ಅರಕಲಗೂಡು ತಾಲ್ಲೋಕು ರಾಮನಾಥಪುರ ಹೋಬಳಿಯ ಕೇರಳಾಪುರ ಗ್ರಾಮದಲ್ಲಿ ಸಾಮಾಜಿಕ ಅಂತರ ಕಾಪಾಡದೇ ವ್ಯಾಪಾರ ವಹಿವಾಟು ನಡೆಸುತಿದ್ದ ಅಂಗಡಿ ಮಾಲಿಕರಿಗೆ ಸುರಿವ ಮಳೆಯನ್ನು ಲೆಕ್ಕಿಸದೇ ಚಳಿಬಿಡಿಸಿದ ತಹಶೀಲ್ದಾರರಾದ ವೈ.ಎಂ.ರೇಣುಕುಮಾರ್
8200/-ರೂಗಳ ದಂಡವಿಧಿಸಿದರು ಈ ಸಂಧರ್ಭದಲ್ಲಿ ಮಾತನಾಡಿದ ಅವರು ಕೋವಿಡ್ ದಿನೇ ದಿನೇ ಅತಿ ವೇಗವಾಗಿ ಹರಡುತಿದ್ದು ಯಾರು ಸಹ ಅನಾವಶ್ಯಕವಾಗಿ ಮನೆಯಿಂದ ಹೊರಗಡೆ ಬರಬಾರದಾಗಿ ಹಾಗೂ
ಕೋವಿಡ್ ಪಾಸಿಟೀವ್ ಬಂದಂತ ವ್ಯಕ್ತಿಗಳು ಸಂಪೂರ್ಣವಾಗಿ ಗುಣಮುಖವಾಗುವವರೆಗೂ ಮನೆಯಲ್ಲೇ ಇರತಕ್ಕದ್ದು ತಪ್ಪಿದಲ್ಲಿ
ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಪೋಲಿಸ್ ಇಲಾಖೆಯಿಂದ ಎಫ್.ಐ.ಆರ್ ಮಾಡಿಸಿ ಬರಗೂರು ವಸತಿ ಶಾಲೆಯಲ್ಲಿ ತೆರೆದಿರುವ ಐಸೂಲೇಶನ್ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು ಈ ಸಂಧರ್ಭದಲ್ಲಿ
ರಾಮನಾಥಪುರ ಹೋಬಳಿಯ ಉಪತಹಶೀಲ್ದಾರರಾದ ಸಿ.ಸ್ವಾಮಿ.ಪಂಚಾಯಿತಿ ಅಭಿವೃಧ್ದಿ ಅಧಿಕಾರಿಗಳಾದ ಕುಮಾರಸ್ವಾಮಿ ಗ್ರಾಮಲೆಕ್ಕಾಧಿಕಾರಿಗಳಾದ ಯಾಧವ್ ಪಂಚಾಯಿತಿ ಕಾರ್ಯದರ್ಶಿ ರವಿ ಗ್ರಾಮಸಹಾಯಕ ರಂಗಸ್ವಾಮಿ.ಹಾಗೂ
ವಿಡಿಯೋ ನೋಡಿ 👇
https://m.facebook.com/story.php?story_fbid=3884994604943778&id=195025720607370
ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.