” 19 ನೇ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನ , ❤ ಹಾಸನ “
ಫೆ. 19 (ಹಾಸನ್_ನ್ಯೂಸ್ !, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾಮಟ್ಟದ ವತಿಯಿಂದ ಫೆ.20 ಮತ್ತು 21 ರಂದು ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ 19 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗಿದೆ.
86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿಯೋಜಿತ ಸಮ್ಮೇಳನಾಧ್ಯಕ್ಷರಾದ ಡಾ.ದೊಡ್ಡರಂಗೇಗೌಡರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿರುವರು, ಅಧ್ಯಕ್ಷತೆಯನ್ನು ಶಾಸಕರಾದ ಪ್ರೀತಂ ಗೌಡ ವಹಿಸಲಿದ್ದು ಗೌರವ ಉಪಸ್ಥಿತರಾಗಿ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ, ಲೋಕಸಭಾ ಸಂಸದರಾದ ಪ್ರಜ್ವಲ್ ರೇವಣ್ಣ, ಕೆಂದ್ರ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರಾದ ಮನು ಬಳಿಗಾರ್ ಭಾಗವಹಿಸುವವರು.
ಚಿತ್ರಕಲೆ ಪ್ರದರ್ಶನ ಮಳಿಗೆಗೆ ಶಾಸಕರಾದ ಎಚ್.ಕೆ ಕುಮಾರಸ್ವಾಮಿ, ಹೆಚ್.ಡಿ ರೇವಣ್ಣ ಚಾಲನೆ ನೀಡುವರು,
ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ವೇತಾ ದೇವರಾಜು, ಕ. ರಾ. ರ. ಸಾ. ಸಂ ಉಪಾಧ್ಯಕ್ಷರಾದ ಎಸ್.ಎನ್ ಈಶ್ವರಪ್ಪ ನವರು ಪುಸ್ತಕ ಮಳಿಗೆ ಉದ್ಘಾಟನೆಯನ್ನು ಮಾಡಲಿರುವವರು.
ಜಿಲ್ಲಾಧಿಕಾರಿ ಆರ್.ಗಿರೀಶ್ ಕನ್ನಡ ನುಡಿ ಸಂದೇಶ ನೀಡುವವರು.
ಸಮ್ಮೇಳಾನಾಧ್ಯಕ್ಷರಾಗಿ ಮೇಟಿಕೆರೆ ಹಿರಿಯಣ್ಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಯಕರಹಳ್ಳಿ ಮಂಜೇಗೌಡ, ಜಿಲ್ಲಾ ಕರ್ನಾಟಕ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷರಾದ ರವಿ ನಾಕಲಗೂಡು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಜಿಲ್ಲಾ ಪಂಚಾಯತ್ ಕಾರ್ಯಾನಿರ್ವಾಣಾಧಿಕಾರಿಗಳಾದ ಡಿ.ಭಾರತಿ, ಮತ್ತು ಶ್ರೀನಿವಾಸ್ ಗೌಡ ಸಮ್ಮೇಳನದಲ್ಲಿ ಮಕ್ಕಳ ರಾಮಾಯಣ, ಪುಟ್ ಪುಟ್ ಗೊಂಬೆ- ಪುಟಾಣಿ ಗೊಂಬೆ, ಭಾಷೆ -ಸಮಾಜ -ಸಂಸ್ಕøತಿ, ಸುತಸ್ವೈರ ಕೃತಿಗಳನ್ನು ಬಿಡುಗಡೆ ಮಾಲಿರುವವರು.
ಕರ್ನಾಟಕ ಸಾಹಿತ್ಯ ಪರಿಷತ್ ಗೌರವಧ್ಯಕ್ಷರಾದ ರವಿ ನಾಕಲಗೂಡು ಅವರು ಆಶಯನುಡಿಗಳಾನ್ನಾಡಿದ್ದಾರೆ.
ಕರ್ನಾಟಕ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ನಾಯಕರಹಳ್ಳಿ ಮಂಜೇಗೌಡ ಅವರು ಸ್ವಾಗತ ಮಾಡಲಿದ್ದಾರೆ.
19ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳಾನಾಧ್ಯಕ್ಷರಾದ ಮೇಟಿಕೆರಿ ಹಿರಿಯಣ್ಣ ಸಮ್ಮೇಳನಾಧ್ಯಕ್ಷರ ನುಡಿಗಳಾನ್ನಾಡುವರು.
19 ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಶ್ರೀವಿಜಯ ಹಾಸನ ನಿಕಟಪೂರ್ವ ಸಮ್ಮೇನಾಧ್ಯಕ್ಷರು
ಸಮ್ಮೇಳನದಲ್ಲಿ ಕನ್ನಡ ಜಾಗೃತಿ ಅಭಿಯಾನ ಬೈಕ್ ರ್ಯಾಲಿ, ಕನ್ನಡ ಭುವನೇಶ್ವರಿ ದಿಬ್ಬಣ, ಕಾವ್ಯ ವಾಚನ ವಿಮರ್ಶೆ, ಪ್ರಶಸ್ತಿ ಪ್ರಧಾನ, ಕವಿಗೋಷ್ಠಿ, ನೃತ್ಯ ವೈಭವ, ಕನ್ನಡ ಗೀತಗಾಯನ ನಡೆಯಲಿದೆ.