ಬಸ್‌ನಲ್ಲಿ ಸಿಕ್ಕ ಮೊಬೈಲ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ

0

ಭೀಮ ವಿಜಯ, ಚನ್ನರಾಯಪಟ್ಟಣ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಮೊಬೈಲ್ ಬಿಟ್ಟು ಇಳಿದಿದ್ದ ಪ್ರಯಾಣಿಕರೊಬ್ಬರಿಗೆ ಸಾರಿಗೆ ಸಿಬ್ಬಂದಿ ಮೊಬೈಲ್ ಹಿಂತಿರುಗಿಸಿ, ಮಾನವೀಯತೆ ಮೆರೆದ ಘಟನೆ ಹಾಸನ ವಿಭಾಗದ ಚನ್ನರಾಯಪಟ್ಟಣ ಬಸ್ ನಿಲ್ದಾಣದಲ್ಲಿ ನಡೆದಿದೆ. ಚನ್ನರಾಯಪಟ್ಟಣ ಘಟಕದ ಚನ್ನರಾಯಪಟ್ಟಣ-ಶ್ರವಣ ಬೆಳಗೊಳ ಬಸ್, ಜ.19ರಂದು ಚನ್ನರಾಯಪಟ್ಟಣಕ್ಕೆ ಹೊರಟಿದ್ದು ಬಸ್ಸಿನಲ್ಲಿ ಬಸ್ತಿಹಳ್ಳಿ ಮೂಲದ ಸೋಮೇಶ್ ಪ್ರಯಾಣಿಸುತ್ತಿದ್ದರು. ಬಸ್ತಿಹಳ್ಳಿ ಬಸ್ ನಿಲ್ದಾಣಕ್ಕೆ ಬಸ್ ಬರುತ್ತಿದ್ದಂತೆ 15000 ರೂ. ಮೌಲ್ಯದ ರಿಯಲ್ ಮಿ ಸ್ಮಾರ್ಟ್ ಫೋನ್ ಬಿಟ್ಟು ಇಳಿದಿದ್ದಾರೆ. ಬಸ್ ಮುಂದೆ ಶ್ರವಣಬೆಳಗೊಳಕ್ಕೆ ಹೋಗಬೇಕಿದ್ದರಿಂದ

ಅಲ್ಲಿಗೆ ತೆರಳಿದೆ. ಶ್ರವಣಬೆಳಗೊಳಕ್ಕೆ ಬಂದ ಬಸ್‌ನ ನಿರ್ವಾಹಕ ಜಗತ್ ಕುಮಾರ್ ಗೆ 15000 ರೂ ಮೌಲ್ಯದ ರಿಯಲ್ ಮಿ ಫೋನ್ ದೊರೆತಿದ್ದು, ಚಾಲಕ ಹರೀಶ್ ನೊಂದಿಗೆ ಸೇರಿ ಮೊಬೈಲ್ ಫೋನ್ ನ್ನು ಘಟಕ ವ್ಯವಸ್ಥಾಪಕಿ ಶಾಜೀಯ ಭಾನು ಅವರಿಗೆ ಒಪ್ಪಿಸಿದ್ದಾರೆ. ಮೊಬೈಲ್ ಬಿಟ್ಟು ಮನೆಗೆ ತೆರಳಿದವರಿಗೆ ಕೆಲ ಹೊತ್ತಿನ ನಂತರ ತಮ್ಮ ಮೊಬೈಲ್ ಫೋನ್ ಇಲ್ಲದ್ದು ಗಮನಕ್ಕೆ ಬಂದು ಹುಡುಕಾಟ ನಡೆಸಿದ್ದಾರೆ. ನಂತರ

ತಮ್ಮ ಮೊಬೈಲ್ ಫೋನ್ ಕರೆ ಮಾಡಿದಾಗ ಮೊಬೈಲ್ ಸಿಕ್ಕ ಬಗ್ಗೆ ಘಟಕ ವ್ಯವಸ್ಥಾಪಕರು ತಿಳಿಸಿ ಘಟಕಕ್ಕೆ ಬಂದು ತೆಗೆದುಕೊಳ್ಳಲು ತಿಳಿಸಿದ್ದಾರೆ, ಜ.23ರಂದು ಸೋಮೇಶ್ ಅವರಿಗೆ ಮೊಬೈಲ್ ಫೋನ್ ಹಸ್ತಾಂತರಿಸಿ, ಘಟಕ ವ್ಯವಸ್ಥಾಪಕಿ ಶಾಜೀಯ ಭಾನು ಮಾತನಾಡಿ, ಈಗೀನ ಕಾಲದಲ್ಲಿ ಒಂದು ರೂಪಾಯಿ ಸಿಕ್ಕರೂ ಬಿಡದ ಜನಗಳ ಮಧ್ಯೆ

15000 ರೂಪಾಯಿ ಬೆಲೆ ಬಾಳುವ ಮೊಬೈಲ್ ಫೋನ್ ಸಿಕ್ಕರೂ ಅದನ್ನ ಪ್ರಾಮಾಣಿಕವಾಗಿ ಹಿಂದಿರುಗಿಸಿದ್ದಾರೆ. ಜಗತ್‌ ಕುಮಾರ್ ಮತ್ತು ಹರೀಶ್ ಅವರ ಪ್ರಾಮಾಣಿಕತೆ ಇತರರಿಗೂ ಮಾದ ರಿಯಾಗಲಿ ಎಂದರು ತಿಳಿಸಿದರು.

LEAVE A REPLY

Please enter your comment!
Please enter your name here