ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಮಾದಿಹಳ್ಳಿ ಗ್ರಾಮದ ಗಜೇಂದ್ರ ಎಂಬುವವರು ಭಾನುವಾರ ಮನೆಗೆ ಬೀಗ ಹಾಕಿ, ಕುಟುಂಬದೊಂದಿಗೆ ಬೆಂಗಳೂರಿಗೆ ಹೋಗಿದ್ದರು.
ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ತಿಳಿದ ಕಳ್ಳರು ಮುಂದಿನ ಬಾಗಿಲು ಪಕ್ಕದಲ್ಲಿನ ಕಬ್ಬಿಣದ ಸರಳುಗಳನ್ನು ಮುರಿದು, ಒಳಗೆ ಹೋಗಿದ್ದಾರೆ. ಎರಡು ಕಬ್ಬಿಣದ ಬೀರುಗಳ ಬಾಗಿಲು ಮೀಟಿ, ಅವುಗಳಲ್ಲಿಟ್ಟಿದ ಚಿನ್ನ, ನಗದು ಮತ್ತು ಮನೆಯಲ್ಲಿ ನಿಲ್ಲಿಸಿದ್ದ ಡಿಯೊ ಸ್ಕೂಟರ್ ಕಳ್ಳತನ ಮಾಡಿದ್ದಾರೆ ( 30 ಸಾವಿರ ₹ ನಗದು, 6 ಗ್ರಾಂ ಚಿನ್ನ ಹಾಗೂ ಸ್ಕೂಟರ್ )
ಈ ಬಗ್ಗೆ ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ , ತನಿಖೆ ಚುರುಕಿನಿಂದ ಸಾಗಿದೆ .