2021-22 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಮರು ಮೌಲ್ಯಮಾಪನದ ನಂತರ 625 ಅಂಕ ಗಳಿಸಿದ ಚನ್ನರಾಯಪಟ್ಟಣ ತಾಲ್ಲೂಕಿನ ಗೂರಮಾರನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ರಾಹುಲ್ ಕೆ ಅವರು ಮರು ಮೌಲ್ಯಮಾಪನದಲ್ಲಿ ಆಂಗ್ಲ ಭಾಷಾ ವಿಷಯದಲ್ಲಿ ಹೆಚ್ಚುವರಿಯಾಗಿ 2 ಅಂಕ, ಸಮಾಜ ವಿಜ್ಞಾನ ವಿಷಯದಲ್ಲಿ ಹೆಚ್ಚುವರಿಯಾಗಿ 5 ಅಂಕ ಗಳಿಸುವುದರೊಂದಿಗೆ 625 ಅಂಕ ಪಡೆದ ಸಾಧನೆ ಮಾಡಿದ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದಾನೆ
ಸದರಿ ವಿದ್ಯಾರ್ಥಿಯು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕು, ಬೂಕನಕೆರೆ ಹೋಬಳಿ ಕಟ್ಟಳ್ಳಿ ಗ್ರಾಮದ ಕೃಷಿಕ ದಂಪತಿಗಳಾದ ಸೋಮಶೇಖರ್ ಹಾಗೂ ಮಂಜುಳರವರ ಸುಪುತ್ರನಾಗಿದ್ದಾನೆ. ವಿದ್ಯಾರ್ಥಿಯ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಸೋಮನಾಥ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶ್ರೀ ಹಾಕಪ್ಪ ಲಮಾಣಿ, ಪ್ರಾಂಶುಪಾಲರಾದ ಶ್ರೀಮತಿ ಕಲ್ಪನಾ ಆರ್, ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ…..