ಹಾಸನ: ಕಾವೇರಿ ವಿವಾದ ವಿಚಾರದಲ್ಲಿ ರಾಜ್ಯ ಸರ್ಕಾರದ ಧೋರಣೆ ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ “ಕರ್ನಾಟಕ ಬಂದ್”ಗೆ ನಗರ ಸೇರಿದಂತೆ ಎಲ್ಲಾ ತಾಲೂಕುಗಳಲ್ಲಿ ಬಾರಿ ಜನ ಬೆಂಬಲ ವ್ಯಕ್ತವಾಯಿತು. ಇಂದು ಬೆಳಿಗ್ಗೆ 6 ಗಂಟೆಯಿಂ ದಲೇ ಕನ್ನಡ ಪರ ಸಂಘಟನೆಗಳು ರಸ್ತೆಗಿಳಿದು ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸಲು ಮುಂದಾದರು. ಕೆಎಸ್ಸಾರ್ಟಿಸಿ ಬಸ್ಸುಗಳನ್ನು ಹೊರ ಬಿಡದಂತೆ ಪ್ರತಿಭಟನಾಕಾರರು ಬಸ್ ನಿಲ್ದಾಣದಲ್ಲಿ ತಡೆದರು ಹಾಗೂ ಎನ್ ಆರ್ ವೃತ್ತದಲ್ಲಿ ಬಸ್ ಹತ್ತಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ ಪ್ರಯಾಣಕ್ಕೆ ಅಡ್ಡಿಪಡಿಸಿದ ಘಟನೆಯು ನಡೆಯಿತು. ಮಧ್ಯಪ್ರವೇಶಿಸಿದ ಪೊಲೀಸ್ ಸಂಚಾರ ನಿಯಂತ್ರಕರು ಬಸ್ಸುಗಳನ್ನು ನಿಲ್ದಾಣದಿಂದ ಸಂಚರಿಸಲು ಸೂಚನೆ ನೀಡಿದ ಬಳಿಕ ಅಲ್ಲಿಂದ ಜಿಲ್ಲೆಯ ಎಲ್ಲಾ ಕಡೆಗೂ ಸಾರಿಗೆ ಸಂಚಾರ ಎಂದಿನಂತೆ ನಡೆಯುತ್ತಿತ್ತು. ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬೆಳಂ ಬೆಳಗ್ಗೆ ಸಾರಿಗೆ ಬಸ್ ನಿಲ್ದಾಣದಲ್ಲಿ ಬಸ್ ನಲ್ಲಿ ಕುಳಿತಿದ್ದ ಪ್ರಯಾಣಿಕರನ್ನು ಕೆಳಗಿಳಿಸಿದ ಘಟನೆಯು ನಡೆಯಿತು.
ಅಲ್ಲದೆ ಕಾವೇರಿ ನೀರಿಗಾಗಿ ಸಹಕಾರ ನೀಡಿ ಎಂದು ಕೈ ಮುಗಿದು ಮನವಿ ಸಹ ಮಾಡಿದರು, ಬಂದ್ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದಿನಂತೆ ಸಾರಿಗೆ ಸಂಚಾರ ಇರಲಿದೆ ಎಂದು ನಿಲ್ದಾಣದಲ್ಲಿ ಮೈಕ್ ಮೂಲಕ ಅನೌನ್ಸ್ ಮಾಡಲಾಯಿತು. ಮತ್ತೊಂದೆಡೆ ಕನ್ನಡಪರ ಹೋರಾಟಗಾರರು ಬಸ್ ಎಲ್ಲಿಗೂ ಹೋಗುವುದಿಲ್ಲ ಇಳಿಯಿರಿ ಎಂಬ ಹೋರಾಟಗಾರ ಮನವಿಗೆ ಪೊಲೀಸರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿ ಯಾರಿಗೂ ಸಹ ಬಲವಂತ ಮಾಡಿದಂತೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಹೋರಾಟ ಗಾರರು ನಾವು ಯಾರಿಗೂ ಬಲವಂತ ಮಾಡುವುದಿಲ್ಲ ಜನರು ಸಹಕಾರ ನೀಡಿ ಎಂದು ಮಾನವಿ ಮಾಡುವು ದಾಗಿ ತಿಳಿಸಿದರು. ಕರ್ನಾಟಕ ರಾಜ್ಯ ರೈತ ಸಂಘ ಕನ್ನಡ ಸಾಹಿತ್ಯ ಪರಿಷತ್ ಜೆಡಿಎಸ್ ಜಿಲ್ಲಾ ಘಟಕ, ಭಾರತೀಯ ಜನತಾ ಪಾರ್ಟಿ, ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ, ಜಿಲ್ಲಾ ವಕೀಲರ ಸಂಘ, ಭಾರತೀಯ ವೈದ್ಯಕೀಯ ಸಂಘ, ಆಟೋ ಚಾಲಕರು ಮತ್ತು ಮಾಲೀಕರ ಸಂಘ, ಮ್ಯಾಕ್ಸಿ ಕ್ಯಾಬ್, ತರಕಾರಿ ವರ್ತಕರ ಸಂಘ, ಡಾ. ಶಿವರಾಜಕುಮಾರ್ ಡಾ.ಪುನೀತ್ ರಾಜಕುಮಾರ್, ಡಾ. ವಿಷ್ಣುವರ್ಧನ್ ಅಭಿಮಾನಿಗಳ ಸಂಘ, ಟಿಪ್ಪು ಸಂಘರ್ಷ ಸಮಿತಿ, ಭಗತ್ ಸಿಂಗ್ ಫುಡ್ ಕೋರ್ಟ್, ಹೋಟೆಲ್ ಮಾಲೀಕರ ಸಂಘ, ನಮ್ಮ ಕರ್ನಾಟಕ ರಕ್ಷಣ ವೇದಿಕೆ, ಕರವೇ ಪ್ರವೀಣ್ ಶೆಟ್ಟಿ ಬಣ, ಜಿಲ್ಲಾ ಮುದ್ರಣಕಾರರ ಇದ್ದರು, ಹೋರಾಟಗಾರರ ಬಂಧನ.
ಬಂದ್‌ಗೆ ಬೆಂಬಲಿಸುವಂತೆ ನಗರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಕುಳಿತಿದ್ದ ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬಾಳು ಗೋಪಾಲ್ ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಲವಂತ ವಾಗಿ ಎಳೆದೋಯ್ತು ಬ೦ಧಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಯು ನಡೆಯಿತು. ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎಸ್. ದ್ಯಾವೇಗೌಡ ಸೇರಿದಂತೆ ಇತರರು ಇದ್ದರು. ಜಿಲ್ಲೆಯಲ್ಲಿ ಸಾರಿಗೆ ವ್ಯವಸ್ಥೆ ಎಂದಿನಂತೆ ಇತ್ತಾದರೂ ಬಹು ತೇಕ ಬಸ್‌ಗಳು ಪ್ರಯಾಣಿಕರಿ ಅಲ್ಲದೆ ಸಂಚಾರ ಮಾಡುತ್ತಿದ್ದುದು ಕಂಡು ಬಂತು, ನಗರದ ನೂತನ ಚನ್ನಪಟ್ಟಣ ಬಸ್ ನಿಲ್ದಾಣ ದಿಂದ ಚನ್ನರಾಯಪಟ್ಟಣ, ಅರ ಸೀಕೆರೆ, ಬೇಲೂರು, ಚಿಕ್ಕಮಗ ಸೇವೆ ಇತ್ತಾದರೂ ಪ್ರಯಾಣಿಕರ ಸಂಖ್ಯೆ ತೀರ ಕಡಿಮೆ ಇತ್ತು. ಬೆಂಗಳೂರು, ಮೈಸೂರು, ಶಿವಮೊಗ್ಗ ಸೇರಿದಂತೆ ಇತರೆಡೆಗೆ ಬಸ್‌ಗಳ ಸಂಖ್ಯೆ ಕಡಿಮೆ ಇತ್ತು, ಸಂಘ ಸೇರಿದಂತೆ ವರ್ತಕರು, ತರಕಾರಿ ಹಣ್ಣು ಮಾರಾಟಗಾರರ ಸಂಘ ಇಂದಿನ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದರು.
