ಹಾಸನದ ಬಹಳಷ್ಟು ಜನರ ಹಾಟ್ ಫೇವರೆಟ್ ಜಾಗ ಇನ್ನು ನೆನಪು ಮಾತ್ರ!!

0

ಹಾಸನ ನಗರದ ಹೊಸ ಬಸ್ ನಿಲ್ದಾಣ ಆಗುವ ಮೊದಲು , ಈ ಮೋತಿ ಹೋಟೆಲ್ ಮುಂಭಾಗ ಇದ್ದ ಹಳೇ ಬಸ್ ನಿಲ್ದಾಣದಲ್ಲಿ ಬಂದು ಹೋಗೋ ಬಸ್ ಪ್ರಯಾಣಿಕರು , ಡ್ರೈವರ್ ಕಂಡಕ್ಟರ್ ಗಳ ಹಾಟ್ ಫೇವರೆಟ್ ಜಾಗ ಇನ್ನು ನೆನಪು ಮಾತ್ರ!!

ಹಾಸನ ಜಿಲ್ಲೆಯಲ್ಲಿ 1973ರಿಂದ 47 ವರ್ಷ ಸುದೀರ್ಘ ಇತಿಹಾಸ ಹೊಂದಿದ ” ಪ್ರಖ್ಯಾತಿಯ ಮೋತಿ ಹೋಟೆಲ್ ಶುಕ್ರವಾರ (04.12.2012) ✅ತನ್ನ ಗ್ರಾಹಕರಿಗೆ ಕೊನೆ ಸೇವೆ ನೀಡಿತು.

1973ರಲ್ಲಿ ವೆಂಕಟಾಚಲಯ್ಯ ಸಹೋದರರಲ್ಲಿ ಒಬ್ಬರಾದ ಎಂ.ಎಸ್.ನಾಯಕ ಹಾಸನ ನಗರದ ಹೃದಯಭಾಗವಾದ ಹಳೇ ಬಸ್‌ನಿಲ್ದಾಣ ರಸ್ತೆಯಲ್ಲಿ ಮೋತಿ ಹೋಟೆಲ್ ಆರಂಭಿಸಿದ್ದರು. ಆಗಿನ ಕಾಲದಲ್ಲಿ 25 ಪೈಸೆಗೆ ಕಾಫಿ/ಟೀ 30 ಪೈಸೆಗೆ ಖಾಲಿ ದೋಸೆ ಸಿಗುತ್ತಿತ್ತು

ಈ ಹೋಟೆಲ್‌ಗೆ ನಗರ ಹಾಗೂ ಗ್ರಾಮೀಣ ಭಾಗದ ಜನರು ಅಭಿಮಾನಿಗಳೂ ಇದ್ದಾರೆ

ಬಿಸಿಬೇಳೆ ಬಾತ್ ರುಚಿ ಇಂದಿಗೂ ನಾಲಿಗೆ ಚಪ್ಪರಿಸುವಂತದ್ದು – ಗ್ರಾಹಕ

ಜನರಿಂದ ತುಂಬಿ ತುಳುಕುತ್ತಿರುತ್ತಿತ್ತು. ಬೆಳಗ್ಗೆ 6ರಿಂದ ರಾತ್ರಿ 9 ಗಂಟೆಯವರೆಗೂ ಮೋತಿ ಹೋಟೆಲ್ ಸದಾ ಜನಜಂಗುಳಿಯಿಂದ ಕೂಡಿರುತ್ತಿತ್ತು. ಎಷ್ಟೇ ರಷ್ ಇದ್ದರು ಹೋಟೆಲ್‌ಗೆ ಬಂದು ಒಂದು ಗಂಟೆ ಕಾದು ಕುಳಿತಾದರೂ ದೋಸೆ ತಿಂದೇ ಹೋಗುತ್ತಿದ್ದರು. ಲಾಕ್. ಡೌನ್ ಹಿನ್ನೆಲೆಯಲ್ಲಿ ಮೂರು ತಿಂಗಳಿಗೂ ಹೆಚ್ಚು ಕಾಲ ಬೀಗಮುದ್ರ ಬಿದ್ದಿದ್ದು ಇತ್ತೀಚೆಗೆ ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಹೊಟೇಲ್‌ಗೆ ಬರುವರ ಸಂಖ್ಯೆ ಇಳಿಮುಖವಾಗಿತ್ತು

