶಪುರ ಕಡೆಯಿಂದ ಬರುತ್ತಿದ್ದ ಅಪರಿಚಿತ ವಾಹನ ಡಿಕ್ಕಿ ಮಾಡಿ ಪರಾರಿಯಾಗಿದ್ದಾನೆ.
ಸ್ವಂತ ವ್ಯಾಪಾರ ಹಾಗೂ ಕೃಷಿ ಕೆಲಸ ಮಾಡಿಕೊಂಡಿದ್ದ ನಿಂಗರಾಜು ಸಾವಿಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಚತುಷ್ಪತ ಹೆದ್ದಾರಿ ಕಾಮಗಾರಿ ನಡೆಸುತ್ತಿರುವುದು ಅವೈಜ್ಞಾನಿಕತೆಯಿಂದ ಕೂಡಿತ್ತು ಪದೇ ಪದೇ ಅಪಘಾತಗಳು ಸಂಭವಿಸುತ್ತೇವೆ. ಅದರಿಂದ ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಹಳ್ಳಿ ರಸ್ತೆಗಳ ಬಳಿ ಯಾವುದೇ ಸೂಚನ ಫಲಕಗಳಿಲ್ಲ, ಕಾಮಗಾರಿ ಸಂಪೂರ್ಣ ಅವಜ್ಞಾನಿಕದಿಂದ ಕೂಡಿದ್ದು ಹೆದ್ದಾರಿ ಬದಿಯಲ್ಲಿ ಚಲಿಸುವ ವಾಹನಗಳು ವಾಹನ ಸವಾರರಿಗೆ ಸರಿಯಾಗಿ
ಕಾಣದೆ ಅಪಘಾತಗಳು ಸಂಭವಿಸುತ್ತಿವೆ ಈ ಕುರಿತಂತೆ ಹಲವು ಬಾರಿ ಮನವಿ ಮಾಡಿದ್ದರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾತ್ರ ಕ್ಯಾರೇ ಇನ್ನುತ್ತಿಲ್ಲ ಈ ಕುರಿತಾಗಿ ಇನ್ನೊಂದು ವಾರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಜೆಡಿಎಸ್ ಮುಖಂಡ ಕಣದಹಳ್ಳಿ ಮಂಜಣ್ಣ ತಿಳಿಸಿದ್ದಾರೆ.