ಜೈನ ಸಮುದಾಯದಿಂದ ಪ್ರತಿಭಟನೆ; ನಗರದ ರಾಜಸ್ಥಾನ ಶ್ವೇತಾಂಬರ ಜೈನ ಸಮಾಜ ಮತ್ತು ವಿಷ್ಣು ಸಮಾಜದ ಸಾವಿರಕ್ಕೂ ಹೆಚ್ಚು ಸದಸ್ಯರು ಕರ್ನಾಟಕ ಬಂದ್ ಬೆಂಬಲಿಸಿ ಪ್ರತಿಭಟನಾ ರ್ಯಾಲಿ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಕೆಲಕಾಲ ಧರಣಿ ನಡೆಸಿದ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಒತ್ತಾಯಿಸಿದ ಸಂಘದ ಸದಸ್ಯರು ಜಿಲ್ಲಾಧಿಕಾರಿ ಸಿ ಸತ್ಯಭಾಮ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮಾರ್ಕೆಟ್ ಬಂದ್ : ನಗರದ ಹೃದಯಭಾಗದಲ್ಲಿ ರುವ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಬಂದ ಮಾಡಲಾಗಿತ್ತು. ಗ್ರಾಮಗಳಿಂದ ಬಂದ ಸಣ್ಣಪುಟ್ಟ ವ್ಯಾಪಾರಸ್ಥರು ಹೂವು, ಹಣ್ಣು, ತರಕಾರಿ ಮಾರಾಟ ಮಾಡುತ್ತಿದ್ದ ದೃಶ್ಯ ಕಂಡುಬಂತು. ನಗರದ ಪ್ರಮು ಖ ರಸ್ತೆಗಳಾದ ಹಳೆ ಬಸ್ ನಿಲ್ದಾಣ ರಸ್ತೆ. ಮಾರುಕಟ್ಟೆ ರಸ್ತೆ.. ಪಿಕ್ಚರ್ ಪ್ಯಾಲೇಸ್ ಸರ್ಕಲ್, ಎನ್ ಅರ್ ಸರ್ಕಲ್ ನಿಂದ ಸಂತೆಪೇಟೆ – ತಣ್ಣೀರು ಹಳ್ಳ ವರೆಗಿನ ರಸ್ತೆಯ ಅಕ್ಕಪಕ್ಕದ ಅಂಗಡಿ ಮುಗ್ಗಟ್ಟುಗಳು ಬಂದ್ ಮಾಡಲಾಗಿತ್ತು
ಬೇಲೂರಿನಲ್ಲಿ ಬಂದ್ : ಬೇಲೂರು: ಯಗಚಿ ಜಲಾಶಯ ಸೇರಿದಂತೆ ರಾಜ್ಯದ ಅಣೆಕಟ್ಟೆಗಳ ಮೂಲಕ ತಮಿಳು ನಾಡಿಗೆ ಕಾವೇರಿ నిరి ಹರಿಸುತ್ತಿರುವ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿ ತಾಲೂಕಿನ ವಿವಿಧ ಸಂಘಟನೆಗಳು ಕರೆ ನೀಡಿ ದ್ದ ಬೇಲೂರು ಬಂದ್ ಇಂದು ಸಂಪೂರ್ಣ ಯಶಸ್ವಿಯಾಯಿತು. ಬಂದ್ ಬೆಂಬಲಿಸಿ ಪಟ್ಟಣದ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಬಾಗಿಲುಗಳನ್ನು ಮುಚ್ಚಿ ವಾಹನಗಳ ಚಾಲಕರು ತಮ್ಮ ಸಹಕರಿಸಿದರು. ಆಟೋ ವಾಹನಗಳನ್ನು ಬೀದಿಗಿಳಿಸದೆ ಚಾಲಕರು ಮತ್ತು ಖಾಸಗಿ ಬಂದ್ ಬೆಂಬಲಿಸಿದರು. ಬಂದ್ ಅಂಗವಾಗಿ ಶಾಲಾ ಕಾಲೇಜು ಗಳಿಗೆ ರಜೆ ಘೋಷಿಸಲಾಗಿತ್ತು. ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ವೃತ್ತಗಳು, ಆಯಕಟ್ಟಿನ ಸ್ಥಳಗಳಲ್ಲಿ ಸಿಪಿಐ ರವಿಕಿರಣ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಇತ್ತು.
