ಹಾಸನ / ಬೆಂಗಳೂರು : ನಿಮಗೆ ಗೊತ್ತಿರುವಂತೆ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳ 2016ರ ಮಾರ್ಚ್ 11ರಿಂದಲೇ ನಿಷೇಧಿಸಲಾಗಿತ್ತು., ಸಾರ್ವಜನಿಕ ವಲಯದಲ್ಲಿ ರೀಟೈಲ್ ಮಾರುಕಟ್ಟೆಯಲ್ಲಿ ಮಾತ್ರ ದಂಡಗಳು ಹೆಚ್ಚು ಬೀಳುತ್ತಿತ್ತು , ಇದರಿಂದ ಸಾರ್ವಜನಿಕ ವಲಯದಲ್ಲೂ ತೀವ್ರ ಆಕ್ರೋಶಕ್ಕೆ ಒಳಗಾಗಿತ್ತು , ಮೊದಲು ಏಕ ಬಳಕೆ ಪ್ಲಾಸ್ಟಿಕ್ ಬಳಸುವ ಕಾರ್ಖಾನೆಗಳ ಉತ್ಪನ್ನಿ ನಿಲ್ಲಿಸಿ ಎಂದು ., ಇದೀಗ ಜೂನ್ 30ರೊಳಗೆ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳ ದಾಸ್ತಾನು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಲು ಸಂಬಂಧಿಸಿದ ಘಟಕಗಳಿಂದ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಎಲ್ಲಾ ಇ-ಕಾಮರ್ಸ್ ಕಂಪನಿಗಳ ವೆಬ್ಸೈಟ್ನಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಮತ್ತು ಪ್ರದರ್ಶನ ಜಾಹೀರಾತುಗಳನ್ನು ಜುಲೈ 1ರಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದ್ದು ., ಕೈಗಾರಿಕೆಗಳು, ಮಾಲ್ಗಳು, ಮಾರುಕಟ್ಟೆ, ವಾಣಿಜ್ಯ ಕೇಂದ್ರ, ಸಿನಿಮಾ ಹಾಲ್, ಪ್ರವಾಸಿ ತಾಣ, ಶಾಲೆ–ಕಾಲೇಜುಗಳು, ಕಚೇರಿಗಳು, ಆಸ್ಪತ್ರೆಗಳು , ಅಂಗಡಿ ವಹಿವಾಟಿನಲ್ಲಿ ಮತ್ತು ಇತರೆ ಸಂಸ್ಥೆಗಳು ಈ ಆದೇಶ ಉಲ್ಲಂಘಿಸಿದರೆ, ಈ ಕೆಳಕಂಡ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಳ್ಳುವುದು ಪ್ರತಿ ಟನ್ಗೆ ₹5 ಸಾವಿರದಂತೆ ದಂಡ ವಿಧಿಸಲಾಗುವುದು , ಜೊತೆಗೆ ಅಂತಹ ಕೈಗಾರಿಕೆಗಳನ್ನು ಮುಚ್ಚುವ ಆದೇಶ ನೀಡಲಾಗುವುದು.
ಜುಲೈ 1 ಇಂದಿನಿಂದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಪ್ಲಾಸ್ಟಿಕ್ ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್, ಪ್ಲೇಟ್ಗಳು, ಧ್ವಜಗಳು, ಕಪ್ಗಳು, ಸ್ಪೂನ್ಗಳು, ಅಂಟಿಕೊಳ್ಳುವ ಫಿಲ್ಮ್, ದಪ್ಪದ ಡೈನಿಂಗ್ ಟೇಬಲ್ನಲ್ಲಿ ಹರಡಲು ಬಳಸುವ ಹಾಳೆಗಳು, ಸ್ಟ್ರಾಗಳು, ಥರ್ಮಾಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಮಣಿಗಳಿಂದ ಮಾಡಿದ ವಸ್ತುಗಳ ಖರೀದಿ , ಮಾರಾಟ , ಬಳಸುವಿಕೆ ಸಂಪೂರ್ಣ ನಿಷೇಧ ನೆನಪಿರಲಿ .
-ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ ಪರಿಸರ ಇಲಾಖೆ
ಪರಿಸರ ಉಳಿವಿಗಾಗಿ ಏಕಬಳಕೆ ಪ್ಲಾಸ್ಟಿಕ್ ಬಳಸದಿರಿ , ನಿಮ್ಮ ಸಹಾಯ ಮುಂದಿನ ನೈಸರ್ಗಿಕ ಸಂಪನ್ಮೂಲಗಳ ಕಾಪಾಡಲು