ನಮ್ಮ ಹಾಸನದ ವೆಂಕೋಬರಾವ್ ಅವರಿಗೆ 2020 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

  0

  ಪ್ರೊ. ನ ವೆಂಕೋಬರಾವ್
  ನಿವೃತ್ತ ಇತಿಹಾಸ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು ಬನುಮಯ್ಯ ಕಾಲೇಜು ಮೈಸೂರು

  ಹುಟ್ಟಿದ್ದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಾಂತರಾಜಪುರ ದಲ್ಲಿ.
  ತಂದೆ ವಿಜ್ಞಾನಿ ನಂಜಪ್ಪ ತಾಯಿ ಸುಂದರಮ್ಮ.
  ವಿದ್ಯಾಭ್ಯಾಸ ಪ್ರಾಥಮಿಕ ಕಾಂತರಾಜ ಪುರದಲ್ಲಿ ನಂತರ ಚನ್ನರಾಯಪಟ್ಟಣ ಚಿಂತಾಮಣಿ ದೊಡ್ಡಬಳ್ಳಾಪುರ ಹಾಗೂ ಮೈಸೂರಿನಲ್ಲಿ.

  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ

  ಗುರೂಜಿ ಗೋಳವಲ್ಕರ್ ,ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿ, ಶೇಷಾದ್ರಿ ಜಗನ್ನಾಥರಾವ್ ಜೋಶಿ, ಯಾದವರಾವ್ ಜೋಶಿ ಮುಂತಾದ ಗಣ್ಯರ ಜೊತೆ ಒಡನಾಟ ಹಾಗೂ ದೇಶ ಸೇವೆ.

  ಶ್ರೀಕಾಂತ ಕಾವ್ಯನಾಮದಲ್ಲಿ ಇವರು ಬರೆದ ಹಲವಾರು ಕಥೆಗಳು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಭೂಮಿ ಕಂಪಿಸಲಿಲ್ಲ ಎಂಬ ಕಥಾ ಸಂಕಲನ ಪ್ರಕಟಗೊಂಡಿದೆ .ಇವರ ಹಲವು ಕಥೆಗಳಿಗೆ ಪ್ರಜಾವಾಣಿ ಸ್ಪರ್ಧೆಯಲ್ಲಿ ಬಹುಮಾನ ದೊರೆತಿದೆ.
  ನಂತರ ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆಯಲ್ಲಿ ಹಲವಾರು ವಿಭಿನ್ನ ಸೇವಾಚಟುವಟಿಕೆ ಮಾಡುವ ಮೂಲಕ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ಲಯನ್ಸ್ ಸಂಸ್ಥೆ ಇವರಿಗೆ ಆಜೀವಷ ಗೌರವ ಸದಸ್ಯತ್ವ ನೀಡಿ ಗೌರವಿಸಿದೆ.
  ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಥಮ ರಾಷ್ಟ್ರೀಯ ಉಪಾಧ್ಯಕ್ಷ. ಹಾಗೂ ರಾಷ್ಟ್ರೋತ್ಥಾನ ಪರಿಷತ್ ಕಟ್ಟುವಲ್ಲಿ ಇವರ ಯೋಗದಾನವಿದೆ. ಆರೆಸ್ಸೆಸ್ ಪ್ರಕಟಿಸುವ ವಿಕ್ರಮ ಪತ್ರಿಕೆಯ ಉಪಸಂಪಾದಕರಾಗಿ ಯು ಇವರು ಸೇವೆ ಸಲ್ಲಿಸಿದ್ದಾರೆ.

  ಹಲವಾರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿರುವ ವೆಂಕೋಬರಾವ್ ಅವರಿಗೆ 2020 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

  LEAVE A REPLY

  Please enter your comment!
  Please enter your name here