ಹಾಸನ ಜಿಲ್ಲೆಯಾದ್ಯಂತ ದಿನಾಂಕ:09/09/2021 ರಂದು ಸಂಜೆ 5:00 ಗಂಟೆಯಿಂದ ದಿನಾಂಕ:11/09/2021 ರಂದು ಬೆಳಗ್ಗೆ 5:00 ಗಂಟೆವರೆಗೆ ಎಲ್ಲಾ ಬಗೆಯ ಮದ್ಯ ಹಾಗೂ ಅಮಲು ಪಾನೀಯಗಳ ಸೇವನೆಯನ್ನು ಸರ್ಕಾರಿ ಹಾಗೂ ಖಾಸಗಿ ಮದ್ಯ ಅಂಗಡಿಗಳಲ್ಲಿ, ಡಾಬಾಗಳಲ್ಲ, ಬಾರುಗಳಲ್ಲಿ, ಹೊಟೇಲ್‌ಗಳಲ್ಲಿ, ರೆಸ್ಟೋರೆಂಟ್‌ಗಳಲ್ಲ, ಮದ್ಯ ಮಾರಾಟ ಮಾಡುವುದನ್ನು ಹಾಗೂ ಮದ್ಯ ಸಾಗಾಟ ಮತ್ತು ಸರಬರಾಜು ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ದಿನಾಂಕ:11/09/2021 ರಿಂದ 13/09/2021ರ ಬೆಳಗ್ಗೆ 5:00 ಗಂಟೆಯವರೆಗೆ ವಾರಾಂತ್ಯದ ಕರ್ಥ್ಯ ಜಾರಿಯಲ್ಲಿರುತ್ತದೆ. ಸದರಿ ಅವಧಿಯಲ್ಲಿ ಎಲ್ಲಾ ಮದ್ಯದಂಗಡಿಗಳು ಮತ್ತು ಔಟ್‌ಲೆಟ್‌ಗಳು ಬೆಳಗ್ಗೆ 5:00 ರಿಂದ ಮಧ್ಯಾಹ್ನ 2:00 ಗಂಟೆಯವರೆಗೆ ಪಾರ್ಸಲ್ ತೆಗೆದುಕೊಂಡು ಹೊಗಲು ಮಾತ್ರ ಅನುಮತಿ ನೀಡಲಾಗಿದೆ .
ದಿನಾಂಕ:09/09/2021 ಮತ್ತು 10/09/2021 ರಂದು ಜಿಲ್ಲೆಯಲ್ಲಿ ಗೌರಿ-ಗಣೇಶ ಹಬ್ಬವನ್ನು ಆಚರಣೆ ಮಾಡಲಾಗುತ್ತಿದ್ದು, ಗಣೇಶ ಮೂರ್ತಿಯ ಪ್ರತಿಷ್ಠಾಪಣೆ ಸ್ಥಳದಲ್ಲಿ ಮತ್ತು ವಿಸರ್ಜನಾ ಕಾರ್ಯಕ್ರಮದ ವೇಳೆಯಲ್ಲಿ ಮದ್ಯಪಾನ ಸೇವನೆ ಮಾಡಿ ಅನ್ಯ ಧರ್ಮಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುವಂತೆ ಘೋಷಣಿಗಳನ್ನು ಕೂಗುವುದು ಹಾಗೂ ಅನುಚಿತವಾಗಿ ವರ್ತಿಸಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆಯಿರುತ್ತದೆ. ಈ ಸಂಬಂಧ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಮುನ್ನೆಚ್ಚರಿಕೆ ಕ್ರಮವಾಗಿ ಹಾಸನ ಜಿಲ್ಲೆಯಾದ್ಯಂತ ಅನ್ವಯಿಸುವುವಂತೆ ಆದೇಶಿಸಲಾಗಿದೆ.