ಬೇಲೂರು-ಬಿಳಿಕೆರೆ(ಮೈಸೂರು) ಚನ್ನರಾಯಪಟ್ಟಣ-ಮಾಕುಟ್ಟ(ಕೇರಳ) ಚತುಷ್ಪತ ರಸ್ತೆಗೆ ಅನುಮತಿ

0

ಬೇಲೂರಿನಿಂದ ಬಿಳಿಕೆರೆವರೆಗಿನ ಹೆದ್ದಾರಿಯಲ್ಲಿ, ಹಾಸನದಿಂದ ಹೊಳೆನರಸೀಪುರದವರೆಗೆ (ಯಡೆಗೌಡನಹಳ್ಳಿ) ಮಾತ್ರ ಚತುಷ್ಪಥ ರಸ್ತೆ ನಿರ್ಮಾಣವಾಗಿದ್ದು, ಬೇಲೂರು-ಹಾಸನ, ಹೊಳೆನರಸೀಪುರ-ಬಿಳಿಕೆರೆ ಮಾರ್ಗವನ್ನೂ ಚತುಷ್ಪಥವಾಗಿಸುವ ಕಾಮಗಾರಿಗೆ ಟೆಂಡರ್ ಕರೆಯಲು ಒಪ್ಪಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಒಪ್ಪಿಗೆ ನೀಡಿದ್ದು … ಹೊಳೆನರಸೀಪುರ ದಿಂದ ಮೈಸೂರು ಜಿಲ್ಲೆಯ ಬಿಳಿಕೆರೆ ವರೆಗೂ ರಸ್ತೆ ಅಗಲೀಕರಣಗೊಂಡು ಚತುಷ್ಪತ ರಸ್ತೆ ನಿರ್ಮಾಣವಾಗಲಿದೆ

ಇನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ದಿಂದ , via ಅರಕಲಗೂಡು ನಿಂದ , ಕೊಡಗು ಜಿಲ್ಲೆಯ ಶನಿವಾರಸಂತೆ, ಸೋಮವಾರ ಪೇಟೆ, ಮಡಿಕೇರಿ, ವಿರಾಜಪೇಟೆ ಮೂಲಕ ಮಾಕುಟ್ಟದ ಬಳಿ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಬರೋಬ್ಬರಿ 183 K.M. ಹೆದ್ದಾರಿ ನಿರ್ಮಾಣ ಯೋಜನೆಗೆ ನಿತಿನ್ ಗಡ್ಕರಿ ಅಂತಿಮ ಒಪ್ಪಿಗೆ ನೀಡಲು ಸಮ್ಮತಿಸಿದ್ದು , ಈ ಮಾರ್ಗಕ್ಕೆ 1,600 ಕೋಟಿ ₹ ವೆಚ್ಚವಾಗಲಿದ್ದು ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ಉನ್ನತ ಮೂಲಗಳ ಮಾಹಿತಿ ದೊರತಿದೆ‌. ಚನ್ನರಾಯಪಟ್ಟಣ – ಮಾಕುಟ್ಟ ಕೇರಳಕ್ಕೆ ಸಂಪರ್ಕ ವಿಸ್ತಾರವಾದಲ್ಲಿ ಬೆಂಗಳೂರಿಗರು , ಹಾಸನಿಗರು ಹಾಗೂ ಸುತ್ತಮುತ್ತಲಿನ ಬಹುತೇಕ ಜಿಲ್ಲೆಯವರು ಈ ಭಾಗದಲ್ಲಿ ಕಡಿಮೆ ಅವಧಿಯಲ್ಲಿ ಕೇರಳ ತಲುಪಲು ಸಹಕಾರಿ ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here