ಹಾಸನ : 9 ಲಕ್ಷ ಮೌಲ್ಯದ 2,572 ಪಾಲಿಸ್ಟರ್ ಸೀರೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಹಳ್ಳಿ ಮೈಸೂರು ಪೊಲೀಸ್ ಠಾಣೆಯ ಎಸ್.ಐ. ಅಶ್ವಿನಿ ನಾಯಕ್ ಅವರು ತಪಾಸಣೆ ನಡೆಸಿ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹಳ್ಳಿ ಮೈಸೂರು ಹೋಬಳಿಯ ದೊಡ್ಡಹಳ್ಳಿ ಚೆಕ್‌ಪೋಸ್ಟ್ ಬಳಿ ಮಂಗಳವಾರ ರಾತ್ರಿ ಮೈಸೂರಿನಿಂದ ಹಾಸನ ಹಾಗೂ ಚಿಕ್ಕಮಂಗಳೂರಿಗೆ ಸೀರೆ ಸಾಗಿಸುತ್ತಿದ್ದ
ಟೆಂಪೋ ಟ್ರಾವೆಲರ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿರುತ್ತಾರೆ ., ಈ ಸೀರೆಗಳು ಮೈಸೂರಿನ ಇಟ್ಟಿಗೆಗೂಡಿನ ಗಣೇಶ್ ಬಾಬು ಅವರ ಕರ್ನಾಟಕ ಸ್ಯಾರಿ ಸಿಲ್ಕ್ಸ್ ಅಂಗಡಿಗೆ ಸೇರಿದ್ದು. ಹಾಸನ ಮತ್ತು ಚಿಕ್ಕಮಂಗಳೂರಿನ ಬಟ್ಟೆ ಅಂಗಡಿಗಳಿಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದು, ಈ ಸೀರೆಗಳ ಸಾಗಾಟಕ್ಕೆ ಅಗತ್ಯ ದಾಖಲೆ ಇದೆ’ ಎಂದು ವಾಹನದ ಚಾಲಕ ರವಿಕುಮಾರ್ ತಿಳಿಸಿದ್ದು ,
ಪೊಲೀಸರು ಈ ಪ್ರಕರಣದ ತನಿಖೆ ನಡೆಸಲು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಅಗತ್ಯ ಇದ್ದರೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು’ ಎಂದು ಪೊಲೀಸರು ಎಚ್ಚರಿಸಿದ್ದಾರೆ .