ಹೊ.ನ.ಪುರದಲ್ಲಿ ಭಾಗಶಃ ಬಂದ್ : ಹೊಳೆ ನ ರ ಸೀಪುರ : ತಮಿಳುನಾಡಿಗೆ ಪ್ರತಿ ನಿತ್ಯವೂ ಮೂರು ಸಾವಿರ ಕ್ಯೂಸೆಕ್ಸ್ ಕಾವೇರಿ ನೀರನ್ನು ಬಿಡುಗಡೆ ಮಾಡಲು ಕಾವೇರಿ ನೀರಾವರಿ ನಿರ್ವಹಣಾ ಪ್ರಾಧಿಕಾರದ ಆದೇಶದ ವಿರುದ್ಧ ಇಂದು ಹೊಳೆನರಸೀಪುರದ ಮಹಾತ್ಮ ಗಾಂಧಿಯವರ ಪ್ರತಿಮೆಯ ಬಳಿ ಪುರಸಭೆ ಸದಸ್ಯರು ಮತ್ತು ತಾಲ್ಲೂಕು ವರ್ತಕರ ಸಂಘ, ತಾಲ್ಲೂಕು ಛಾಯಾಗ್ರಾಹಕರ ಸಂಘ, ರೈತ ಸಂಘ, ತಾಲ್ಲೂಕು ವಕೀಲರ ಸಂಘ ಮತ್ತು ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಪ್ರತಿಭಟನೆ ನಡೆಸಿದರು. ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿ, ಕಾವೇರಿ ಹೋರಾಟಕ್ಕೆ ಅಂಗಡಿ ಮುಂಗಟ್ಟುಗಳನ್ನು ಭಾಗಷಃ ಬಂದ್ ಮಾಡುವುದರ ಮೂಲಕ ನೈತಿಕವಾಗಿ ಬೆಂಬಲ ನೀಡಿದರು ನಂತರ ಪಟ್ಟಣದ ಪೇಟೆ ಮುಖ್ಯ ರಸ್ತೆಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಕಛೇರಿಗೆ ತೆರಳಿ ಮನವಿ ಪತ್ರವನ್ನು ಸಲ್ಲಿಸಿದರು.
ಬಿಜೆಪಿ ಬೈಕ್ ಬ್ಯಾಲಿ : ಬೈಕ್ ರ್ಯಾಲಿ ಮೂಲಕ ಹೇಮಾವತಿ ಪತಿಮೆಯ ಬಳಿಯಿಂದ ಸಾಗಿದ ಬಿಜೆಪಿ ಕಾರ್ಯಕರ್ತರು ಕನ್ನಡ ಪರ ಘೋಷಣೆ ಕೂಗುತ್ತ ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತ ಸಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಡೆಸಿದರು. ಮುಖ್ಯರಸ್ತೆಯ ಪಕ್ಕದಲ್ಲಿದ್ದ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸಿದರು ಅಲ್ಲದೆ ಡಿಸಿಸಿಸಿ ಬ್ಯಾಂಕ್ ಕಚೇರಿ ಒಳಗೆ ನುಗ್ಗಿದ ಬಿಜೆಪಿ ಮಾಡುವಂತೆ ಒತ್ತಾಯಿಸಿದರು. ನಂತರ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ತೆರಳಿದ ಬಿಜೆಪಿ ಕಾರ್ಯಕರ್ತರ ಅಲ್ಲಿದ್ದ ಅಧಿಕಾರಿಗಳಿಗೆ ಬಂದ್ ಗೆ ಸಹಕರಿಸಲು ಮನವಿ ಮಾಡಿದರು. ಕಾರ್ಯಕರ್ತರು ಈ ಸಂದರ್ಭದಲ್ಲಿ ಪೊಲೀಸರು ಕಾರ್ಯಕರ್ತರಿಗೆ ಕಟ್ಟುನಿಟಿನ ಸೂಚನೆ ನೀಡಿದ್ದಲ್ಲದೆ ಮುಂದೆ ಯಾವುದೇ ಕಚೇರಿಗೆ ತೆರಳಿ ಬಂದ್ ಮಾಡಲು ಒತ್ತಾಯಿಸದಂತೆ ತಾಕೀತು ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಮಂಜು, ಕಿರಣ್ ಕುಮಾರ್, ರಾಕೇಶ್ ಹಾಗೂ ಇತರರು ಇದ್ದರು. ನಗರದಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್ ವ್ಯವಸ್ಥೆ ಮಾಡಲಾಗಿತ್ತು, ಪ್ರಮುಖ ವೃತ್ತ, ದೇವಸ್ಥಾನ, ಮಸೀದಿಗಳಲ್ಲಿ ಪೊಲೀಸರ ಕಾವಲು ಹಾಕಲಾಗಿತ್ತು. ಹಾಸನದಲ್ಲಿ ಹೋರಾಟಗಾರರ ವಿರೊಧದ ನಡುವೆಯು ಬಸ್ ಸಂಚಾರ ಆರಂಭ. ಪೊಲೀಸ್ ಭದ್ರತೆಯಲ್ಲಿ ಸಾರಿಗೆ ಬಸ್ ಸಂಚಾರ ಆರಂಭ.