ಹಾಸನದ ಮೋತಿ ಹೋಟೆಲ್ ಮಸಾಲೆ ದೋಸೆ ..
ಸ್ಪೆಶಲ್ ಏನು ಅಂದ್ರೆ ಚಟ್ನಿ ಮುಗಿತಿದ್ದಂಗೆ ಅವರೇ ಬಂದು ನೋಡಿ ಚಟ್ನಿ ಹಾಕೋದು. 😊

ಮೋತಿ ಮಹಲ್ ಹೋಟೆಲ್ , ಹಾಸನ ದಲ್ಲಿ 1971ರಲ್ಲಿ ಒಂದು ದೋಸೆ ಬೆಲೆ 50 ಪೈಸೆ. 2 ದೋಸೆಗೆ 1 ರೂಪಾಯಿ. 2 ಕಪ್ ಕಾಫಿಗೂ ಒಂದೇ ರೂಪಾಯಿ. ಅಂದರೆ ದೋಸೆ ಮತ್ತು ಕಾಫಿ ಬೆಲೆ ಸಮಾನವಾಗಿತ್ತು. ಈ ಬಿಲ್ ನೋಡಿ ಇದರಲ್ಲಿ ವಿಶೇಷ ಇದೆ. 2 ದೋಸೆ ಮತ್ತು 2 ಕಾಫಿ

ಕೇವಲ ಊಟ, ತಿಂಡಿಗಷ್ಟೆ ಜನ ಇಲ್ಲಿಗೆ ಬರುತ್ತಿರು ಎಂದರೆ ಸಣ್ಣ ಮಾತು!!, ನಮ್ಮ ಹಾಸನ ಜಿಲ್ಲೆಯ ಸುತ್ತಮುತ್ತಲ ಜನ ತಮ್ಮ ವ್ಯಾಪಾರ ವಹಿವಾಟಿನ ತಮ್ಮ ಕೌಟುಂಬಿಕ ಸಂಭ್ರಮದ ವಸ್ತು ಕೊಳ್ಳುವ ಮುನ್ನ ಅಥವಾ ಕೊಂಡ ನಂತರ ಕಾರ್ಯಕ್ರಮವನ್ನು ಹೇಗೆ ಆಚರಿಸಬೇಕೆಂದು ಚರ್ಚಿಸುತ್ತಿದ್ದರು , ಇದೇ ಹೋಟೆಲ್‌ನಲ್ಲಿ ಕುಳಿತೇ ಅದೆಷ್ಟೋ ದೊಡ್ಡ ಲಿಟಿಕೇಷನ್ ಪರಿಹಾರವಾಗಿರಬಹುದು . , ಚರ್ಚೇ ಹರಟೆ ಇರಲಿ ಮೋತಿ ಹೋಟೆಲ್‌ಗೆ ಹೋಗಿ ಮಾತಾಡೋಣ ಅಂತೇಳಿ ವ್ಯವಹಾರ ಮಾಡುತ್ತಾ ಕುಳಿತುಕೊಳ್ಳೋದು. ಮೋತಿ ಹೋಟೆಲ್ ಲ್ಯಾಂಡ್ ಮಾರ್ಕ್ ಆಗಿ ಹೆಚ್ಚು ಚಿರಪರಿಚಿತವಾಗಿತ್ತು

– ಗ್ರಾಹಕ

” ಇಷ್ಟು ವರ್ಷ ನಡೆಸಿಕೊಂಡು ಬಂದು ಮಾತ್ರ ಇದೀಗ ಹೋಟೆಲ್ ಮುಚ್ಚಬೇಕೆಂದರೆ. ನಮಗೂ ತುಂಬಾ ಬೇಸರವಾಗುತ್ತಿದೆ. ಇಷ್ಟು ದಿನ ನಮ್ಮ ಹಾಸನ ಜನತೆ ಸಹಕರಿಸಿ, ಪ್ರೋತ್ಸಾಹಿಸಿದ ಗ್ರಾಹಕರಿಗೆ ನನ್ನ ಮನದಾಳದ ಕೃತಜ್ಞತೆ ಗಳು ” !!

– ನಾರಾಯಣ ರಾವ್ ಪುತ್ರ ಗೋಪಿಕೃಷ್ಣ (ಮಾಲೀಕರು ಮೋತಿ ಹೋಟೆಲ್ , ಹಾಸನ

LEAVE A REPLY

Please enter your comment!
Please enter your name here