” ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ನಾಶ ಮಾಡುತ್ತಿದ್ದು, ಹಸಿರು ಭೂಮಿಯನ್ನು ಅಭಿವೃದ್ಧಿ ಪಡಿಸುವುದು ನಮ್ಮ ಜವಾಬ್ದಾರಿ ” -ಕಾನೂನು ಸೇವಾ ಪ್ರಾಧಿಕಾರದ ಜಿಲ್ಲಾ ನ್ಯಾಯಾಧೀಶರಾದ ರವಿಕಾಂತ್

0

ಹಾಸನ:ಮಾ.11(ಹಾಸನ್_ನ್ಯೂಸ್ !, 
ನಗರದ ಹಾಸನಾಂಬ ಕಲಾಕ್ಷೇತ್ರಲ್ಲಿಂದು ಹಸಿರು ಪ್ರತಿಷ್ಠಾನ ವತಿಯಿಂದ ಹಸಿರು ಭೂಮಿಗಾಗಿ ಹಾಡು ಕರ್ನಾಟಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ನೀರಿಗೆ ಬಹಳ  ಆಹಾಕಾರವಿದೆ, ಕುಡಿಯುವ ನೀರನ್ನು ದುಡ್ಡು ಕೊಟ್ಟು ಕೊಂಡುಕೊಳ್ಳುತ್ತಿದ್ದೇವೆ. ನೀರು ಮತ್ತು ಹಸಿರು ನಮಗೆ ಬೇಕೆ ಬೇಕು ಹಾಗಾಗಿ ನಾವು ಪರಿಸರ ಸಂರಕ್ಷಣೆ ಮಾಡಬೇಕು ಎಂದು ತಿಳಿಸಿದರು.

ಭೂಮ್ತಾಯಿ ಬಳಗ ದೊಡ್ಡಬಳ್ಳಾಪುರ ಪ್ರಸಿದ್ಧ ಸಾಂಸ್ಕೃತಿಕ ಕಲಾ ತಂಡದಿಂದ ಪರಿಸರ ಜಾಗೃತಿ ಗೀತೆಗಳು ಹಾಗೂ ಹಳ್ಳಿ ಸೊಗಡಿನ ಹಾಡುಗಳನ್ನು ಹಾಡಿದರು.

ಈ ಕಲಾ ತಂಡವು ಹಾಡಿನ ಮೂಲಕ  ಸಾಮಾಜಿಕ, ಜಾಗತಿಕ ಹಾಗೂ ಸಮಕಾಲೀನ ವಿಷಯಗಳು ಬಗ್ಗೆ ಹಾಗೂ   ಪರಿಸರದ ಬಗ್ಗೆ  ಜಾಗೃತಿ ಮೂಡಿಸಿತು.

ಕಾರ್ಯಕ್ರಮ ದಲ್ಲಿ ಹಸಿರುಭೂಮಿ ಪ್ರತಿಷ್ಠಾನ ಸಂಸ್ಥೆ ಅಧ್ಯಕ್ಷರಾದ ಪುಟ್ಟಯ್ಯ,  ಪ್ರತಿಷ್ಠಾನದ ಪ್ರಮುಖರಾದ ಅರ್ .ಪಿ ವೆಂಕಟೇಶ್ ಮೂರ್ತಿ ,ಶಿವಸ್ವಾಮಿ ,ರಾಜೇಗೌಡ,   ಖ್ಯಾತ ಪ್ರಸೂತಿ ತಜ್ಞರಾದ  ಡಾ. ಸಾವಿತ್ರಿ. ಮಮತಾ ಪ್ರಭು. ಅಪರ ಪೋಲೀಸ್ ವರಿಷ್ಠಾಧಿಕಾರಿ ನಂದಿನಿ ,ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಡಾ ಹೆಚ್. ಎಲ್ ನಾಗರಾಜ್, ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್ ಎಂ .ಶಿವಣ್ಣ , ಅಹಮದ್ ಹಗರೆ  ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ  ಬಿ ಅರ್ ಉದಯ ಕುಮಾರ್ , ಜಿಲ್ಲಾ  ಗೈಡ್ಸ್  ಆಯುಕ್ತರಾದ ಕಾಂಚನ ಮಾಲಾ, ವಕೀಲರಾದ ಗಿರಿಜಾಂಬಿಕ,

ಚಿನ್ನೇನ ಹಳ್ಳಿ ಸ್ವಾಮಿ,ಭಾರತ ಸೇವಾ ದಳದ ವಿ.ಎಸ್ ರಾಣಿ, ಅಕಾಡಮಿ ಪ್ರಶಸ್ತಿ ಪುರಸ್ಕೃತ ಕಾಲಾವಿದರಾದ ಗ್ಯಾರಂಟಿ ರಾಮಣ್ಣ, ಹಸಿರು ಭೂಮಿ ಪ್ರತಿಷ್ಠಾನದ ಹಲವು ಪದಾಧಿಕಾರಿಗಳು ,ಪರಿಸರ ಸ್ನೇಹಿ ಸಂಘಟನೆಗಳ ಪ್ರಮುಖರು ವಿಚಾರವಂತರು ,ಸಾಹಿತಿಗಳು ಕಲಾವಿದರು   ಮತ್ತಿತರರು ಪಾಲ್ಗೊಂಡಿದ್ದರು.

ಇದೇ ವೇಳೆ ಮೂರುಗಂಟೆಗಳ ಕಾಲ ಪರಿಸರ  ಹಾಗೂ  ಜಲ ಜಾಗೃತಿ ಗೀತೆಗಳನ್ನು  ಹಾಡಿ  ಮೆಚ್ಚುಗೆಗಳಿಸಿದ  ಭೂಮ್ತಾಯಿ ಬಳಗದ ನಿರ್ಮಲಾ  ಮತ್ತು ತಂಡ ಕಲಾವಿದರನ್ನು ಹಸಿರು ಭೂಮಿ ಪ್ರತಿಷ್ಠಾನದ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here