ಆಕ್ಸಿಜನ್ ಆನ್ ವ್ಹೀಲ್ಸ್

0

ಹಾಸನ/ಬೇಲೂರು :
• ಕೊರೊನಾ ಸೋಂಕಿತರಿಗೆ ಸಹಾಯವಾಗುವ ಉದ್ದೇಶದಿಂದ ILF (ಇಂಟರ್‌ನ್ಯಾಷನಲ್ ಲಿಂಗಾಯತ ಫೋರಂ) ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮೂಲಕ ಆಕ್ಸಿಜನ್ ಆನ್ ವ್ಹೀಲ್ಸ್ ಸೇವೆ ಇಂದಿನಿಂದ ಬೇಲೂರಿನಲ್ಲಿ ಸೇವೆ ಆರಂಭಿಸಿದೆ

ಅಂದಾಜು 1.5 ಲಕ್ಷ ವೆಚ್ಚದಲ್ಲಿ KSRTC ಬಸ್‍ಗೆ 2 ಆಮ್ಲಜನಕ ಸಿಲಿಂಡರ್, 6ರೋಗಿಗೆ ಅಳವಡಿಸಲು ಬೇಕಾಗುವ ವೈದ್ಯಕೀಯ ಉಪಕರಣ, ಸೀಟಿನ ವ್ಯವಸ್ಥೆ ನೀವಿಲ್ಲಿ ಕಾಣಬಹುದು

• ಚಲಿಸುವ ಬಸ್ ನಲ್ಲು ಆಮ್ಲಜನಕ ಕೊರತೆಯಿಂದ ಬಳಲುವ ರೋಗಿಗಳಿಗೆ ನರ್ಸ್‌ ಒಬ್ಬರು ಈ ಬಸ್ ನಲ್ಲೇ ಆಕ್ಸಿಜನ್ ಅಳವಡಿಸಲು ನೆರವಿಗೆ ಬರಲಿದ್ದಾರೆ

ದೂರದ ಹಳ್ಳಿ ಗಳಿಂದ ಆಸ್ಪತ್ರೆ ಸೇರುವ ವರೆಗೆ ರೋಗಿಗೆ ಯಾವುದೇ ತೊಂದರೆಯಾಗದಂತೆ ನಿಗಾ ವಹಿಸಿ / ನಿಗದಿತ ಆಸ್ಪತ್ರೆಯಲ್ಲಿ ಬೆಡ್ ಸಮಸ್ಯೆಯಿದ್ದರೆ ಬಸ್‍ನಲ್ಲೇ ಸೋಂಕಿತರಿಗೆ ಚಿಕಿತ್ಸೆ ನೀಡಿ ಜೀವ ಉಳಿಸಬಹುದು

KSRTC ಹಾಸನ ವಿಭಾಗ ದಿಂದ ಮುಂದಿನ ದಿನಗಳಲ್ಲಿ ಇನ್ನು ಹಕವು ಬಸ್‍ಗಳ ಕೋವಿಡ್ ಕಾರ್ಯಕ್ಕೆ ವಿನಿಯೋಗಿಸಲು ಸಹಕರಿಸಲಿದೆ ಎಂದು ಹಾಸನ KSRTC DC ರಾಜೇಶ್ ಶೆಟ್ಟಿ ತಿಳಿಸಿದರು

ಇದಕ್ಕೆ ಬೇಕಾದ ನೆರವನ್ನು ಹಾಸನ ಜಿಲ್ಲೆಯ ಆರೋಗ್ಯ ಇಲಾಖೆಯ DHO , THO ಸಹಕರಿಸಲಿದ್ದಾರೆ

• ಕಳೆದ ವರ್ಷ ಚನ್ನರಾಯಪಟ್ಟಣ ವ್ಯಾಪ್ತಿಯಲ್ಲಿ ಗಂಟಲು ದ್ರವ ಮಾದರಿ ಪರೀಕ್ಷಾ KSRTC ಕಾರ್ಯಕ್ಕೆ ನಿಯೋಜನೆ ಗೊಂಡಿದ್ದು ಯಶಸ್ವಿ ಯಾಗಿದ್ದು ನೆನಪಿಸಿಕೊಳ್ಳಬಹುದು

ಬೇಲೂರು-ಐಎಲ್‍ಎಫ್ ಸಂಸ್ಥೆ , ಕೆಎಸ್‍ಆರ್‌ಟಿಸಿ ವಿಭಾಗಿಯ ತಾಂತ್ರಿಕ ಅಧಿಕಾರಿ ಕೆ. ನಂದಕುಮಾರ್ , ಹಾಸನ

LEAVE A REPLY

Please enter your comment!
Please enter your name here