ಬಸ್ ಸಂಚಾರ ಮಾಡದಂತೆ ಹಾಗೂ ಪ್ರಯಾಣಿಕರು ಬಸ್‌ನಲ್ಲಿ ತೆರಳದಂತೆ ಹೋರಾಟಗಾರರ ಮನವಿ. ಆದರೆ ಪೊಲೀಸರ ಭದ್ರತೆಯಲ್ಲಿ ಬಸ್ ಸಂಚಾರ ಶುರುಮಾಡಿದ ಪೊಲೀಸರು. ಬಸ್ ಇದ್ದರೂ ಬಹಳ ವಿರಳ ಸಂಖ್ಯೆಯಲ್ಲಿ ಇರುವ ಪ್ರಯಾಣಿಕರು. ನಿತ್ಯವು ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರಿರುತ್ತಿದ್ದ ಹಾಸನದ ಬಸ್ ನಿಲ್ದಾಣ ಖಾಲಿ ಖಾಲಿ, ಕೆಲವೇ ಕೆಲವು ಪ್ರಯಾಣಿಕರಿದ್ದರು ಸಂಚಾರ ನಡೆಸುತ್ತಿರುವ ಸಾರಿಗೆ ಬಸ್, ಜನಸಂಖ್ಯೆ ಓಡಾಟ ವಿರಳ. ಖಾಸಗಿ ಹಾಗೂ ಸರ್ಕಾರಿ ಶಾಲಾ ಕಾಲೇಜುಗಳಿಗೆ ಬಂದ್‌ಗೆ ಸಹಕರಿಸುವಂತೆ ಒತ್ತಾಯಿಸಿದಾಗ ರಜೆ ಘೋಷಣೆ ಮಾಡಲಾಗಿತ್ತು. ಅದರಂತೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ರಜೆ ಇದ್ದಕಾರಣ ವಿಧ್ಯಾರ್ಥಿಗಳ ಓಡಾಟ ಇರಲಿಲ್ಲ. ಅಂಗಡಿ ಮುಗ್ಗಟ್ಟುಗಳು ಬಂದ್ ಇದ್ದ ಕಾರಣ ಸಾರ್ವಜನಿಕರ ಓಡಾಟ ಹೆಚ್ಚಾಗಿ ಕಂಡುಬರಲಿಲ್ಲ. ಸರ್ಕಾರಿ ಬಸ್ ಹಾಗೂ ಆಟೋಗಳ ಸಂಚಾರ ಯತಸ್ಥಿತಿ ಇದ್ದವು. ಬಸ್ಸ ಹಾಗೂ ಆಟೋಗಳಲ್ಲಿ ಪ್ರಾಯಾಣಿಕರ ಸಂಖ್ಯೆ ಕೂಡ ವಿರಳವಾಗಿತ್ತು.
