ಈ ಮುಂಚೆ ಮರ ನಶಿಸಿ ಹೋಗಿದ್ದ ಜಾಗದಲ್ಲಿ ಹೊಸ ಸಸಿ ನೆಟ್ಟರು

0

ಗೊರೂರಿನಲ್ಲಿ ಹಲವಾರು ವರ್ಷಗಳಿಂದ ಇದ್ದ ಮರಗಳು ಮಳೆ, ಗಾಳಿ, ನದಿ ನೀರಿನ ಸೆಳೆತಕ್ಕೆ ಸಿಲುಕಿ ಬಿದ್ದು ನಶಿಸಿ ಹೋಗಿದ್ದರಿಂದ ಇಂದು ಗೊರೂರಿನಲ್ಲಿ ಗೊರೂರು ಗ್ರಾಮ ಕ್ಷೇಮಾಭಿವೃದ್ಧಿ ಸಂಘ ಮತ್ತು ಗ್ರಾಮದ ಯುವಕರ ವತಿಯಿಂದ ವನ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ, . ಪರಿಸರ ಸಂರಕ್ಷಣೆಯ ಅಂಗವಾಗಿ, ಮರಗಳು ಬಿದ್ದಿದ್ದ ಮುಂಚಿನ ಸ್ಥಳದಲ್ಲಿ ಮತ್ತು ಊರಿನ ರಸ್ತೆಯ ಬದಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಎಲ್ಲ ಜಾತಿಯ ಗಿಡಗಳನ್ನು ನೆಡಲಾಯಿತು.

ಈ ಕಾರ್ಯಕ್ರಮಕ್ಕೆ ಗೊರೂರು ಆರಕ್ಷಕ ಠಾಣೆಯ ಉಪ ನೀರಿಕ್ಷಕರಾದ ಅಜಯ್ ಕುಮಾರ್ ಸರ್ ಮತ್ತು ಗ್ರಾಮದವರಾದ ನಿವೃತ್ತ DRDO ಅಧಿಕಾರಿಗಳಾದ ಕೆ ಶ್ರೀನಿವಾಸ್ ಮೂರ್ತಿ ದಂಪತಿಗಳು ಗಿಡನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು,ಯುವಕರು, ಗ್ರಾಮಸ್ಥರು ಭಾಗವಹಿಸಿದ್ದರು…

LEAVE A REPLY

Please enter your comment!
Please enter your name here