ಹಾಸನ : ಕಟ್ಟೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳದ ಮಂಜುನಾಥಪುರ ಗ್ರಾಮದಲ್ಲಿ ನಡೆದಿದೆ.
ಹೋಬಳಿಯ ಸಾಣೇನಹಳ್ಳಿ ಗ್ರಾಮದ ಸುಧಾಕರ್ ಎಂಬುವವರ ಮಗ ಆಕಾಶ್ (13) ಹಾಗೂ ಶ್ರೀನಿವಾಸ್ ಎಂಬುವವರ ಮಗ ಲೋಕೇಶ್ (13) ಮೃತ ದುರ್ದೈವಿಗಳು. ಇಬ್ಬರೂ ಶ್ರವಣಬೆಳಗೊಳ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದರು.
ಶಾಲೆಗೆ ದಸರಾ ರಜೆ ಇದ್ದ ಕಾರಣ ಮಧ್ಯಾಹ್ನ ಮೂವರು ಸ್ನೇಹಿತರು ಮಂಜುನಾಥಪುರ ಗ್ರಾಮದ ಸಮೀಪದ ಕಟ್ಟೆಯೊಂದರಲ್ಲಿ ಈಜಲು ತೆರಳಿದ್ದರು. ಆದರೆ ಈಜು ಬಾರದೆ ಆಕಾಶ್ ಹಾಗೂ ಲೋಕೇಶ್ ನೀರಿನಲ್ಲಿ ಮುಳುಗಿ ಮತ್ತೋರ್ವ ಬಾಲಕ ಸಾವಿನ ದವಡೆಯಿಂದ ಪಾರಾಗಿದ್ದಾನೆ. ಮಕ್ಕಳನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಬಂಧ ಶ್ರವಣಬೆಳಗೊಳ ದೂರು ದಾಖಲಾಗಿದೆ.
ಸಲಹೆ : ಈಜು ಬಾರದೆ ದೊಡ್ಡ / ಆಳವಾದ ನೀರಿನಲ್ಲಿ ಇಳಿಯುವ ಪ್ರಯತ್ನ ಮಾಡಬೇಡಿ , , ,