ಪೌರಕಾರ್ಮಿಕ ದಿನಾಚರಣೆ ಸಕಲೇಶಪುರ

0

ಸಕಲೇಶಪುರ

ಪೌರ ಕಾರ್ಮಿಕರು ಇಲ್ಲದ ಪಟ್ಟಣ ನರಕವೇ ಸರಿ ಎಂದ ತಹಶಿಲ್ದಾರರ್ ಜೈಕುಮಾರ್.

ಇಂದು ನಡೆದ ಪೌರ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮವನ್ನು ಪುರಸಭೆಯಲ್ಲಿ ಹಮ್ಮಿಕೊಂಡಿದ್ದು. ಈ ಕಾರ್ಯಕ್ರಮದಲ್ಲಿ ಸಮಾಜಕ್ಕೆ ಪೌರಕಾರ್ಮಿಕರ ಅತ್ಯವಶ್ಯಕತೆ ತಿಳಿಸಿಕೊಟ್ಟ ದಂಡಾಧಿಕಾರಿಗಳು.

ಈ ಸಂದರ್ಭದಲ್ಲಿ ಮಾತನಾಡಿದ ತಹಶಿಲ್ದಾರ್ ಜೈಕುಮಾರ್ ಮಾತನಾಡಿ ಪೌರ ಕಾರ್ಮಿಕರು ಪಟ್ಟಣದ
ಜೇವನಾಡಿಯಂತೆ. ತಾಯಿ ಮಕ್ಕಳನ್ನು ಸುಂದರವಾಗಿ ಇಡುವಂತೆ ಪೌರಕಾರ್ಮಿಕರು ಪಟ್ಟಣವನ್ನು ಸ್ವಚ್ಛವಾಗಿ ಇಡುತ್ತಾರೆ.
ಆರೋಗ್ಯದ ಹಂಗನ್ನು ತೊರೆದು ಎಲ್ಲರ ಆರೋಗ್ಯ ಕಾಪಾಡುತ್ತಾರೆ. ಪ್ರತೀಯೊಬ್ಬ ಕಾರ್ಮಿಕರು ಕೆಲಸದ ಅವಧಿಯಲ್ಲಿ ತಮ್ಮ ಕೈಗೆ ಕೈಚೀಲ ಬಳಸಿ ಕೆಲಸ ಮಾಡಬೇಕು. ಎಂದು ಹೇಳಿದ್ದರು.

ಏಕೆಂದರೆ ಪಟ್ಟಣದ ಶುಚಿತ್ವ ಕಾಪಾಡಿಕೊಳ್ಳುವದೃಷ್ಟಿಯಿಂದ ಕಾರ್ಮಿಕರು ತಮ್ಮ ಆರೋಗ್ಯ ಲೆಕ್ಕಿಸದೇ
ತಮ್ಮ ಜವಾಬ್ದಾರಿಯುತ ಸೇವೆಯನ್ನು ಮಳೆಗಾಲ. ಚಳಿಗಾಲದಲ್ಲಿ ಸಹಾ ಕರ್ತವ್ಯ ನಿರತರಾಗಿದ್ದು. ಸೇವೆ ಸಲ್ಲಿಸುತ್ತಾರೆ. ಇವರಿಗೆ ಮುಂದಿನ ದಿನಗಳಲ್ಲಿ
ಪ್ರೇಮ್ ನಗರದಲ್ಲಿ ಕಾರ್ಮಿಕರಿಗಾಗಿ ಮೀಸಲ್ಲಿಟ್ಟ
ಸ.ನಂ 128 ಒಂದುವರೆ ಎಕ್ಕರೆ ಪ್ರದೇಶವನ್ನು ಪೌರ ಕಾರ್ಮಿಕರ ವಸತಿ ಉದ್ದೇಶಕ್ಕಾಗಿ ಅನುಮೋದಿಸಿದ್ದು ಶೀಘ್ರವಾಗಿ ಪೌರ ಕಾರ್ಮಿಕರಿಗೆ ಹಂಚಿಕೆ ಮಾಡಲಾಗುವುದು ಎಂದು ಮಾನ್ಯ ದಂಡಾ ಅಧಿಕಾರಿಗಳಾದ ಜೈಕುಮಾರ್ ರವರು ನೆರೆದಿದ್ದ ಕಾರ್ಮಿಕರ ಸಮ್ಮುಖದಲ್ಲಿ ಆಶ್ವಾಸನೆ ನೀಡಿದ್ದರು.

ಈ ಸಂದರ್ಭದಲ್ಲಿ ಪುರಸಭಾ ಅದಯಕ್ಷರು ಕಾಡಪ್ಪ ಸದಸ್ಯರುಗಳಾದ ಮೋಹನ್ ಇಬ್ರಾಹಿಂ. ಮುಕೇಶ್ ಶೆಟ್ಟಿ. ಇನ್ನಿತರರು ಇದ್ದರು.

LEAVE A REPLY

Please enter your comment!
Please enter your name here