ಹಾಸನದಲ್ಲಿ 22, 23ರಂದು ಹೊಯ್ಸಳ ಸಾಹಿತ್ಯೋತ್ಸವ ( ಡಾ.ಎಸ್.ಎಲ್.ಭೈರಪ್ಪ ಉದ್ಘಾಟನೆ )

0

ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಅ.22 ಹಾಗೂ 23ರಂದು ಎರಡು ದಿನ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹೊಯ್ಸಳ ಸಾಹಿತ್ಯೋತ್ಸವ-2022 ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಕಸಾಪ ಅಧ್ಯಕ್ಷ ಡಾ.ಎಚ್.ಎಲ್ ಮಲ್ಲೇಶಗೌಡ ತಿಳಿಸಿದರು.

ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನ ನಡೆಯುವ ಹೊಯ್ಸಳ ಸಾಹಿತ್ಯೋತ್ಸವವನ್ನು ನಾಡಿನ ಹಿರಿಯ ಸಾಹಿತಿ ಡಾ. ಎಸ್.ಎಲ್ ಭೈರಪ್ಪ ಉದ್ಘಾಟಿಸಲಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ, ನಾಡಿನ ಹೆಸರಾಂತ ಕವಿಗಳಾದ ಡಾ. ಎಚ್.ಎಸ್ ವೆಂಕಟೇಶಮೂರ್ತಿ, ಡಾ.ದೊಡ್ಡರಂಗೇಗೌಡ, ಆರ್.ಲಕ್ಷ್ಮಣರಾವ್, ಜೋಗಿ ಉಪಸ್ಥಿತರಿರುವರು ಎಂದರು.
ಈ ಕಾರ್ಯಕ್ರಮದಲ್ಲಿ ಒಟ್ಟು 8 ಸಾಹಿತ್ಯ ಗೋಷ್ಠಿಗಳು ನಡೆಯಲಿದ್ದು, ನಾಡಿನ 70ಕ್ಕೂ ಹೆಚ್ಚು ಹೆಸರಾಂತ ಹಿರಿಯ ಸಾಹಿತಿಗಳು, ಲೇಖಕರು, ವಿಮರ್ಶಕರು, ಯುವ ಬರಹಗಾರರು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಹೊರ ಜಿಲ್ಲೆಯ ನೋಂದಾಯಿತ 200 ಹಾಗೂ ಜಿಲ್ಲೆಯ ನೋಂದಾಯಿತ 600 ಮಂದಿಗಷ್ಟೇ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ಅವಕಾಶವಿದ್ದು, 250 ರೂ. ನೋಂದಣಿ ಶುಲ್ಕ ನಿಗದಿ ಪಡಿಸಲಾಗಿದೆ. ಹೊರ ಜಿಲ್ಲೆಯವರಿಗೆ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಎರಡು ದಿನಗಳ ಕಾಲ ಬೆಳಗ್ಗೆ ಉಪಹಾರದ, ಮಧ್ಯಾಹ್ನ ಊಟ ಹಾಗೂ ಚಹಾ ವ್ಯವಸ್ಥೆಯನ್ನು ಪರಿಷತ್ ವತಿಯಿಂದ ಮಾಡಲಾಗಿದೆ ಎಂದರು.
ಮೊದಲು ನೋಂದಣಿ ಮಾಡಿದವರಿಗೆ ಆದ್ಯತೆ ಮೇರೆಗೆ ಅವಕಾಶ ನೀಡಲಾಗುತ್ತಿದ್ದು, ಜಿಲ್ಲೆಯ ಕನ್ನಡ ಸ್ನಾತಕೋತ್ತರ ಪದವಿ, ಕನ್ನಡ ಭಾಷೆಯ ಪದವಿ, ಬಿ.ಎಡ್, ಪತ್ರಿಕೋದ್ಯಮದ ಪದವಿ/ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಯಾವುದೇ ನೋಂದಣಿ ಶುಲ್ಕವಿಲ್ಲದೆ ತಮ್ಮ ಹೆಸರು ನೋಂದಣಿ ಮಾಡಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ,” ಎಂದು ಹೇಳಿದರು.
ಕಾರ್ಯಕ್ರಮದ ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಕಸಾಪ ಗೌರವ ಕಾರ್ಯದರ್ಶಿ ಬಿ.ಆರ್ ಬೊಮ್ಮೇಗೌಡ (ಮೊ. 9108847480), ಜಾವಗಲ್ ಪ್ರಸನ್ನಕುಮಾರ್ (ಮೊ.9964548264), ಕೋಶಾಧ್ಯಕ್ಷ ಬಿ.ಎನ್.ಜಯರಾಮು (9480582829) ಸಂಪರ್ಕಿಸಬಹುದಾಗಿದೆ.

ಸುದ್ದಿಗೋಷ್ಠಿಯಲ್ಲಿ ಕಸಾಪ ಜಿಲ್ಲಾಗೌರವ ಕಾರ್ಯದರ್ಶಿ ಬಿ.ಆರ್ ಬೊಮ್ಮೇಗೌಡ, ಪ್ರಸನ್ನಕುಮಾರ್, ಗೌರವ ಕೋಶಾಧ್ಯಕ್ಷ ಬಿ.ಎನ್ ಜಯರಾಂ, ಚನ್ನರಾಯಪಟ್ಟಣ ತಾಲೂಕು ಕಸಾಪ ಅಧ್ಯಕ್ಷ ಎಚ್.ಎನ್ ಲೋಕೇಶ್, ಶಾರದಾ ಗುರುಮೂರ್ತಿ, ಪುಟ್ಟೇಗೌಡ, ಗೋಪಾಲಕೃಷ್ಣ, ಮಮತೇಶ್, ಕೆ.ಜೆ ಸುರೇಶ್ ಹಾಜರಿದ್ದರು.

LEAVE A REPLY

Please enter your comment!
Please enter your name here