ವಕೀಲರ ಸಂಘದಿಂದ ಮಾನವ ಸರಪ : ಕರ್ನಾಟಕ ಬಂದ್ ಗೆ ಕರೆ ಕೊಟ್ಟ ಹಿನ್ನೆಲೆಯಲ್ಲಿ ವಕೀಲರು ಕೂಡ ಕಲಾಪಗಳನ್ನ ಬಹಿಷ್ಕರಿಸಿ ಎನ್ನ ವೃತ್ತದಲ್ಲಿ ಮಾನವ ಸರ್ಪಳಿ ನಿರ್ಮಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿ ಯಾವುದೇ ಕಾರಣಕ್ಕೂ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬಾರದು ಸರ್ಕಾರ ರಾಜ್ಯದ ಜನರು ಮತ್ತು ರೈತರ ಹಿತ ಕಾಯಬೇಕು ಎಂದು ಒತ್ತಾಯಿಸಿದರು ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಬಾಲಿ ಬಾಲಿ ಹೊಡೆಯುತ್ತಿದ್ದ ಬಸ್ ನಿಲ್ದಾಣಗಳು: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಸಾರಿಗೆ ಬಸ್ಥಳ ಸಂಚಾರಕ್ಕೆ ಯಾವುದೇ ತೊಂದರೆ ಆಗಿರಲಿಲ್ಲ ಪ್ರತಿಭಟನೆಕಾರರು ಬಸ್ ಗಳನ್ನು ತಡೆಯಲು ಯತ್ನಿಸಿದರು ಆದರೆ ಪೊಲೀಸರು ಅದಕ್ಕೆ ಅವಕಾಶ ಮಾಡಿಕೊಡದೆ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರು ಆದರೆ ಗ್ರಾಮೀಣ ಭಾಗದಿಂದ ಹೆಚ್ಚಾಗಿ ಸಾರ್ವಜನಿಕರು ಆಗಮಿಸಿರಲಿಲ್ಲ ನಿಲ್ದಾಣಗಳು ಖಾಲಿ ಹೊಡೆಯುತ್ತಿದ್ದವು ಬಸ್ಸುಗಳು ಖಾಲಿಯಾಗಿ ತಮ್ಮ ಸಂಚಾರವನ್ನು ಆರಂಭಿಸಿದ್ದು ಕಾಣಬಹುದಾಗಿದೆ.
ಪ್ರತಿಭಟನಾಕಾರರು ಮತ್ತು ಶೋರೂಮ್ ಮಾಲೀಕರ ನಡುವೆ ಮಾತಿನ ಚಕಮಕಿ : ಪ್ರತಿಭಟನಾಕಾರರು ನಗರದ ಅತ್ಯಂತ ಅಂಗಡಿ ಮೊಮ್ಮಗಟ್ಟುಗಳನ್ನ ಬಂದ್ ಮಾಡುವಂತೆ ಮನವಿ ಮಾಡುತ್ತಿದ್ದರು ಈ ಸಂದರ್ಭದಲ್ಲಿ ನಗರದ ತಣ್ಣೀರು ಹಳ್ಳದಲ್ಲಿರುವ ಟಾಟಾ ಮೋಟರ್ಸ್ ಶೋರೂಮ್ ಇನಲ್ಲಿ ಎಂದಿನಂತೆ ಕೆಲಸ ನಿರ್ವಹಿಸುತ್ತಿದ್ದರು ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಅವರನ್ನು ಮನವಿ ಮಾಡಿದರು ಕೂಡ ಮುಚ್ಚಲು ಒಪ್ಪಲಿಲ್ಲ ಕೆಲಸಮಯ್ಯ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು ನಂತರ ಪ್ರತಿಭಟನಾಕಾರರು ಶೋರೂಮ್ ಮುಂದೆ ಧರಣಿ ನಡೆಸಲು ಮುಂದಾದರು ಆನಂತರ ಅನಿವಾರ್ಯವಾಗಿ ಶೋರೂಮ್ ಅನ್ನ ಮುಚ್ಚಲಾಯಿತು.
ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ : ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಹಲವು ಸಂಘಟನೆಗಳು, ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕೂಡ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಯಿತು ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು ಎಲ್ಲಿ ನೋಡಿದರೂ ಕೂಡ ಕಾಕಿ ಪಡೆ ಕರ್ತವ್ಯ ನಿರ್ವಹಿಸುತ್ತಿತ್ತು ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು ಅಲ್ಲದೆ ಹೇಮಾವತಿ ಜಲಾಶಯದ ಸುತ್ತ 144 ಸೆಕ್ಷನ್ ಜಾರಿ ಮಾಡುವ ಮಾಡಿಲಾಗಿತ್ತು