ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಹಾಸನ, ಹಾಗೂ ಲಯನ್ ಕೆನಲ್ ಕ್ಲಬ್(ರಿ.)
ಇವರ ಸಹಯೋಗದಲ್ಲಿ
– ಹುಚ್ಚುನಾಯಿ ರೋಗ, ಬನ್ನಿ ತಡೆಗಟ್ಟೋಣ
ಉಚಿತ ರೇಬೀಸ್ ಲಸಿಕಾ ಕಾರ್ಯಕ್ರಮ ದಿನಾಂಕ: 15-09-2022 ರಿಂದ 30-09-2022 ರವರೆಗೆ
ರೇಬೇಸ್ (ಹುಚ್ಚುನಾಯಿ ರೋಗ) ಒಂದು ಅತಿ ಮುಖ್ಯವಾದ ಮಾರಣಾಂತಿಕ ರೋಗವಾಗಿದ್ದು ಸೂಕ್ತ ಮುಂಜಾಗ್ರತೆ ವಹಿಸಿ ಲಸಿಕೆ ಹಾಕಿಸುವುದರಿಂದ ಮಾತ್ರ ತಡೆಗಟ್ಟಬಹುದಾಗಿದೆ. ಈ ನಿಟ್ಟಿನಲ್ಲಿ ರೇಬೀಸ್ ರೋಗ ನಿಯಂತ್ರಣ ಕಾರ್ಯ ಕ್ರಮ ದಡಿ ದಿನಾಂಕ: 15-09-2022 ರಿಂದ ದಿನಾಂಕ:30-09-2022 ರವರೆಗೆ ಜಿಲ್ಲೆಯ ಎಲ್ಲಾ ಪಮವೈದ್ಯಕೀಯ ಸಂಸ್ಥೆಗಳಲ್ಲಿ ಉಚಿತವಾಗಿ ಸಾಕು ನಾಯಿ ಹಾಗೂ ಬೆಕ್ಕುಗಳಿಗೆ ರೇಬೀಸ್ ರೋಗಕ್ಕೆ ಲಸಿಕೆಯನ್ನು ಹಾಕಲಾಗುವುದು. ಸಾರ್ವಜನಿಕರು ಸ್ಥಳೀಯ ಪಶುವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಲು ಕೋರಿದೆ.
ಉಪ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳು, ಹಾಸನ