ಹಾಸನ: ರಾಜ್ಯ ಸರ್ಕಾರ ಪ್ರಸಕ್ತ ಬಜೆಟ್ ನಲ್ಲಿ ಘೋಷಿಸಿದಂತೆ ಜಿಲ್ಲೆಯಲ್ಲೂ ನಮ್ಮ ಕ್ಲಿನಿಕ್ ಸ್ಥಾಪನೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದೆ.
ಜಿಲ್ಲೆಗೆ 5 ನಮ್ಮ ಕ್ಲಿನಿಕ್ ಮಂಜೂರಾಗಿದ್ದು, ಬೇಲೂರು, ಸಕಲೇಶಪುರ, ಹೊಳೆನರಸೀ ಪುರ ತಾಲೂಕುಗಳಲ್ಲಿ ತಲಾ ಒಂದು, ಚನ್ನರಾಯಪಟ್ಟಣ ತಾಲೂಕಿನಲ್ಲಿ ಎರಡು ನಮ್ ಕ್ಲಿನಿಕ್ ಸ್ಥಾಪನೆ ಆಗಲಿವೆ.
ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಅನುಷ್ಠಾನಕ್ಕೆ ಆರೋಗ್ಯ ಇಲಾಖೆ ಸಕಲ ಸಿದ್ಧತೆ
ಮಾನದಂಡವೇನು: 30 ಸಾವಿರಕ್ಕೂ ಅಧಿಕ ಮುಖ್ಯವಾಗಿ ಕೊಳೆಗೇರಿಗಳು, ಕಾರ್ಮಿಕ ಸ್ಥಳಗಳು, ವ್ಯಾಪಾರಿ ಸ್ಥಳ ಸೇರಿ ಹೆಚ್ಚಿನ ಜನಸಂದಣಿ ಪ್ರದೇಶಗಳಲ್ಲಿ ನಮ್ಮ ಕ್ಲಿನಿಕ್ ಸ್ಥಾಪಿಸಲು ಸರ್ಕಾರ ನಿರ್ದೇಶಿಸಿದೆ. ಇವು ನಗರ ಪ್ರಾಥಮಿಕ ಆರೋಗ್ಯ ಉಪ ಕೇಂದ್ರಗಳಾಗಿ ಕಾರ್ಯ ನಿರ್ವಹಿಸಲಿವೆ. ಈಗಾಗಲೇ ಜಿಲ್ಲೆಯಲ್ಲಿ ನಾಲ್ಕು
ನಗರ ವ್ಯಾಪ್ತಿಯಲ್ಲಿ ಮೂರು, ಅರಸೀಕೆರೆಯಲ್ಲಿ ಒಂದು ಇದ್ದು, ಇವುಗಳನ್ನು ಹೊರತು ಪಡಿಸಿ ಉಳಿದ ಕಡೆಗಳಲ್ಲಿ 5 ನಮ್ಮ ಕ್ಲಿನಿಕ್ ಆರಂಭಿಸಲು ಅನುಮತಿ ದೊರೆತಿದೆ. 15ನೇ ಹಣಕಾಸು
ಯೋಜನೆಯಡಿ ಈ ಕಾರ್ಯಕ್ರಮ ಮುಂದುವರಿಯಲಿದೆ.
ನಮ್ಮ ಕ್ಲಿನಿಕ್ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಉಚಿತ ಔಷಧಿ ವಿತರಣೆ ಸೇವೆ ನೀಡುತ್ತದೆ. 12 ರೀತಿಯ ಆರೋಗ್ಯ ಸೇವೆ ಮತ್ತು 14 ವಿಧದ ಪ್ರಯೋಗಗಳನ್ನು ಇಲ್ಲಿ ನಡೆಸಲಾಗುತ್ತದೆ. ಬೆಳಗ್ಗೆ 9 ರಿಂದ ಸಂಜೆ 4.30 ರವರೆಗೆ ನಮ್ಮ ಕ್ಲಿನಿಕ್ಗಳು ಕಾರ್ಯಾನಿರ್ವಹಿಸುತ್ತವೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದವರಿಗೆ ಇ-ಸಂಜೀವಿನಿ ಹಾಗೂ ಟೆಲಿ ಕೌನ್ಸೆಲಿಂಗ್ ವ್ಯವಸ್ಥೆ ಕೂಡ ಲಭ್ಯವಿರುತ್ತದೆ. ಬಡವರ ಆರೋಗ್ಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಮನೆ ಬಾಗಿಲಲ್ಲೇ ಬಡ ಜನರು, ತಾಯಿ- ಮಕ್ಕಳಿಗೆ ಆರೋಗ್ಯ ಸೇವೆ ನೀಡುವುದು ಯೋಜನೆಯ ಪ್ರಮುಖ ಉದ್ದೇಶ.
ಜನಸಂಖ್ಯೆ ಇರುವ ನಗರ ಪ್ರದೇಶಗಳಲ್ಲಿ ನಮ್ಮ ಕ್ಲಿನಿಕ್ ಆರಂಭಗೊಳ್ಳಲಿವೆ. ಈ ಹಿಂದೆ ನಗರ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಅರ್ಬನ್ ಪ್ರೈಮರಿ ಹೆಲ್ತ್ ಸೆಂಟರ್ (ಯುಪಿಎಸ್‌ಸಿ) ಇರುವ ನಗರಗಳನ್ನು ಬಿಟ್ಟು, ಯುಪಿಎಸ್‌ಸಿಗಳಿವೆ. ಈ ಪೈಕಿ ಹಾಸನ ಸಿಬ್ಬಂದಿ ವಿವರ: ಒಂದೊಂದು ನಮ್ಮ ಸ್ವಾಫ್ ನರ್ಸ್, ಒಬ್ಬರು ಲ್ಯಾಬ್ ಕಾರ್ಯನಿರ್ವಹಿಸಲಿದ್ದಾರೆ.
-ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಕ್ಲಿನಿಕ್‌ನಲ್ಲಿ ಒಬ್ಬರು ವೈದ್ಯರು, ಒಬ್ಬರು ಟೆಕ್ನಿಷಿಯನ್ ಮತ್ತು ಡಿ ಗ್ರೂಪ್ ಸಿಬ್ಬಂದಿ ಇರುತ್ತಾರೆ
ಜಿಲ್ಲೆಯಲ್ಲಿ ಹಾಲಿ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಹೊರತು ಪಡಿಸಿ 15 ಸಮುದಾಯ ಆರೋಗ್ಯ ಕೇಂದ್ರ ಹಾಗೂ 135 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಇವುಗಳ ಜೊತೆಗೆ ನಮ್ಮ ಕ್ಲಿನಿಕ್‌ನ್ನೂ ಆರಂಭಿಸಿ ಜನರಿಗೆ ಉಚಿತವಾಗಿ ತುರ್ತು ಮತ್ತು ಗುಣಮಟ್ಟದ ಚಿಕಿತ್ಸೆ ನೀಡುವುದು ಸರ್ಕಾರದ ಉದ್ದೇಶವಾಗಿದೆ. ಪ್ರತಿ ನಮ್ಮ ಕ್ಲಿನಿಕ್‌ಗೆ ರಾಜ್ಯ ಸರ್ಕಾರ 36 ಲಕ್ಷ ರೂ. ಅನುದಾನ ನೀಡಲಿದೆ. ಈಗಾಗಲೇ ಸರ್ಕಾರ ಹಣ ಬಿಡುಗಡೆ ಮಾಡಿದೆ. ಈ ಹಣದಲ್ಲಿ ಸಿಬ್ಬಂದಿ ವೇತನ, ಕ್ಲಿನಿಕ್ ನಿರ್ವಹಣೆ, ನಮ್ಮ ಕ್ಲಿನಿಕ್ ಖಾಸಗಿ ಕಟ್ಟಡದಲ್ಲಿದ್ದರೆ ಅದರ ಬಾಡಿಗೆಯನ್ನೂ ನಿರ್ವಹಣೆ ಮಾಡಬೇಕಾಗುತ್ತದೆ.
ನಮ್ಮ ಕ್ಲಿನಿಕ್‌ನಲ್ಲಿ ಸಿಗುವ ಸೇವೆಗಳು: ಸಾಮಾನ್ಯ ಜ್ವರ, ನೆಗಡಿ, ಶೀತ ಸಂಬಂಧಿ ಸೇರಿ ಅಸಾಂಕ್ರಾಮಿಕ ಸಮಸ್ಯೆಯುಳ್ಳ ಹೊರರೋಗಿಗಳಿಗೆ ಸೇವೆ ದೊರೆಯಲಿವೆ.
ರಕ್ತ, ಮೂತ್ರ ಪರೀಕ್ಷೆ ಸೇರಿ ಸಾಮಾನ್ಯ ಪ್ರಯೋಗಾಲಯ ಸೇವೆ, ಉಚಿತ ಔಷಧ ವಿತರಣೆ, ಮಧುಮೇಹ, ರಕ್ತದೊತ್ತಡದಂತಹ ಸಾಮಾನ್ಯ ಆರೋಗ್ಯ ತಪಾಸಣೆ, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ರೋಗಿಗಳನ್ನು ಮೇಲಟದ ಸಂಸ್ಥೆಗಳಿಗೆ ಶಿಫಾರಸು ಮಾಡುವುದು. ಆರೋಗ್ಯ ಮಾಹಿತಿ, ಶಿಕ್ಷಣ ಮತ್ತು ಸಂವಹನ ಜಾಗೃತಿ ಚಟುವಟಿಕೆಗಳು ಒಳಗೊಂಡಿರುತ್ತವೆ.
ನಮ್ಮ ಕ್ಲಿನಿಕ್ ಸ್ಥಾಪನೆಗೆ ಕನಿಷ್ಠ 3 ಕೋಣೆಗಳು ಮತ್ತು ಮುಂಭಾಗದಲ್ಲಿ ಆವರಣ ಇರಬೇಕು, ನೀರು, ವಿದ್ಯುತ್ ಸೇರಿ ಮೂಲ ಸೌಕರ್ಯ ಇರಬೇಕು.
ಒಂದು ಕಟ್ಟಡಕ್ಕೆ ಮಾಸಿಕ 50 ಸಾವಿರದವರೆಗೆ ಬಾಡಿಗೆ ಪಾವತಿಸಬಹುದು ಎಂದು ಸರ್ಕಾರ ತಿಳಿಸಿದೆ. ಅದರಂತೆ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೀಠೋಪಕರಣ, ಹಾಸಿಗೆ ಮತ್ತು ಅಗತ್ಯ ಸೌಕರ್ಯ
ವ್ಯವಸ್ಥೆ ಮಾಡಿಕೊಳ್ಳುತ್ತಿದ್ದು,
ವೈದ್ಯರು ಹಾಗೂ ಇತರೆ ಸಿಬ್ಬಂದಿ ನೇಮಕಕ್ಕೆ ಈಗಾಗಲೇ ಸಂದರ್ಶನವನ್ನೂ ನಡೆಸಿದೆ.