19,340 ಅಡಿ ಎತ್ತರದ ಪರ್ವತ ಏರಿದ 63 ವರ್ಷದ ಹಾಸನದ ಮಹಿಳೆ!

0

ಬರೋಬ್ಬರಿ 19,341 ಅಡಿ ಎತ್ತರದ ಕಿಲಿಮಂಜಾರೋ ಪರ್ವತವನ್ನು ಕೇವಲ ಎಂಟು ದಿನಗಳಲ್ಲಿ ಪರ್ವತದ ಶಿಖರ ಏರಿದ್ದಾರೆ ಸ್ವರ್ಣಾಂಬ.

ಸಾಧನೆ ಮಾಡುವ ಛಲ ಒಂದಿದ್ರೆ ವಯಸ್ಸು ಕೇವಲ ಸಂಖ್ಯೆ ಮಾತ್ರ ಎಂಬ ಮಾತಿದೆ. ಈ ಮಾತಿಗೆ ತಾಜಾ ಉದಾಹರಣೆ ನಮ್ಮ ಹಾಸನ ಮೂಲದ ಈ ಮಹಿಳೆಯೇ ಸಾಕ್ಷಿ.

ಹಾಸನ ಮೂಲಕ ಸದ್ಯ ಅಮೇರಿಕಾ ನಿವಾಸಿ ಡಾ. ಸ್ವರ್ಣಾಂಬ ಲೋಕೇಶ್ ಅವರ ವಯಸ್ಸು 63. ವಯಸ್ಸಾಯ್ತು ಎಂದು ಸುಮ್ಮನೆ ಕೂರದ ಸ್ವರ್ಣಾಂಬ ಅವರು ತಾಂಜಾನಿಯಾದ ಕಿಲಿಮಂಜಾರೋ ಪರ್ವತ ಏರಿ ಸಾಧನೆ ಮಾಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಬರೋಬ್ಬರಿ 19,341 ಅಡಿ ಎತ್ತರದ ಕಿಲಿಮಂಜಾರೋ ಪರ್ವತವನ್ನು ಕೇವಲ ಎಂಟು ದಿನಗಳಲ್ಲಿ ಶಿಏರಿದ್ದಾರೆ ಸ್ವರ್ಣಾಂಬ.

ಈ ಮೂಲಕ ಹಿರಿಯ ನಾಗರಿಕರಿಗೆ ಫಿಟ್ನೆಸ್ ಕಾಪಾಡಿಕೊಳ್ಳಲು ಮತ್ತು ಸಕ್ರಿಯವಾಗಿ ಉಳಿಯಲು ಸಂದೇಶ ಸಾರಿದ್ದಾರೆ.

ಜೊತೆಗೆ ಸ್ವರ್ಣಾಂಬ ಅವರ ಮಗಳು ಸ್ನೇಹಾ ಪಾಳೇಗಾರ್, ಬೆಂಗಳೂರಿನ ಡಾ.ಶಿವರಾಮ್ ಎಚ್.ವಿ ಮತ್ತು ಅವರ ಮಗಳು ಚಂದನಾ ಸಹ ಕಿಲಿಂಜಾರೋ ಪರ್ವತ ಏರಿದ್ದಾರೆ.

ಚಿನ್ನದ ಪದಕ ವಿಜೇತೆ ಡಾ ಸ್ವರ್ಣಾಂಬ ಮಂಡ್ಯದ ಡಾ ಲೋಕೇಶ್ ಅವರನ್ನು ವಿವಾಹವಾಗಿದ್ದಾರೆ. ಹಲವಾರು ದೇಶಗಳಲ್ಲಿ ಸೇವೆ ಸಲ್ಲಿಸಿದ ನಂತರ ಅವರು ಇದೀಗ ಅಮೇರಿಕಾದಲ್ಲಿ ನೆಲೆ ನಿಂತಿದ್ದಾರೆ.

ಕಿಲಿಂಮಂಜಾರೋ ಪರ್ವತ ಏರಲು ಸತತ 6 ತಿಂಗಳು ಪೂರ್ವ ಸಿದ್ಧತೆ ನಡೆಸಿದ್ದೇವೆ. ಯೋಗ, ಜಿಮ್, ವಾಕಿಂಗ್ ಇತ್ಯಾದಿಗಳನ್ನು ಒಳಗೊಂಡಂತೆ ನಾನು ದಿನಕ್ಕೆ ಸುಮಾರು ಆರು ಗಂಟೆಗಳ ಕಾಲ ಕೆಲಸ ಮಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here